ನವದೆಹಲಿ : ಹಲವಾರು ಭಾರತೀಯ ಸಂಸ್ಥೆಗಳು ಮತ್ತು ಪ್ರಜೆಗಳ ಮೇಲೆ ಇತ್ತೀಚೆಗೆ ಯುಎಸ್ ವಿಧಿಸಿದ ನಿರ್ಬಂಧಗಳಿಗೆ ವಿದೇಶಾಂಗ ಸಚಿವಾಲಯ ಶನಿವಾರ ಪ್ರತಿಕ್ರಿಯಿಸಿದೆ, ವಿದೇಶಾಂಗ ಸಚಿವಾಲಯದ (MEA) ವಕ್ತಾರರು ಭಾರತೀಯ ಕಂಪನಿಗಳು ಯಾವುದೇ ರಾಷ್ಟ್ರೀಯ ಕಾನೂನುಗಳನ್ನು ಉಲ್ಲಂಘಿಸಿಲ್ಲ ಎಂದು ಹೇಳಿದ್ದಾರೆ.
ಉಕ್ರೇನ್’ನಲ್ಲಿ ನಡೆಯುತ್ತಿರುವ ಯುದ್ಧದ ಮಧ್ಯೆ ತನ್ನ ಮಿಲಿಟರಿಯನ್ನ ಬೆಂಬಲಿಸಲು ರಷ್ಯಾಕ್ಕೆ ಸಾಮಗ್ರಿಗಳು ಮತ್ತು ತಂತ್ರಜ್ಞಾನವನ್ನ ಪೂರೈಸಿದ ಆರೋಪದ ಮೇಲೆ 19 ಭಾರತೀಯ ಕಂಪನಿಗಳು ಮತ್ತು ಇಬ್ಬರು ವ್ಯಕ್ತಿಗಳನ್ನ ಗುರಿಯಾಗಿಸಿಕೊಂಡು ಯುಎಸ್ ಸ್ಟೇಟ್ ಡಿಪಾರ್ಟ್ಮೆಂಟ್ ನಿರ್ಬಂಧಗಳನ್ನ ಘೋಷಿಸಿದೆ.
ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್, “ಯುಎಸ್ ನಿರ್ಬಂಧಗಳ ಬಗ್ಗೆ ನಾವು ವರದಿಗಳನ್ನು ನೋಡಿದ್ದೇವೆ. ಭಾರತವು ಕಾರ್ಯತಂತ್ರದ ವ್ಯಾಪಾರ ಮತ್ತು ಪ್ರಸರಣರಹಿತ ನಿಯಂತ್ರಣಗಳ ಬಗ್ಗೆ ದೃಢವಾದ ಕಾನೂನು ಮತ್ತು ನಿಯಂತ್ರಕ ಚೌಕಟ್ಟನ್ನು ಹೊಂದಿದೆ. ನಾವು ಮೂರು ಪ್ರಮುಖ ಬಹುಪಕ್ಷೀಯ ಪ್ರಸರಣ ರಹಿತ ರಫ್ತು ನಿಯಂತ್ರಣ ಆಡಳಿತಗಳ ಸದಸ್ಯರಾಗಿದ್ದೇವೆ – ವಾಸ್ಸೆನಾರ್ ವ್ಯವಸ್ಥೆ, ಆಸ್ಟ್ರೇಲಿಯಾ ಗುಂಪು ಮತ್ತು ಕ್ಷಿಪಣಿ ತಂತ್ರಜ್ಞಾನ ನಿಯಂತ್ರಣ ಆಡಳಿತ, ಮತ್ತು ಸಂಬಂಧಿತ ಯುಎನ್ಎಸ್ಸಿ ನಿರ್ಬಂಧಗಳು ಮತ್ತು ಅಣ್ವಸ್ತ್ರ ಪ್ರಸರಣ ತಡೆ ಕುರಿತ ಯುಎನ್ಎಸ್ಸಿ ನಿರ್ಣಯ 1540 ಅನ್ನು ಪರಿಣಾಮಕಾರಿಯಾಗಿ ಜಾರಿಗೆ ತರುತ್ತಿದ್ದೇವೆ” ಎಂದರು.
ಸೈಕಲ್ ಸ್ಟಂಟ್ ಮಾಡುವಾಗ ಗೋಡೆಗೆ ಡಿಕ್ಕಿ ಹೊಡೆದು ಬಾಲಕ ಸಾವು! ಆಘಾತಕಾರಿ ವೀಡಿಯೊ ವೈರಲ್
BREAKING : ರಾಜ್ಯದಲ್ಲಿ ಯಾವುದೇ ಕಾರಣಕ್ಕೂ ‘ಗ್ಯಾರಂಟಿ’ ಯೋಜನೆ ನಿಲ್ಲಲ್ಲ : ವಕ್ಫ್ ಸಚಿವ ಜಮೀರ್ ಅಹ್ಮದ್ ಹೇಳಿಕೆ
BREAKING : ಜಮ್ಮು-ಕಾಶ್ಮೀರದಲ್ಲಿ ಪ್ರತ್ಯೇಕ ಎನ್ಕೌಂಟರ್ : ಲಷ್ಕರ್ ಕಮಾಂಡರ್ ಸೇರಿ ಮೂವರು ಉಗ್ರರ ಹತ್ಯೆ