ಬೆಂಗಳೂರು: ನಗರದಲ್ಲಿ ಬಿಎಂಟಿಸಿ ಬಸ್ಸಿಗೆ ಮತ್ತೊಂದು ಬಲಿಯಾಗಿದೆ. ಬೈಕ್ ಸವಾರ ಬಸ್ಸನ್ನು ಹಿಂದಿಕ್ಕುವ ಭರದಲ್ಲಿ ಬಿಎಂಟಿಸಿ ಬಸ್ಸಿನ ಹಿಂಬದಿಯ ಚಕ್ರಕ್ಕೆ ಸಿಲುಕಿದ್ದಾನೆ. ಹೀಗಾಗಿ ಚಕ್ರ ತಲೆಯ ಮೇಲೆ ಹರಿದ ಪರಿಣಾಮ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ ಎಂಬುದಾಗಿ ತಿಳಿದು ಬಂದಿದೆ.
ಈ ಬಗ್ಗೆ ಬಿಎಂಟಿಸಿ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ಹಂಚಿಕೊಂಡಿದ್ದು, ದಿನಾಂಕ: 30.10.2024ರಂದು ಪೂರ್ವ ವಲಯಕ್ಕೆ ಸೇರಿದ ಘಟಕ-06ರ ವಾಹನ ಸಂಖ್ಯೆ ಕೆಎ 57 ಎಫ್-5356, ಮಾರ್ಗ ಸಂಖ್ಯೆ ಕೆಹೆಚ್‌ಕೆ 12/25 ರಾತ್ರಿ ತಂಗುವ ಪಾಳಿಯಲ್ಲಿ ಚಾಲಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ನಾಗರಾಜು, ಬಿಲ್ಲೆ ಸಂಖ್ಯೆ 16905 ರವರು ಬಾಳಿ ಕರ್ತವ್ಯ ಮುಗಿಸಿಕೊಂಡು -6ಕ್ಕ ಹಿಂದಿರುಗುತ್ತಿದ್ದರು ಎಂದಿದೆ.
ಸಮಯ ಸುಮಾರ 11.25ರ ವೇಳೆಯಲ್ಲಿ ಘಟಕ-06ರ ಸಮೀಪದ ಹಳೆಯ ಬಿಡಿಎ ಕಾಂಪ್ಲೆಕ್ಸ್ನ ಕಿರಿದಾದ ಸರ್ವೀಸ್ ರಸ್ತೆಯಲ್ಲಿ ಅತಿ ಕಡಿಮೆ ವೇಗದಲ್ಲಿ ಚಲಿಸುತ್ತಿರುವಾಗ, ಬಸ್ಸಿನ ಬಲಭಾಗದಲ್ಲಿ ಅದೇ ಮಾರ್ಗವಾಗಿ ಬಸ್ ಅನ್ನು ಹಿಂದಿಕ್ಕಿ ಮುನ್ನುಗ್ಗಲು ಬಂದಂತಹ ದ್ವಿಚಕ್ರ ವಾಹನದ ಸವಾರರು ಸದರಿ ರಸ್ತೆಯ ಬಲ ಭಾಗದಲ್ಲಿ ನಿಂತಿದ್ದ ಟೆಂಪೋ ವಾಹನವನ್ನು ಗಮನಿಸಿ ಸಡನ್ ಆಗಿ ಬ್ರೇಕ್ ಹಾಕಿ, ನಿಯಂತ್ರಣ ತಪ್ಪಿ ತನ್ನ ವಾಹನ ಸಮೇತ ಚಲಿಸುತ್ತಿದ್ದ ಬಸ್ಸಿನ ಹಿಂದಿನ ಬಲ ಭಾಗದ ಚಕ್ರಕ್ಕೆ ಬಿದ್ದ ಪರಿಣಾಮ ಬಸ್ಸಿನ ಬಲಭಾಗದ ಚಕ್ರವು ಬೈಕ್ ಸವಾರನ ಮೇಲೆ ಹರಿದಿದೆ ಎಂದು ಹೇಳಿದೆ.
ಬೈಕ್ ಸವಾರನ ತಲೆಯ ಮೇಲೆ ಬಿಎಂಟಿಸಿ ಬಸ್ಸಿನ ಹಿಂಬದಿಯ ಚಕ್ರ ಹರಿದ ಪರಿಣಾಮ ಗಂಭೀರವಾಗಿ ಗಾಯಗೊಂಡು ತೀವ್ರ ರಕ್ತಸ್ತ್ರಾವದಿಂದಾಗಿ ಸ್ಥಳದಲ್ಲಿಯೇ ಮೃತಪಟ್ಟಿರುತ್ತಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಪೊಲೀಸರು ಬೋರಿಂಗ್ ಆಸ್ಪತ್ರೆಗೆ ತೆಗೆದುಕೊಂಡು ಹೋಗಿರುತ್ತಾರೆ ಎಂದಿದೆ.
ಈ ದುರ್ಘಟನೆ ಬಗ್ಗೆ ಸ್ಥಳೀಯ ಪೊಲೀಸ್ ಠಾಣೆಗೆ ತಕ್ಷಣ ಮಾಹಿತಿ ನೀಡಲಾಗಿದೆ. ಸಂಸ್ಥೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲಿಸಿರುತ್ತಾರೆ. ಸದರಿ ಅಪಘಾತದ ಬಗ್ಗೆ ಸಂಸ್ಥೆಯು ಸಂತಾಪ ವ್ಯಕ್ತಪಡಿಸುತ್ತದೆ ಎಂದು ತಿಳಿಸಿದೆ.
ಯೋಜನಾ ಸಂತ್ರಸ್ತರು ಹಾಗೂ ಭೂಹಕ್ಕಿನ ಸಮಸ್ಯೆ ನಿವಾರಣೆಗೆ ‘ಟಾಸ್ಕ್ ಫೋರ್ಸ್’ ಆಗಬೇಕು: ಸಚಿವ ಮಧು ಬಂಗಾರಪ್ಪ