ಶಿವಮೊಗ್ಗ: ಜಿಲ್ಲೆಯ ಸಾಗರ ತಾಲ್ಲೂಕಿನ ಕಾರ್ಗಲ್ ನಲ್ಲಿ ಬೈಕ್ ಸವಾರರಿಗೆ ದೆವ್ವವೊಂದು ಎದುರಾಗಿದೆ. ಈ ಕಾರಣಕ್ಕೆ ಬೈಕ್ ಸವಾರರು ಅಪಘಾತಕ್ಕೆ ಒಳಗಾಗಿ ಇಬ್ಬರು ಸವಾರರು ಗಂಭೀರವಾಗಿ ಗಾಯಗೊಂಡಿದ್ದಾರೆ. ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂಬುದಾಗಿ ಸುದ್ದಿಯೊಂದು ವೈರಲ್ ಆಗಿತ್ತು. ಅದರ ವಾಸ್ತವ ಸತ್ಯಾಂಶ ಏನು ಎನ್ನುವ ಬಗ್ಗೆ ಅಸಲಿ ಸತ್ಯ ಮುಂದಿದೆ ಓದಿ.
ಈ ಸಂಬಂಧ ಸಾಗರ ತಾಲ್ಲೂಕು ಡಿವೈಎಸ್ಪಿ ಗೋಪಾಲಕೃಷ್ಣ ನಾಯಕ್ ಅವರು ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ಹಂಚಿಕೊಂಡಿದ್ದು, ದಿನಾಂಕ:-27-10-2024 ರಂದು ಕಾರ್ಗಲ್ ಪೊಲೀಸ್ ಠಾಣಾ ವ್ಯಾಪ್ತಿಯ ಕಂಚಿಕೈ ರಸ್ತೆಯಲ್ಲಿ 2 ಜನ ಬೈಕ್ ಸವಾರರಿಗೆ ದೆವ್ವ ಎದುರಾಗಿ ಒಬ್ಬರು ತುಂಬಾ ಸೀರಿಯಸ್ ಆಗಿ ಮಣಿಪಾಲ್ ಆಸ್ಪತ್ರೆಯಲ್ಲಿ ಹಾಗೂ ಇನ್ನೊಬ್ಬರು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಲ್ಲಿ ಅಡ್ಮಿಟ್ ಆಗಿರುತ್ತಾರೆ ಎಂದು ಯಾರೋ ಕಿಡಿಗೇಡಿಗಳು ಸುಳ್ಳು ಸುದ್ದಿ ಹಬ್ಬಿಸಿ ಫೋಟೋ ಹಾಗೂ ವೀಡಿಯೋ ಹರಿಬಿಟ್ಟಿದ್ದಾರೆ ಎಂಬುದಾಗಿ ಸ್ಪಷ್ಟ ಪಡಿಸಿದ್ದಾರೆ.
ಇದು ಸುಳ್ಳು ಸುದ್ದಿಯಾಗಿದ್ದು ಈ ತರಹದ ಯಾವುದೇ ಪ್ರಕರಣ ವರದಿಯಾಗಿರುವುದಿಲ್ಲ. ಹಾಗೂ ಸಾರ್ವಜನಿಕರು ಆತಂಕ ಪಡುವ ಅವಶ್ಯಕತೆ ಇರುವುದಿಲ್ಲ, ಇಂತಹ ಸುಳ್ಳು ಸುದ್ದಿ ಹಬ್ಬಿಸುವುದು, ಸುಳ್ಳು ಸುದ್ದಿ ಎಂದು ತಿಳಿದೂ ಕೂಡಾ FORWARD ಮಾಡುವುದು. Information Technology Act 2000, ರೀತ್ಯಾ ಅಪರಾಧವಾಗಿರುತ್ತದೆ. ಅಂತವರ ಮೇಲೆ ನಿಗಾ ಇರಿಸಲಾಗಿದ್ದು, ಸೂಕ್ತ ಕಾನೂನು ಕ್ರಮ ಜರುಗಿಸಲಾಗವುದು ಎಂಬುದಾಗಿ ಸಾಗರ ಉಪ ವಿಭಾಗದ ಪೊಲೀಸ್ ಉಪಾಧೀಕ್ಷಕ ಗೋಪಾಲಕೃಷ್ಣ ನಾಯಕ್ ಎಚ್ಚರಿಕೆ ನೀಡಿದ್ದಾರೆ.
ಸೋ ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನ ಕಾರ್ಗಲ್ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ನಡೆದಿದೆ ಎಂದು ಹೇಳಲಾಗುತ್ತಿರುವಂತ, ವೈರಲ್ ಆಗಿರುವಂತ ಈ ಸುದ್ದಿ ಸತ್ಯಕ್ಕೆ ದೂರವಾಗಿರುವುದು. ಇದೊಂದು ಫೇಕ್ ವೀಡಿಯೋವಾಗಿದೆ. ಇದನ್ನು ನಂಬಬೇಡಿ ಎಂಬುದಾಗಿ ಪೊಲೀಸ್ ಇಲಾಖೆ ತಿಳಿಸಿದೆ.
ವರದಿ: ವಸಂತ ಬಿ ಈಶ್ವರಗೆರೆ, ಸಂಪಾದಕರು
BREAKING: ಸಿಎಂ ಸಿದ್ಧರಾಮಯ್ಯ, ಕಾಂಗ್ರೆಸ್ ನಾಯಕರ ಬಗ್ಗೆ ಅವಹೇಳನಕಾರಿ ಶಬ್ದ ಬಳಸಿ ನಿಂದನೆ: ‘FIR’ ದಾಖಲು
ಸಾರ್ವಜನಿಕರ ಗಮನಕ್ಕೆ: ದೀಪಾವಳಿ ಹಬ್ಬದಂದು ಕರ್ನಾಟಕದಲ್ಲಿ ‘ಹಸಿರು ಪಟಾಕಿ’ಗಳ ಬಳಕೆಗೆ ಮಾತ್ರ ಅವಕಾಶ