ಬೆಂಗಳೂರು: ಯಾರೇ ದಲಿತರೂ ನಿಮಗೆ ಮತ ಕೊಡುವುದಿಲ್ಲ. 3ಕ್ಕೆ 3 ಉಪ ಚುನಾವಣಾ ಕ್ಷೇತ್ರಗಳಲ್ಲಿ ಸೋಲುತ್ತೀರಿ ಎಂದು ಎಚ್ಚರಿಸಿದರು. ದಲಿತರ ಹೆಸರು ಹೇಳಿಕೊಂಡೇ 25 ಸಾವಿರ ಕೋಟಿ ನುಂಗಿದ್ದೀರಿ. ವಾಲ್ಮೀಕಿ ನಿಗಮದ 187 ಕೋಟಿ ನುಂಗಿದಿರಿ ಎಂದು ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಟೀಕಿಸಿದರು.
ಇಂದು ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದಂತ ಅವರು, ಕಾಂಗ್ರೆಸ್ ಪಕ್ಷ ಮತ್ತು ಸರಕಾರಕ್ಕೆ ಒಳ ಮೀಸಲಾತಿ ಕೊಡುವ ಬದ್ಧತೆ ಇರಲಿಲ್ಲ. ನಮ್ಮ ಸರಕಾರವು ಹೋರಾಟಗಳು ಬೀದಿಯಲ್ಲಿ ಹೆಚ್ಚಾದ ಕಾಲದಲ್ಲಿ ಅದನ್ನು ಶಮನ ಮಾಡಲು, ಎಲ್ಲರಿಗೂ ಅವರವರ ಜಾತಿಗಳ ಸಂಖ್ಯೆಗೆ ಅವರಿಗೆ ನ್ಯಾಯ ಕೊಡುವ ಬದ್ಧತೆಯಿಂದ ಕಾಂಗ್ರೆಸ್ಸೇ ಮಾಡಿದ್ದ ಆಯೋಗಕ್ಕೆ ನಾವು ಸಹಕರಿಸಿದ್ದೆವು. ಅವರು ಹಣವನ್ನೂ ಕೊಟ್ಟಿರಲಿಲ್ಲ. ಹಣ ಕೊಟ್ಟು ವರದಿ ತರಿಸಿದ್ದು ಬಿಜೆಪಿ. ಅದಾದ ಬಳಿಕ ಆರೇಳು ವರ್ಷ ವರದಿ ಇದ್ದರೂ ಅದು ದೂಳು ತಿನ್ನುತ್ತಿತ್ತು ಎಂದರು.
ನಮ್ಮ ಸರಕಾರ ಬಂದ ಬಳಿಕ ಬಸವರಾಜ ಬೊಮ್ಮಾಯಿಯವರು ಆ ವರದಿಯಲ್ಲಿ ಲೋಪವಿದೆ; ಯಥಾವತ್ತಾಗಿ ಒಪ್ಪಲಸಾಧ್ಯ ಎಂದು ತಿರಸ್ಕರಿಸಿ, ಕ್ಯಾಬಿನೆಟ್ ಸಬ್ ಕಮಿಟಿ ಮಾಡಿ ವರದಿ ಕೊಟ್ಟಿತ್ತು. ಅದನ್ನು ಆಧರಿಸಿ ವರ್ಗೀಕರಣ ಮಾಡಲಾಗಿತ್ತು ಎಂದರು. ಮೀಸಲಾತಿ ಹೆಚ್ಚಳ, ಯಾರ್ಯಾರಿಗೆ ಎಷ್ಟೆಷ್ಟು ಎಂದು ನಿರ್ಧರಿಸಿದ್ದೆವು. ಅದನ್ನು ಕಾಂಗ್ರೆಸ್ ಸರಕಾರ ಜಾರಿಗೊಳಿಸಬೇಕಿದೆ ಎಂದು ತಿಳಿಸಿದರು. ಕ್ಯಾಬಿನೆಟ್ ಅಜೆಂಡದಲ್ಲಿ ವಿಷಯ ಯಾಕೆ ಇಟ್ಟಿಲ್ಲ? ಜನರ ವಿರೋಧದ ಆತಂಕದಿಂದ ಹೆಚ್ಚುವರಿ ವಿಷಯ ಇಟ್ಟಿದ್ದಾರೆ ಎಂದು ಆಕ್ಷೇಪಿಸಿದರು.
ದೀಪಾವಳಿ ಹಬ್ಬಕ್ಕೆ ಊರಿಗೆ ಹೊರಟವರಿಗೆ ಗುಡ್ ನ್ಯೂಸ್: ಈ ರೈಲುಗಳಿಗೆ ಹೆಚ್ಚುವರಿ ಬೋಗಿ ಜೋಡಣೆ