ರಾಮನಗರ: ಜಿಲ್ಲೆಯಲ್ಲಿ ಯುವತಿಯ ಪೋಟೋ ತೆಗೆದಿದ್ದಕ್ಕೆ ಪ್ರಶ್ನಿಸಿದಂತ ಯುವಕನೊಬ್ಬನನ್ನು ದೊಣ್ಣೆಯಿಂದ ಭೀಕರವಾಗಿ ಹೊಡೆದು ಕೊಲೆ ಮಾಡಿರುವಂತ ಘಟನೆ ನಡೆದಿದೆ.
ರಾಮನಗ ತಾಲ್ಲೂಕಿನ ಚಿಕ್ಕೇನಹಳ್ಳಿಯ ಫಾರ್ಮ್ ಹೌಸ್ ನಲ್ಲಿ ಯುವತಿಯೊಬ್ಬರ ಪೋಟೋ (21) ತೆಗೆದಿದ್ದಕ್ಕೆ ಪುನೀತ್ ಎಂಬಾತ ಪ್ರಶ್ನೆ ಮಾಡಿದ್ದನು. ಇಷ್ಟಕ್ಕೇ ಸಿಟ್ಟಾದಂತ ಚಂದು ಮತ್ತು ನಾಗೇಶ್ ಎಂಬುವರ ತಂಡವು ದೊಣ್ಣೆಯಿಂದ ಹೊಡೆದಿದ್ದಾರೆ.
ದೊಣ್ಣೆಯಿಂದ ಹೊಡೆದಿದ್ದರಿಂದ ತಲೆಗೆ ಪೆಟ್ಟಾಗಿದ್ದಂತ ಪುನೀತ್ ಅವರನ್ನು ಕೆಂಗೇರಿ ಸಮೀಪದ ಖಾಸಗಿ ಆಸ್ಪತ್ರೆಯೊಂದಕ್ಕೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿತ್ತು. ಆದರೇ ಚಿಕಿತ್ಸೆ ಫಲಿಸದೇ ಪುನೀತ್ ಸಾವನ್ನಪ್ಪಿದ್ದಾನೆ.
ಪ್ರಧಾನಿ ಸಾಧ್ಯವಿಲ್ಲ ಎಂದದ್ದನ್ನು ಸಾಧಿಸುವುದೇ ಕಾಂಗ್ರೆಸ್ ಪಕ್ಷದ ಗುರಿ: ಮಾಜಿ ಸಂಸದ ಡಿ.ಕೆ. ಸುರೇಶ್
GOOD NEWS: ನಾಳೆಯಿಂದ ಹುಬ್ಬಳ್ಳಿಯಿಂದ ಬೆಂಗಳೂರಿಗೆ ಏಕಮುಖ ವಿಶೇಷ ರೈಲು ಸಂಚಾರ