ಬೆಂಗಳೂರು: ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣ ಸಂಬಂಧ ಹೈಕೋರ್ಟ್ ನಲ್ಲಿ ಜಾಮೀನು ಅರ್ಜಿಯನ್ನು ನಡೆಸಲಾಯಿತು. ಇಂದು ವಿಚಾರಣೆಯ ಬಳಿಕ ಹೈಕೋರ್ಟ್ ನ್ಯಾಯಪೀಠವು ನಟ ದರ್ಶನ್ ಮಧ್ಯಂತರ ಜಾಮೀನು ಆದೇಶದ ತೀರ್ಪನ್ನು ನಾಳೆಗೆ ಕಾಯ್ದಿರಿಸಿತು.
ಇಂದು ನಟ ದರ್ಶನ್ ಅವರು ರೇಣುಕಾಸ್ವಾಮಿ ಕೊಲೆ ಪ್ರಕರಣ ಸಂಬಂಧ ಸಲ್ಲಿಸಿದ್ದಂತ ಜಾಮೀನು ಅರ್ಜಿಯನ್ನು ವಿಚಾರಣೆ ನಡೆಸಿತು. ನ್ಯಾಯಮೂರ್ತಿ ಎಸ್ ವಿಶ್ವಜಿತ್ ಶೆಟ್ಟಿ ಪೀಠದಲ್ಲಿ ವಿಚಾರಣೆ ನಡೆಯಿತು. ಈ ವೇಳೆ ನಟ ದರ್ಶನ್ ಪರವಾಗಿ ಹಿರಿಯ ವಕೀಲ ಸಿ.ವಿ ನಾಗೇಶ್ ಅವರು ವಾದಿಸಿ, ಅನಾರೋಗ್ಯದ ಸಂದರ್ಭದಲ್ಲಿ ಹೈಕೋರ್ಟ್ ಕೂಡ ಜಾಮೀನು ಮಂಜೂರು ಮಾಡಿದೆ ಎಂಬುದಾಗಿ ವಿವಿಧ ಪ್ರಕರಣಗಳನ್ನು ಉಲ್ಲೇಘಿಸಿದರು.
ನಟ ದರ್ಶನ್ ಅವರಿಗೆ ಬೆನ್ನು ನೋವಿನ ಸಮಸ್ಯೆ ಇದೆ. ವೈದ್ಯರು ಶಸ್ತ್ರ ಚಿಕಿತ್ಸೆಗೆ ಸೂಚಿಸಿದ್ದಾರೆ. ಶಸ್ತ್ರ ಚಿಕಿತ್ಸೆಯ ನಂತ್ರ ಕಾಲು ಸ್ವಾಧೀನವಾದರೂ ಆಗಬಹುದು. ಮೂತ್ರ ವಿಸರ್ಜನೆ ನಿಯಂತ್ರಣಕ್ಕೂ ಕಷ್ಟವಾಗಬಹುದು. ಹೀಗಾಗಿ ಸ್ವ ಕೆಲಸಗಳನ್ನು ಮಾಡಿಕೊಳ್ಳಲು ಕಷ್ಟವಾಗಲಿದೆ. ಅವರಿಗೆ ಉತ್ತಮ ಚಿಕಿತ್ಸೆಯ ಅಗತ್ಯವಿದೆ. ಈ ಕಾರಣಕ್ಕೆ ಜಾಮೀನು ಮಂಜೂರು ಮಾಡುವಂತೆ ಕೋರಿದರು.
ವಿಚಾರಣಾಧೀನ ಖೈದಿಗೆ ಉತ್ತಮ ಆರೋಗ್ಯದ ಹಕ್ಕಿದೆ. ಮುಂದೆ ಸಮಸ್ಯೆ ಆದರೇ ಅದರನ್ನು ಸರಿಪಡಿಸಲಾಗುವುದಿಲ್ಲ. ನೀವು ವೈದ್ಯಕೀಯ ವರದಿ ಪ್ರಶ್ನಿಸುತ್ತೀದ್ದೀರಾ.? ಎಂಬುದಾಗಿ ನ್ಯಾಯಮೂರ್ತಿಗಳು ವಿಚಾರಣೆ ವೇಳೆಯಲ್ಲಿ ಎಸ್ ಪಿಪಿ ಕೇಳಿದರು.
ಹೈಕೋರ್ಟ್ ಎಸ್ ಪಿಪಿ ಪ್ರಸನ್ನ ಕುಮಾರ್ ವಾದ ಮಂಡಿಸಿ, ಈ ರೀತಿಯ ಡಿಸ್ಕ್ ಸಮಸ್ಯೆ ಆದಾಗ ಮೆಡಿಕಲ್ ಬೋರ್ಡ್ ರಚನೆಯಾಗಿದೆ. ಮೆಡಿಕಲ್ ಬೋರ್ಡ್ ಅಭಿಪ್ರಾಯ ಪಡೆದ ನಂತ್ರ ತೀರ್ಮಾನವಾಗಬೇಕು. ಮೈಸೂರಿನ ಅಪೊಲೋ ಆಸ್ಪತ್ರೆಯಿಂದಲೇ ವರದಿ ಪಡೆಯಬಹುದುಗು. ತಪಾಸಣೆ ಬೇರೆ ಸರ್ಕಾರಿ ಆಸ್ಪತ್ರೆಯಲ್ಲಿ ಮಾಡಿಸಿ ವರದಿ ಪಡೆಯಬೇಕು. ನೀವು ಈ ಹಿಂದೆ ನಿಮ್ಮದೇ ಆಸ್ಪತ್ರೆಯಲ್ಲಿ ವರದಿ ಪಡಿದ್ದೀರಲ್ಲವೇ? ಎಂದಾಗ 2ನೇ ಅಭಿಪ್ರಾಯವನ್ನು ಬೆಂಗಳೂರಲ್ಲಿ ಪಡೆಯಬಹುದಲ್ಲವೇ? ನ್ಯೂರಾಜಜಿಸ್ಟ್ ಆಪರೇಷನ್ ಮಾಡಬೇಕು ಎಂದಿದ್ದಾರೆ. ಆದರೇ ಯಾವಾಗ ಬೇಕು, ಎಷ್ಟು ದಿನ ಬೇಕೆಂದು ಹೇಳಿಲ್ಲ ಎಂದು ಜಡ್ಜ್ ಹೇಳಿದರು.
ಅಂತಿಮವಾಗಿ ವಾದ ಪ್ರತಿವಾದವನ್ನು ಆಲಿಸಿದಂತ ನ್ಯಾಯಪೀಠವು ನಟ ದರ್ಶನ್ ಸಲ್ಲಿಸಿದ್ದಂತ ಜಾಮೀನು ಅರ್ಜಿಯ ಮಧ್ಯಂತರ ಆದೇಶವನ್ನು ನಾಳೆಗೆ ಕಾಯ್ದಿರಿಸಿ, ಅರ್ಜಿಯ ವಿಚಾರಣೆಯನ್ನು ಮುಂದೂಡಿದರು.
ಸಾರ್ವಜನಿಕರಿಗೆ ಮಹತ್ವದ ಮಾಹಿತಿ: ‘ನವೆಂಬರ್’ನಲ್ಲಿ ಈ ಆರು ಪ್ರಮುಖ ಹಣಕಾಸು ಬದಲಾವಣೆಗಳು, ಇಲ್ಲಿದೆ ಡೀಟೆಲ್ಸ್
BIG NEWS : ದೇವಸ್ಥಾನಗಳಲ್ಲಿ `VIP’ ದರ್ಶನ ಸಮಾನತೆಯ ಹಕ್ಕಿನ ಉಲ್ಲಂಘನೆ : ಸುಪ್ರೀಂಕೋರ್ಟ್ ಗೆ ಅರ್ಜಿ ಸಲ್ಲಿಕೆ!