ಆಂಧ್ರಪ್ರದೇಶದ ಅನ್ನಮಯ್ಯ ಜಿಲ್ಲೆಯ ರಾಜಂಪೇಟ್ ಮಂಡಲದ ಮಣ್ಣೂರಿನಲ್ಲಿ ಘೋರ ಘಟನೆಯೊಂದು ನಡೆದಿದ್ದು, ಗಂಟಲಿನಲ್ಲಿ ಚಿಕನ್ ಪೀಸ್ ಸಿಲುಕಿ 2 ವರ್ಷದ ಸಾವನ್ನಪ್ಪಿರುವ ದುರಂತ ಘಟನೆ ನಡೆದಿದೆ.
ಗಂಟಲಿನಲ್ಲಿ ಚಿಕನ್ ಪೀಸ್ ಸಿಲುಕಿ 2 ವರ್ಷದ ಬಾಲಕ ಮೃತಪಟ್ಟ ಘಟನೆ ಅನ್ನಮಯ್ಯ ಜಿಲ್ಲೆಯ ರಾಜಂಪೇಟ್ ಮಂಡಲದ ಮಣ್ಣೂರಿನಲ್ಲಿ ನಡೆದಿದೆ. ಚಿಕನ್ ಪೀಸ್ ಗಂಟಲಿನಲ್ಲಿ ಸಿಲುಕಿ ಎರಡು ವರ್ಷದ ಬಾಲಕ ಸಾವನ್ನಪ್ಪಿದ್ದಾನೆ. ನಿನ್ನೆ ಭಾನುವಾರವಾದ್ದರಿಂದ ಕೃಷ್ಣಯ್ಯ ಮತ್ತು ಮಣಿ ಮನೆಯಲ್ಲಿ ಚಿಕನ್ ತಯಾರಿಸುತ್ತಿದ್ದರು.
ಬಾಲಕ ಸುಶಾಂತ್ ಚಿಕನ್ ತುಂಡನ್ನು ತಿನ್ನಲು ಪ್ರಯತ್ನಿಸಿದ್ದಾನೆ. ಆದರೆ ತುಂಡು ದೊಡ್ಡದಾಗಿದ್ದರಿಂದ ಗಂಟಲಿನಲ್ಲಿ ಸಿಲುಕಿಕೊಂಡಿತು. ಪರಿಣಾಮ ಉಸಿರಾಡಲು ಸಾಧ್ಯವಾಗದೇ ಪ್ರಜ್ಞೆ ತಪ್ಪಿತು. ಪೋಷಕರು ಕೂಡಲೇ ಆಸ್ಪತ್ರೆಗೆ ಕರೆದೊಯ್ಯುವಾಗ ಮಾರ್ಗಮಧ್ಯೆ ಬಾಲಕ ಮೃತಪಟ್ಟಿದ್ದಾನೆ. ಚಿಕನ್ ಪೀಸ್ ಗಂಟಲಿನಲ್ಲಿ ಸಿಲುಕಿದ ನಂತರ ಮಗು ಸಾವನ್ನಪ್ಪಿದೆ ಎಂದು ಪರೀಕ್ಷೆ ನಡೆಸಿದ ವೈದ್ಯರು ದೃಢಪಡಿಸಿದ್ದಾರೆ.