ಬೆಂಗಳೂರು: ರಾಜ್ಯದಲ್ಲಿ ರೈತರಿಗೆ ಮಂಜೂರಾದ ಭೂಮಿಗೆ ವಕ್ಫ್ ಬೋರ್ಡ್ ನೋಟಿಸ್ ನೀಡಿಲ್ಲ ಎಂಬುದಾಗಿ ಕಂದಾಯ ಸಚಿವ ಕೃಷ್ಣಬೈರೇಗೌಡ ಸ್ಪಷ್ಟ ಪಡಿಸಿದ್ದಾರೆ.
ವಕ್ಫ್ ಮಂಡಳಿಗೆ ದಾನಿಗಳು ನೀಡಿದ 14,201 ಎಕರೆ ವಕ್ಫ್ ಆಸ್ತಿಯಿತ್ತು. ಅದರಲ್ಲಿ ಭೂ ಸುಧಾರಣೆ ಕಾಯ್ದೆಯಡಿ 11,835 ಎಕರೆ, ಇನಾಮ್ ರದ್ಧತಿ ಕಾಯ್ದೆಯಡಿ 1459 ಎಕರೆ 26 ಗುಂಟೆ ರೈತರಿಗೆ ಮಂಜೂರಾಗಿದೆ ಎಂದಿದ್ದಾರೆ.
133 ಎಕರೆ 17 ಗುಂಟೆ ಬೇರೆ ಬೇರೆ ಯೋಜನೆಗಳಿಗೆ ಭೂ ಸ್ವಾಧೀನವಾಗಿ ಪರಿಹಾರ ನೀಡಲಾಗಿದೆ. ಈ ಮೂರು ವಿಭಾಗಗಳಲ್ಲಿ ಹಂಚಿಕೆಯಾಗಿರುವ ಭೂಮಿಗೆ ಯಾವುದೇ ನೋಟಿಸ್ ಕೊಟ್ಟಿಲ್ಲ. ರೈತರಿಗೆ ಮಂಜೂರಾಗಿರುವ ಜಮೀನನ್ನು ವಾಪಸ್ ಪಡೆಯುವ ಉದ್ದೇಶವೂ ಸರಕಾರಕ್ಕಾಗಲಿ, ವಕ್ಫ್ ಸಚಿವರಿಗಾಗಲಿ ಇಲ್ಲ ಎಂಬುದಾಗಿ ಸ್ಪಷ್ಟ ಪಡಿಸಿದ್ದಾರೆ.
ʻʻವಕ್ಫ್ ಮಂಡಳಿಗೆ ದಾನಿಗಳು ನೀಡಿದ 14,201 ಎಕರೆ ವಕ್ಫ್ ಆಸ್ತಿಯಿತ್ತು. ಅದರಲ್ಲಿ ಭೂ ಸುಧಾರಣೆ ಕಾಯ್ದೆಯಡಿ 11,835 ಎಕರೆ, ಇನಾಮ್ ರದ್ಧತಿ ಕಾಯ್ದೆಯಡಿ 1459 ಎಕರೆ 26 ಗುಂಟೆ ರೈತರಿಗೆ ಮಂಜೂರಾಗಿದೆ. 133 ಎಕರೆ 17 ಗುಂಟೆ ಬೇರೆ ಬೇರೆ ಯೋಜನೆಗಳಿಗೆ ಭೂ ಸ್ವಾಧೀನವಾಗಿ ಪರಿಹಾರ ನೀಡಲಾಗಿದೆ. ಈ ಮೂರು ವಿಭಾಗಗಳಲ್ಲಿ ಹಂಚಿಕೆಯಾಗಿರುವ ಭೂಮಿಗೆ… pic.twitter.com/jMqidRWGKo
— Siddaramaiah (@siddaramaiah) October 29, 2024
BIG NEWS : ದೇವಸ್ಥಾನಗಳಲ್ಲಿ `VIP’ ದರ್ಶನ ಸಮಾನತೆಯ ಹಕ್ಕಿನ ಉಲ್ಲಂಘನೆ : ಸುಪ್ರೀಂಕೋರ್ಟ್ ಗೆ ಅರ್ಜಿ ಸಲ್ಲಿಕೆ!
BIG NEWS : ತಾಯಿಯ ಮರಣದ ನಂತರ ಮಗಳು `ಅನುಕಂಪದ ನೇಮಕಾತಿ’ಗೆ ಅರ್ಹ : ಹೈಕೋರ್ಟ್ ಮಹತ್ವದ ಆದೇಶ.!