ನವದೆಹಲಿ : ಇತ್ತೀಚಿಗಷ್ಟೇ ಪ್ರಧಾನಿ ಮೋದಿ ಅವರು ಡಿಜಿಟಲ್ ಅರೆಸ್ಟ್ ಕುರಿತು ಮಾತನಾಡಿದ್ದರು, ಇದರ ಬೆನ್ನಲ್ಲೇ ಮತ್ತೊಂದು ಡಿಜಿಟಲ್ ಅರೆಸ್ಟ್ ಪ್ರಕರಣ ಬೆಳಕಿಗೆ ಬಂದಿದೆ.
ಪೊಲೀಸರ ವೇಷದಲ್ಲಿ ಕರೆ ಮಾಡಿದ ಸೈಬರ್ ವಂಚಕರು, ಮುಂಬೈ ಸ್ಪೋಟ ಪ್ರಕರಣದಲ್ಲಿ ನಿಮ್ಮ ಹೆಸರಿದೆ. ನಿಮ್ಮ ಪೊಲೀಸರು ಬಂದು ಅರೆಸ್ಟ್ ಮಾಡ್ತಾರೆ. ಇಲ್ಲೇ ಡೀಲ್ ಮಾಡಿಕೊಂಡ್ರೆ ನಿಮಗೆ ಸಮಸ್ಯೆ ಆಗಲ್ಲ ಅಂತ ರೈಲ್ವೆ ಉದ್ಯೋಗಿಗೆ ಬರೋಬ್ಬರಿ 72 ಲಕ್ಷ ರೂ. ವಂಚಿಸಿರುವ ಘಟನೆ ನಡೆದಿಎ.
ಆಂಧ್ರಪ್ರದೇಶದ ಅನಂತಪುರಂ ಜಿಲ್ಲೆಯ ಗುತ್ತಿ ಮುನ್ಸಿಪಾಲಿಟಿ ವ್ಯಾಪ್ತಿಯ ಚಂದ್ರಪ್ರಿಯ ನಗರ್‌ಗೆ ಸೇರಿದ ಶೇಕ್ ಮಸ್ತಾನ್ ವಲಿ ರೈಲ್ವೆ ಗಾರ್ಡ್‌ಗಾಗಿ ಕಾರ್ಯನಿರ್ವಹಿಸಿದರು.. ಆದರೆ, ನಾಲ್ಕು ದಿನಗಳ ಹಿಂದೆ ಮುಂಬೈ ಕ್ರೇಮ್ ಬ್ರಾಂಚ್ ಪೊಲೀಸರ ಮತ್ತು ಸಿಬಿಐ ಅಧಿಕಾರಿಗಳು ಮಸ್ತಾನ್ ವಲಿಗೆ ಕಾಲ್ ಮಾಡಿದ ಸೈಬರ್ ಅಪರಾಧಿಗಳು. ಬಂಧಿಸುವುದಾಗಿ ಎಚ್ಚರಿಕೆ ನೀಡಿದ್ದರು.