ಬೆಂಗಳೂರು: ನವೆಂಬರ್.1ರಂದು ರಾಜ್ಯೋತ್ಸವ ಪ್ರಶಸ್ತಿಯ ಜೊತೆ ಜೊತೆಗೆ 50 ಸಾಧಕರಿಗೆ ಸುವರ್ಣ ಸಂಭ್ರಮ ಪ್ರಶಸ್ತಿಯನ್ನು ನೀಡಿ ಗೌರವಿಸುವುದಾಗಿ ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ್ ತಂಡರಗಿ ತಿಳಿಸಿದ್ದಾರೆ.
ಇಂದಿನ ಸರ್ಕಾರದಲ್ಲಿ ಅಕಾಡೆಮಿಗಳು ಸಂಪೂರ್ಣ ನಿಷ್ಕ್ರಿಯವಾಗಿದ್ದವು. ಆದರೆ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ಕೂಡಲೇ 14 ಅಕಾಡೆಮಿ ಮತ್ತು 4 ಪ್ರಾಧಿಕಾರಗಳಿಗೆ ಅಧ್ಯಕ್ಷರನ್ನ ನೇಮಿಸುವ ಮೂಲಕ ಸಾಂಸ್ಕೃತಿಕ ಚಟುವಟಿಕೆಗಳಿಗೆ ಹೆಚ್ಚಿನ ವೇಗ ನೀಡಲಾಗಿದೆ ಎಂದರು.
ನವೆಂಬರ್ 1 ರಂದು ನಡೆಯಲಿರುವ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ 50 ಪುರುಷ ಹಾಗೂ ಮಹಿಳಾ ಸಾಧಕರಿಗೆ ಸುವರ್ಣ ಸಂಭ್ರಮ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದು ಕನ್ನಡ ಮತ್ತು ಸಂಸ್ಕೃತಿ ಸಚಿವರಾದ ಶಿವರಾಜ್ ಎಸ್. ತಂಗಡಗಿ ತಿಳಿಸಿದ್ದಾರೆ.#kannadarajyotsava @CMofKarnataka @siddaramaiah @sstangadagi pic.twitter.com/URsHssG5Nb
— DIPR Karnataka (@KarnatakaVarthe) October 29, 2024
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವಿಶೇಷವಾದಂತಹ ಇಲಾಖೆ. ಇಲಾಖೆ ಅಧಿನದಲ್ಲಿರುವ ಪ್ರಾಧಿಕಾರ ಮತ್ತು ಅಕಾಡೆಮಿಗಳು ಇಲಾಖೆಯ ಆಧಾರ ಸ್ಥಂಭಗಳು ಎಂದರೆ ತಪ್ಪಾಗಲಾರದು. ಅಕಾಡೆಮಿ – ಪ್ರಾಧಿಕಾರಗಳು ನಿಜಕ್ಕೂ ಇಲಾಖೆಗೆ ಮೆರುಗು ತರುವ ಕೆಲಸವನ್ನು ಮಾಡುತ್ತಿವೆ. ಕರ್ನಾಟಕ ಎಂದು ಹೆಸರಿಟ್ಟು 50 ವರ್ಷ ತುಂಬಿರುವ ಈ ಸಂಭ್ರಮದಲ್ಲಿ ನಾನು ಇಲಾಖೆಯ ಸಚಿವನಾಗಿರುವುದು ನನ್ನ ಭಾಗ್ಯ. ಒಂದು ಕರ್ನಾಟಕ ಎಂದು ಹೆಸರಿಟ್ಟ ಸಂದರ್ಭದಲ್ಲಿ ದೇವರಾಜ ಅರಸು ಅವರು ಮುಖ್ಯಮಂತ್ರಿ ಆಗಿದ್ದರು. ಅಂದು ಕರ್ನಾಟಕದ ಹಂಪಿಯಲ್ಲಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿತ್ತು ಎಂದರು.
ನಾವು ಕೂಡ ಅದೇ ಮಾದರಿಯಲ್ಲಿ ಕಾರ್ಯಕ್ರಮವನ್ನು ಆಯೋಜನೆ ಮಾಡಿ, ಸುವರ್ಣ ಸಂಭ್ರಮದ ರಥಕ್ಕೆ ಚಾಲನೆ ನೀಡಿದ್ದೆವು. ಸುವರ್ಣ ಸಂಭ್ರಮದ ರಥ ಇಡೀ ರಾಜ್ಯದ ಮೂಲೆ ಮೂಲೆಗಳನ್ನು ಸಂಚರಿಸುತ್ತಿದೆ. ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ನವೆಂಬರ್ 1.ರಂದು ನಡೆಯಲಿರುವ ಕಾರ್ಯಕ್ರಮದಲ್ಲಿ 50 ಪುರುಷ ಹಾಗೂ ಮಹಿಳಾ ಸಾಧಕರಿಗೆ ಸುವರ್ಣ ಸಂಭ್ರಮ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದು ಇದೇ ವೇಳೆ ಸಚಿವರು ಮಾಹಿತಿ ನೀಡಿದರು.
ಅ.31ರಂದು ‘ಚಿತ್ರದುರ್ಗ ಜಿಲ್ಲಾ ವಕೀಲರ ಸಂಘ’ದಿಂದ ‘ರಾಜ ವೀರ ಮದಕರಿ ನಾಯಕ ನಾಟಕ’ ಪ್ರದರ್ಶನ: ಶಿವು ಯಾದವ್