ಮಂಡ್ಯ : ಸಕ್ಕರೆನಾಡು ಮಂಡ್ಯ ಜಿಲ್ಲೆಗೂ ವಕ್ಫ್ ಬೋರ್ಡ್ ಭೂತ ಕಾಲಿಟ್ಟಿದ್ದು, ಮಂಡ್ಯದ ನಾಗಮಂಗಲ ತಾಲೂಕಿನ ಬೆಳ್ಳೂರು ಗ್ರಾಮದಲ್ಲಿ 60 ಎಕರೆ ವಕ್ಫ್ ಬೋರ್ಡ್ ಆಸ್ತಿಯನ್ನು ವಕ್ಫ್ ಗೆ ಪಹಣಿ ಮಾಡಿಸುವಂತೆ ಬರೆದಿರುವ ಪತ್ರ ವೈರಲ್ ಆಗಿದೆ.
ಬೆಳ್ಳೂರು ಗ್ರಾಮದ ಸೆರ್ವೆ 472 ರಲ್ಲಿ 60 ಎಕರೆ ಆಸ್ತಿ ಎಂದು ಪತ್ರ ಬರೆದಿರುವ ಮುಸ್ಲಿಂರು. ಈ ಪತ್ರದಲ್ಲಿ ಗ್ರಾಮದ ಸರ್ವೇ ನಲ್ಲಿ 472 ರ ಲ್ಲಿ 60 ಎಕರೆ ಜಾಗ ವಕ್ಫ್ ಬೋರ್ಡ್ ಗೆ ಸೇರಿದ್ದು. ಆ ಜಾಗವನ್ನು ತಾಲೂಕು ಆಡಳಿತದ ಮೂಲಕ ವಕ್ಫ್ ಗೆ ಪಹಣಿ ಮಾಡಿಸುವಂತೆ ಸ್ಥಳೀಯ ಮುಸ್ಲಿಂರು ಒತ್ತಾಯಿಸಿದ್ದಾರೆ. ಈ ಪತ್ರವನ್ನು ಸ್ಥಳೀಯ ಮಸೀದಿ ಅಧ್ಯಕ್ಷರಿಗೆ ಬರೆದು ಒತ್ತಾಯಿಸಿರೋ ಮುಸ್ಲಿಂ ಗ್ರಾಮಸ್ಥರು. ಸಾಮಾಜಿಕ ಜಾಲತಾಣದಲ್ಲಿ ಮುಸ್ಲಿಂರ ಮಸೀದಿ ಅಧ್ಯಕ್ಷರಿಗೆ ಬರೆದಿರುವ ಪತ್ರ ವೈರಲ್ ಆಗಿದೆ.
ಪತ್ರದಲ್ಲಿ ಏನಿದೆ?
ವಿಷಯ : ಮಂಡ್ಯ ಜಿಲ್ಲೆ, ನಾಗಮಂಗಲ ತಾಲ್ಲೂಕು, ಬೆಳ್ಳೂರು ಹೋಬಳಿ, ಬೆಳ್ಳೂರು ಗ್ರಾಮದ ಸರ್ವೆ ನಂ. 472 ರಲ್ಲಿ 20 ಎಕರೆ ಜಮೀನು ಮಸೀದಿಗೆ & 34 ಎಕರೆ 12 ಗುಂಟೆ ಜಮೀನು ಸೂಪೀ ಸಂತರಿಗೆ & ಸರ್ವೆ ನಂ. 73 ರಲ್ಲಿ 06 ಎಕರೆ 06 ಗುಂಟೆ ಜಮೀನು ಖಬರಸ್ಥಾನ್ ಗೆ ಪಹಣಿಗಳನ್ನು ಮಾಡಲು ಸೂಕ್ತ ಕ್ರಮ ತಗೆದುಕೊಳ್ಳುವ ಬಗ್ಗೆ :
ಬೆಳ್ಳೂರು ಗ್ರಾಮದ ಸರ್ವೆ ನಂ. 472 ರಲ್ಲಿ 20 ಎಕರೆ ಜಮೀನು ಮೈಸೂರು ಸರ್ಕಾರದ ಆದೇಶ ಸಂಖ್ಯೆ : ಆರ್ 2661 2 – ఎలాఆరో 189 32-2 23 ದಿನಾಂಕ : 03/ನವಂಬರ್/1932 ರಂತೆ ಮೈಸೂರು ಸರ್ಕಾರವು ಮಸೀದಿಗೆ ನೀಡಿ ಆದೇಶ ಮಾಡಿರುತ್ತದೆ & ಸ್ಥಚ್ ಆಗಿರುತ್ತದೆ.
ಬೆಳ್ಳೂರು ಗ್ರಾಮದ ಸರ್ವೆ ನಂ. 472 ರಲ್ಲಿ 34 ಎಕರೆ 12 ಗುಂಟೆ ಸರ್ಕಾರಿ ಆದೇಶ ಸಂಖ್ಯೆ : ಜಿಡಿಆರ್ 19/39 – 40 ರಂತೆ ದಿನಾಂಕ : 22/11/1940 ರಂತೆ ಮೈಸೂರು ಸರ್ಕಾರವು ಸೂಪಿಸಂತರಿಗೆ ನೀಡಿ ಆದೇಶ ಮಾಡಿರುತ್ತದೆ & ಸ್ಮಚ್ ಆಗಿರುತ್ತದೆ.
ಬೆಳ್ಳೂರು ಗ್ರಾಮದ ಸರ್ವೆ ನಂ. 73 ರಲ್ಲಿ 06 ಎಕರೆ 06 ಗುಂಟೆ ಮೈಸೂರು ಸರ್ಕಾರದ ಆದೇಶ ಸಂಖ್ಯೆ : ಆರ್ 9876 ఎలా ఆరో 14 20- 16 : 05/ಮಾರ್ಚ್/1921 ರಂತೆ ಮೈಸೂರು ಸರ್ಕಾರವು ಖಬರಸ್ಥಾನ್‌ಗೆ ನೀಡಿ ಆದೇಶ ಮಾಡಿರುತ್ತದೆ & & ಸ್ಥಚ್ ಆಗಿರುತ್ತದೆ.