ಬೆಂಗಳೂರು: ರಾಜರಾಜೇಶ್ವರಿ ನಗರ ವಲಯ ಮಲ್ಲತಹಳ್ಳಿ ವ್ಯಾಪ್ತಿಯಲ್ಲಿ ಪಾಲಿಕೆ ನೀಡಿರುವ ಸಕ್ಷೆಗೆ ವ್ಯತಿರಿಕ್ತವಾಗಿ ಸಕಲಿ ನಕ್ಷೆ ಸಿದ್ದಪಡಿಸಿಕೊಂಡು ಕಟ್ಟಡ ನಿರ್ಮಾಣ ಮಾಡುತ್ತಿರುವರ ಮೇಲೆ ಎಫ್.ಐಆರ್ ದಾಖಲಿಸಲಾಗಿದೆ ಎಂದು ವಲಯ ಆಯುಕ್ತರಾದ ಬಿ.ಸಿ ಸತೀಶ್ ರವರು ತಿಳಿಸಿದರು.
ರಾಜರಾಜೇಶ್ವರಿ ನಗರ ಮಲ್ಲತಹಳ್ಳಿ ಗ್ರಾಮ ಸಂ: 6 ಮತ್ತು 7 ರ ಮಾಲೀಕರಾದ ಜಿ. ಲಕ್ಷ್ಮಿ ಪ್ರಸಾದ್ ಜಿ.ಪಿ.ಎ ಹೋಲ್ಡರ್ ಆದ ಮೇ|| ಲ್ಯಾಕ್ವೆನ್ ಡೆವಲಪರ್ಸ್ ಪಾಲುದಾರರಾದ ಶ್ರೀ. ಡಿ. ಹರ್ದೀಪ್ ಮತ್ತು ಎ, ವಿಜಯಕುಮಾರ್ ರವರಿಗೆ ಮಂಜೂನಾತಿ ನಕ್ಷೆಯನ್ನು ಪಿ.ಆರ್.ಜೆ ನಂ-3384/23-24, ದಿನಾಂಕ: 03/11/2023 ರಂದು ನೀಡಿಲಾಗಿದೆ.
ಪಾಲಿಕೆಯು S+GF+1st+2nd+3rd + Tereace floor, ಬಿಲ್ಟ್ ಅಪ್ ಏರಿಯಾ-1388.69 ಚ.ಮೀ ಇರುತ್ತದೆ. ಆರೋಪಿಗಳು ಕಟ್ಟುತ್ತಿರುವ ಕಟ್ಟಡವನ್ನು ಪರಿಶೀಲಿಸಲಾಗಿದ್ದು, ಪಾಲಿಕೆ ನೀಡಿರುವ ಮಂಜೂರಾತಿ ನಕ್ಷೆಯಂತೆ ಕಟ್ಟಡ ನಿರ್ಮಿಸದಂತೆ ನಕಲಿ ನಕ್ಷೆ ತಯಾರಿಸಿಕೊಂಡು ನಗರ ಯೋಜನೆಯ ಸಹಾಯಕ ನಿರ್ದೇಶಕರು ಹೆಸರು ತಾಳೆಯಾಗದಂತೆ ಸ್ವಯಾಚ್ಛಾನುಸಾರ ಕಟ್ಟಡವನ್ನು ನಿರ್ಮಿಸುತ್ತಿರುತ್ತಾರೆ.
ನಕಲಿ ನಕ್ಷೆಯಲ್ಲಿ 6 ಅಂತಸ್ತುಗಳನ್ನು ನಿರ್ಮಿಸಿದ್ದು, ಒಂದು ಅಂತಸ್ತಿಗೆ 4 ಮನೆಗಳಂತೆ ಒಟ್ಟು 20 ಘಟಕಗಳನ್ನು ನಿರ್ಮಿಸುತ್ತಿರುವುದು ಕಂಡುಬಂದಿರುತ್ತದೆ. ನಕ್ಷೆ ಉಲ್ಲಂಘನೆ ಮಾಡಿ ಕಟ್ಟಡ ನಿರ್ಮಾಣ ಮಾಡುತ್ತಿರುವದು ಪಾಲಿಕೆ ಬೈಲಾ ವಿರುದ್ಧವಾಗಿರುತ್ತದೆ. ನಕಲಿ ನಕ್ಷೆ ತಯಾರಿಸಿ ಪಾಲಿಕೆಗೆ ಮೋಸ ಮಾಡಿರುವುದು ಕಂಡುಬಂದಿರುತ್ತದೆ. ಈ ಸಂಬಂಧ ವ್ಯತಿರಿಕ್ತ ಭಾಗಗಗಳನ್ನು ತೆರವುಗೊಳಿಸಲು ನೋಟೀಸ್ ನೀಡಲಾಗಿರುತ್ತದೆ. ಆದ್ದರಿಂದ ಕಟ್ಟಡದ ಮಾಲೀಕರಾದ ಜಿ ಲಕ್ಷ್ಮಿ ಪ್ರಸಾದ್, ಜಿ.ಪಿ.ಎ ಹೋಲ್ಡರ್ ಲ್ಯಾಕ್ಟಿನ್ ಡೆವಲಪರ್ಸ್ ಪಾಲುದಾರರುಗಳಾದ ಡಿ. ಹರ್ದೀಪ್ ಮತ್ತು ಎ. ವಿಜಯ್ ಕುಮಾರ್ ಹಾಗೂ ಆರ್ಕಿಟೆಕ್ಟ್ ವಿನೋದ್ ಪಿ ರವರ ಮೇಲೆ ಕಾನೂನು ಕ್ರಮ ಜರುಗಿಸಲು ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿರುತ್ತದೆ.
ಬೆಂಗಳೂರು ಜನತೆಗೆ ಗುಡ್ ನ್ಯೂಸ್: ಈ ಹೊಸ ಮೆಟ್ರೋ ಫೀಡರ್ ಮಾರ್ಗದಲ್ಲಿ ‘ಬಿಎಂಟಿಸಿ ಬಸ್’ ಸಂಚಾರ ಆರಂಭ
`KSRTC’ ಪ್ರಯಾಣಿಕರಿಗೆ ಗುಡ್ ನ್ಯೂಸ್ : `ಐರಾವತ ಕ್ಲಬ್ ಕ್ಲಾಸ್ 2.0′ ಬಸ್ ಗಳಿಗೆ ಸಿಎಂ ಸಿದ್ದರಾಮಯ್ಯ ಚಾಲನೆ