ಬೆಂಗಳೂರು: ದೀಪಾವಳಿ ಹಬ್ಬದ ಸಂದರ್ಭದಲ್ಲಿ ಪ್ರಯಾಣಿಕರ ಹೆಚ್ಚುವರಿ ದಟ್ಟಣೆಯನ್ನು ನಿವಾರಿಸಲು ನೈಋತ್ಯ ರೈಲ್ವೆಯು ಸರ್ ಎಂ ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು ಮತ್ತು ಕಲಬುರಗಿ ನಿಲ್ದಾಣಗಳ ನಡುವೆ ಒಂದು ಟ್ರಿಪ್ ವಿಶೇಷ ಎಕ್ಸ್ ಪ್ರೆಸ್ ರೈಲುಗಳ ಓಡಿಸಲಿದೆ.
ರೈಲು ಸಂಖ್ಯೆ 06231/06232 ಸರ್ ಎಂ.ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು-ಕಲಬುರಗಿ-ಸರ್ ಎಂ.ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು ವಿಶೇಷ ಎಕ್ಸ್ ಪ್ರೆಸ್ (ಒಂದು ಟ್ರಿಪ್)
ರೈಲು ಸಂಖ್ಯೆ 06231 ಅಕ್ಟೋಬರ್ 29 ರಂದು ಬೆಂಗಳೂರಿನ ಸರ್ ಎಂ ವಿಶ್ವೇಶ್ವರಯ್ಯ ಟರ್ಮಿನಲ್ ನಿಂದ ಮಧ್ಯಾಹ್ನ 12 ಗಂಟೆಗೆ ಹೊರಟು, ಅದೇ ದಿನ ಕಲಬುರಗಿ ನಿಲ್ದಾಣ ರಾತ್ರಿ 10:15 ಗಂಟೆಗೆ ತಲುಪಲಿದೆ.
ರೈಲು ಸಂಖ್ಯೆ 06232 ಅಕ್ಟೋಬರ್ 29 ರಂದು ಕಲಬುರಗಿಯಿಂದ ರಾತ್ರಿ 11:30 ಗಂಟೆಗೆ ಹೊರಟು, ಮರುದಿನ ಬೆಂಗಳೂರಿನ ಸರ್ ಎಂ ವಿಶ್ವೇಶ್ವರಯ್ಯ ಟರ್ಮಿನಲ್ ನಿಲ್ದಾಣಕ್ಕೆ ಬೆಳಿಗ್ಗೆ 11:15 ಗಂಟೆಗೆ ತಲುಪಲಿದೆ.
ನಿಲುಗಡೆಗಳು:
ಈ ರೈಲು ಎರಡೂ ದಿಕ್ಕುಗಳಲ್ಲಿ ಯಲಹಂಕ, ಹಿಂದೂಪುರ, ಧರ್ಮಾವರಂ, ಅನಂತಪುರ, ಗುಂತಕಲ್, ಆದೋನಿ, ಮಂತ್ರಾಲಯಂ ರೋಡ್, ರಾಯಚೂರು, ಕೃಷ್ಣ, ಯಾದಗಿರಿ ಮತ್ತು ಶಹಬಾದ್ ನಿಲ್ದಾಣಗಳಲ್ಲಿ ನಿಲ್ಲಲಿದೆ.
ಬೋಗಿ ಸಂಯೋಜನೆ:
ಈ ರೈಲು 18 ಬೋಗಿಗಳನ್ನು ಹೊಂದಿರುತ್ತದೆ, ಅವುಗಳೆಂದರೆ: 02 ಎಸಿ -3 ಟೈರ್, 10 ಸ್ಲೀಪರ್ ಕ್ಲಾಸ್, 04 ಸಾಮಾನ್ಯ ದ್ವಿತೀಯ ದರ್ಜೆ ಮತ್ತು 02 ಎಸ್ಎಲ್ಆರ್ / ಡಿ.
ಬಿಜೆಪಿ ಸದಸ್ಯತ್ವ ಅಭಿಯಾನ- ಔರಾದಗೆ 5ನೇ ಸ್ಥಾನ: ರಾಜ್ಯಾಧ್ಯಕ್ಷರಿಂದ ‘ಶಾಸಕ ಪ್ರಭು ಚವ್ಹಾಣ’ಗೆ ಸನ್ಮಾನ
ಚನ್ನಪಟ್ಟಣ – ರಾಮನಗರ ನಡುವೆ ಕೈಗಾರಿಕೆ; ಸ್ಥಳೀಯರಿಗೆ ಉದ್ಯೋಗಕ್ಕೆ ಒತ್ತು: HD ಕುಮಾರಸ್ವಾಮಿ ಭರವಸೆ