ಶಿವಮೊಗ್ಗ: ಸಾಗುವಳಿ ಮಾಡುತ್ತಿರುವ ರೈತರಿಗೆ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಸಿಹಿಸುದ್ದಿ ನೀಡಿದ್ದು, ರೈತರ ಭೂಮಿ ಹಕ್ಕು ಸಮಸ್ಯೆಯನ್ನು ಹಂತ ಹಂತವಾಗಿ ಪರಿಹರಿಸಲು ಸರ್ಕಾರ ಬದ್ಧವಾಗಿದೆ ಎಂದು ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಲೆನಾಡು ರೈತರ ಭೂಮಿ ಹಕ್ಕು ಹೋರಾಟ ಜಿಲ್ಲೆಯ ಜ್ವಲಂತ ಸಮಸ್ಯೆಯಾಗಿದ್ದು, ಹಂತ ಹಂತವಾಗಿ ಈ ಸಮಸ್ಯೆಯನ್ನು ಪರಿಹರಿಸಲು ಸರ್ಕಾರ ಬದ್ಧವಾಗಿದೆ. ಶರಾವತಿ ಜಲ ವಿದ್ಯುತ್ ಯೋಜನೆಯಲ್ಲಿ 12,000 ಎಕರೆ ಭೂಮಿ ಕಳೆದುಕೊಂಡಿರುವ ಮಾತಿದೆ. ವಿಧಾನಸಭೆ ಚುನಾವಣೆ ಪ್ರಣಾಳಿಕೆಯಲ್ಲಿ ಮಲೆನಾಡು ರೈತರ ಭೂ ಹಕ್ಕಿನ ಹೋರಾಟದ ಬಗ್ಗೆ ಉಲ್ಲೇಖಿಸಲಾಗಿದೆ. ಇಲ್ಲಿನ ರೈತರು ಪ್ರತಿಭಟನೆ ನಡೆಸುತ್ತಿರುವ ವಿಚಾರವನ್ನು ಮುಖ್ಯಮಂತ್ರಿ ಮತ್ತು ಅರಣ್ಯ ಸಚಿವರ ಗಮನಕ್ಕೆ ತಂದು ಸಮಸ್ಯೆ ಪರಿಹಾರ ಮಾಡಲಾಗುವುದು ಎಂದು ಹೇಳಿದ್ದಾರೆ.
ಸಿಪಿ ಯೋಗೇಶ್ವರ್ ಬೆನ್ನಲ್ಲೇ ಇನ್ನು 8ಜನ ಬಿಜೆಪಿ ಶಾಸಕರು ಕಾಂಗ್ರೆಸ್ ಪಕ್ಷ ಸೇರಲಿರುವ ವದಂತಿಯನ್ನು ಕೇಳಿದಾಗ ಪ್ರತಿಕ್ರಿಯಿಸಿದ ಪರಮೇಶ್ವರ್, ತನಗಂತೂ ಅದರ ಬಗ್ಗೆ ಮಾಹಿತಿ ಇಲ್ಲ, ಎಸ್ ಟಿ ಸೋಮಶೇಖರ್ ವಿಷಯದ ಬಗ್ಗೆ ಮಾತಾಡಿರುವುದರಿಂದ ಅವರಿಂದಲೇ ಹೆಚ್ಚಿನ ವಿವರಣೆ ಸಿಗಬಹುದು ಎಂದರು.
ಇನ್ನು HDK ಕುರಿತಾಗಿ ಮಾತನಾಡಿದ ಅವರು, ಕೇಂದ್ರ ಭಾರೀ ಕೈಗಾರಿಕೆ ಮತ್ತ್ತು ಉಕ್ಕು ಸಚಿವ ಹೆಚ್ ಡಿ ಕುಮಾರಸ್ವಾಮಿಯವರು ಮುಚ್ಚಿರುವ ಹೆಚ್ಎಂಟಿ ಕಾರ್ಖಾನೆಯನ್ನು ಪುನರಾರಂಭಿಸುವ ಬಗ್ಗೆ ಮಾತಾಡುತ್ತಾರೆ. ಈ ವೇಳೆ ಗೃಹಸಚಿವ ಜಿ ಪರಮೇಶ್ವರ್, ಹೆಚ್ಎಂಟಿ ಕಾರ್ಖಾನೆ ಮುಚ್ಚಿಹೋಗಿರುವುದರಿಂದ ಅದಕ್ಕೆ ನೀಡಿದ ಜಮೀನನ್ನು ವಾಪಸ್ಸು ಪಡೆಯಲು ರಾಜ್ಯ ಅರಣ್ಯ ಇಲಾಖೆ ಪ್ರಯತ್ನಿಸುತ್ತಿದೆ ಎಂದು ಹೇಳಿದರು.