ಹಾವೇರಿ: ಜಿಲ್ಲೆಯ ಶಿಗ್ಗಾಂವಿ ಕ್ಷೇತ್ರದ ವಿಧಾನಸಭಾ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಬಂಡಾಯದ ಬಿಸಿ ಮುಟ್ಟಿತ್ತು. ಸಿಎಂ, ಡಿಸಿಎಂ ಮಧ್ಯ ಪ್ರವೇಶದೊಂದಿಗೆ ಇಂದು ಬಂಡಾಯ ಶಮನವಾಗಿದೆ. ಅಜ್ಜಂಪೀರ್ ಅವರ ಮನವೊಲಿಕೆಯಲ್ಲಿ ಯಶಸ್ವಿಯಾಗಿರುವಂತ ನಾಯಕರು, ಅಕ್ಟೋಬರ್.30ರಂದು ನಾಮಪತ್ರ ಹಿಂಪಡೆಯೋದಕ್ಕೂ ಒಪ್ಪಿಸಿರುವುದಾಗಿ ತಿಳಿದು ಬಂದಿದೆ.
ಈ ಬಗ್ಗೆ ಪ್ರತಿಕ್ರಿಯಿಸಿರುವಂತ ಶಿಗ್ಗಾಂವಿಯ ಕಾಂಗ್ರೆಸ್ ಬಂಡಾಯ ಅಭ್ಯರ್ಥಿ ಅಜ್ಜಂಪೀರ್ ಅವರು ನಾಳೆ ಬೆಳಿಗ್ಗೆ ಕಾರ್ಯಕರ್ತರೊಂದಿಗೆ ಸಿಎಂ ಸಿದ್ಧರಾಮಯ್ಯ, ಡಿಸಿಎಂ ಡಿ.ಕೆ ಶಿವಕುಮಾರ್ ಬರುವುದಾಗಿ ತಿಳಿಸಿದ್ದಾರೆ. ನಾನು ಅವರ ಮಾತಿಗೆ ಬದ್ಧವಾಗಿದ್ದೇನೆ. ಕ್ಷೇತ್ರದಲ್ಲಿ ಬಿಜೆಪಿ ಸೋಲಿಸಿ, ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸುವುದೇ ನಮ್ಮ ಗುರಿಯಾಗಿದೆ ಎಂದರು.
ಇನ್ನೂ ಡಿಸಿಎಂ ಡಿಕೆ ಶಿವಕುಮಾರ್ ಮಾತನಾಡಿ ಶಿಗ್ಗಾಂವಿಯ ಬಂಡಾಯ ಅಭ್ಯರ್ಥಿ ಅಜ್ಜಂಪೀರ್ ಅವರು ತಮ್ಮ ನಾಮಪತ್ರವನ್ನು ಅಕ್ಟೋಬರ್.30, 2024ರಂದು ವಾಪಾಸ್ ಪಡೆಯಲಿದ್ದಾರೆ. ಅವರೊಂದಿಗೆ ಈಗಾಗಲೇ ಮಾತನಾಡಿದ್ದಾಗಿ ತಿಳಿಸಿದ್ದಾರೆ.
ಒಟ್ಟಾರೆಯಾಗಿ ಶಿಗ್ಗಾಂವಿಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ತಟ್ಟಿದ್ದಂತ ಬಂಡಾಯದ ಬಿಸಿ ಶಮನವಾಗಿದೆ. ಅಜ್ಜಂಪೀರ್ ಅವರ ಬಂಡಾಯ ಶಮನ ಮಾಡಲಾಗಿದ್ದು, ಅಕ್ಟೋಬರ್.30ರಂದು ನಾಮಪತ್ರವನ್ನು ಹಿಂಪಡೆಯೋದು ಬಹುತೇಕ ಖಚಿತವಾದಂತೆ ಆಗಿದೆ.
ಬೆಂಗಳೂರು ಜನತೆಗೆ ಗಮನಕ್ಕೆ: ಅ.27ರ ನಾಳೆ ಈ ಪ್ರದೇಶಗಳಲ್ಲಿ ‘ವಿದ್ಯುತ್ ವ್ಯತ್ಯಯ’ | Power Cut