ಬೆಂಗಳೂರು: ನಿಂದನಾತ್ಮಕ ಭಾಷೆ ಬಳಸಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಮತ್ತು ಕಾಂಗ್ರೆಸ್ ನಾಯಕರ ಕುರಿತು ವಾಟ್ಸ್ ಆಪ್ ನಲ್ಲಿ ಅವಹೇಳನಕಾರಿ ಶಬ್ದಗಳನ್ನು ಬಳಸಿ ಪೋಸ್ಟ್ ಮಾಡಲಾಗಿತ್ತು. ಹೀಗೆ ಅವಹೇಳನಕಾರಿ ಶಬ್ದಗಳನ್ನು ಬಳಸಿ ನಿಂದಿಸಿದಂತವರ ವಿರುದ್ಧ ಎಫ್ಐಆರ್ ದಾಖಲಾಗಿದೆ.
ಇಂದು ಈ ಬಗ್ಗೆ ಕೆಪಿಸಿಸಿಯ ಸಂಯೋಜಕರಾದಂತ ಡಿ.ವಿ ಸತೀಶ್ ಹಾಗೂ ಮಾಜಿ ಸಚಿವ ಹೆಚ್.ಆಂಜನೇಯ ಅವರು ಬೆಂಗಳೂರಿನ ಹೈಗ್ರೌಂಡ್ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದರು. ಈ ದೂರು ಆಧರಿಸಿ ಓರ್ವ ಅಪರಿಚಿತ ವ್ಯಕ್ತಿಯ ವಿರುದ್ಧ ಎಫ್ಐಆರ್ ದಾಖಲಾಗಿದೆ.
ದೂರಿನಲ್ಲಿ ಏನಿದೆ.?
ನಾನು ಕೆಪಿಸಿಸಿ ಸಂಯೋಜಕರಾಗಿ ನೇಮಕವಾಗಿದ್ದು, ನಾನು ಹೆಚ್. ಆಂಜನೇಯ ಮಾಜಿ ಸಚಿವರು, ಕರ್ನಾಟಕ ಸರ್ಕಾರ ಉಪಾಧ್ಯಕ್ಷರು ಕೆಪಿಸಿಸಿ ರವರು ನೀಡಿದ ಅನುಮತಿ ಪತ್ರದ ಮೇರೆಗೆ ಈ ದಿನ ನಾನು ಠಾಣೆಗೆ ಹಾಜರಾಗಿ ದೂರನ್ನು ಕೊಟ್ಟಿರುತ್ತೇನೆ, ಸದರಿ ದೂರಿನ ವಿಷಯವೆನೆಂದರೆ, ಒಳ ಮೀಸಲಾತಿ ಹೋರಾಟ ಸಮಿತಿ ವಿಜಯನಗರ ಜಿಲ್ಲೆ ಎಂಬ ಹೆಸರಿನಲ್ಲಿರುವ ವ್ಯಾಟ್ಸಾಪ್ ಗ್ರೂಪಿನಲ್ಲಿ ಒಳ ಮೀಸಲಾತಿಯ ಕುರಿತು ರಾಜ್ಯ ಸರ್ಕಾರದ ಸಂಪುಟದಲ್ಲಿ ತೆಗೆದುಕೊಂಡ ತೀರ್ಮಾನವನ್ನು ಖಂಡಿಸಿ ಮತ್ತು ನಿಂದನಾತ್ಮಕ ಭಾಷೆ ಬಳಸಿ ಬರೆದಿರುವ ವಿಷಯಗಳನ್ನು ಹರಿಬಿಟ್ಟಿರುವ ಮತ್ತು ಪಾರ್ವಡ್ ಮಾಡಿರುವ ವ್ಯಕ್ತಿಗಳ ವಿರುದ್ಧ ಕಠಿಣ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
9481551636 ಮತ್ತು 7892313286 ಈ ನಂಬರ್‌ಗಳನ್ನು ಹೊಂದಿರುವ ವ್ಯಕ್ತಿಗಳು ಮಾನ್ಯ ಮುಖ್ಯಮಂತ್ರಿಯವರನ್ನು ಮತ್ತು ಕಾಂಗ್ರೆಸ್ ಮಂತ್ರಿಗಳು ಮತ್ತು ನಾಯಕರನ್ನು ಕುರಿತು ಅವಹೇಳನಕಾರಿ ಭಾಷೆ ಬಳಸಿರುತ್ತಾರೆ. ಇದನ್ನು ನಾನು ಈ ದಿನ ಸ್ಟೀನ್ ರಸ್ತೆಯ ಕಾಂಗ್ರೆಸ್ ಕಛೇರಿಯಲ್ಲಿ ಇರುವಾಗ ಸನ್ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಸಿದ್ಧರಾಮಯ್ಯ ರವರ ವಿರುದ್ಧ ಅವಹೇಳನಕಾರಿ ಭಾಷೆಯನ್ನು ಬಳಸಿ ಪೋಸ್ಟ್ ಮಾಡಿರುವುದು ನೋಡಿರುತ್ತೇನ ಎಂದು ತಿಳಿಸಿದ್ದಾರೆ.
ಇದರಿಂದ ನಮ್ಮ ಭಾವನೆಗೆ ತುಂಬಾ ಧಕ್ಕೆಯುಂಟಾಗಿದೆ. ಶಾಂತಿಪಾಲನೆ ಮಾಡುವ ಜನರನ್ನು ರೊಚ್ಚಿಗೇಳಿಸುವ ಗುರಿಹೊಂದಿರುತ್ತಾರೆ. ಸಮಾಜದಲ್ಲಿ ಗಲಭೆ ಉಂಟಾಗು ಮಾಡುವ ಉದ್ದೇಶದಿಂದ ಕೂಡಿರುತ್ತದೆ. ಆದ್ದರಿಂದ 9481551636, 7892313286 ಸದರಿಯವರ ಮೇಲೆ ಕಾನೂನು ರೀತ ಕ್ರಮಕೈಗೊಳ್ಳಬೇಕೆಂದು ಕೋರಿದ್ದಾರೆ.
ಈ ದೂರು ಆಧರಿಸಿ ಓರ್ವ ಅಪರಿಚಿತ ವ್ಯಕ್ತಿಯ ವಿರುದ್ಧ ಹೈಗ್ರೌಂಡ್ ಪೊಲೀಸ್ ಠಾಣೆಯಲ್ಲಿ ಭಾರತೀಯ ನ್ಯಾಯ ಸಂಹಿತೆ 2023ರU/s-192 ಅಡಿಯಲ್ಲಿ ಎಫ್ಐಆರ್ ದಾಖಲಾಗಿದೆ.
ಸಾರ್ವಜನಿಕರ ಗಮನಕ್ಕೆ: ದೀಪಾವಳಿ ಹಬ್ಬದಂದು ಕರ್ನಾಟಕದಲ್ಲಿ ‘ಹಸಿರು ಪಟಾಕಿ’ಗಳ ಬಳಕೆಗೆ ಮಾತ್ರ ಅವಕಾಶ
BIG NEWS : ದೇವಸ್ಥಾನಗಳಲ್ಲಿ `VIP’ ದರ್ಶನ ಸಮಾನತೆಯ ಹಕ್ಕಿನ ಉಲ್ಲಂಘನೆ : ಸುಪ್ರೀಂಕೋರ್ಟ್ ಗೆ ಅರ್ಜಿ ಸಲ್ಲಿಕೆ!