Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಇನ್ಮುಂದೆ ಕದನ ವಿರಾಮ ಉಲ್ಲಂಘನೆಯಾದರೆ ಪಾಕ್ ಗೆ ತಕ್ಕ ಪ್ರತ್ಯುತ್ತರ: ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಶ್ರಿ

10/05/2025 11:32 PM

BREAKING: ಪಾಕಿಸ್ತಾನ ಕದನ ವಿರಾಮ ಉಲ್ಲಂಘನೆ ದೃಢಪಡಿಸಿದ ಕೇಂದ್ರ ಸರ್ಕಾರ: ಭಾರತೀಯ ಸೇನೆಗೆ ತಿರುಗೇಟಿಗೆ ಸೂಚನೆ

10/05/2025 11:27 PM

BREAKING: ಪಾಕಿಸ್ತಾನಕ್ಕೆ ಕದನ ವಿರಾಮ ಒಪ್ಪಂದ ಅರ್ಥವಾಗುತ್ತಿಲ್ಲ, ಶೀಘ್ರದಲ್ಲೇ ಭಾರತೀಯ ಸೇವೆ ಪ್ರತ್ಯುತ್ತರ: ಕೇಂದ್ರ ಗೃಹ ಸಚಿವಾಲಯ

10/05/2025 11:22 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಬೆಂಗಳೂರಲ್ಲಿ ‘ಭಾರೀ ಮಳೆ’ಗೂ ಜಗ್ಗದ ‘ಕೋರಮಂಗಲ’: ಕಾರಣ ‘ಬಿಚ್ಚಿಟ್ಟ ನೆಟ್ಟಿಗ’
KARNATAKA

ಬೆಂಗಳೂರಲ್ಲಿ ‘ಭಾರೀ ಮಳೆ’ಗೂ ಜಗ್ಗದ ‘ಕೋರಮಂಗಲ’: ಕಾರಣ ‘ಬಿಚ್ಚಿಟ್ಟ ನೆಟ್ಟಿಗ’

By kannadanewsnow0925/10/2024 6:33 PM

ಬೆಂಗಳೂರು: ನಗರದಲ್ಲಿ ಭಾರೀ ಮಳೆ ಬಂದಾಗ ಆಗುವ ಆನಾಹುತಗಳನ್ನು ನೋಡಿದ ಒಬ್ಬ ಸಾಮಾಜಿಕ ಬಳಕೆದಾರರು‌ ಮಾಡಿರುವ ಟ್ಟೀಟ್ ಈಗ ಎಲ್ಲರ ಗಮನ ಸೆಳೆದಿದೆ. ಕೋರಮಂಗಲ ಹೇಗೆ ಮಳೆಯ ಅನಾಹುತದಿಂದ ಪರಿಹಾರ ಕಂಡುಕೊಂಡಿದೆ ಎಂಬುದಾಗಿ ಟ್ವಿಟ್ ಪೋಸ್ಟ್ ನಲ್ಲಿ ವ್ಯಕ್ತಿಯೊಬ್ಬರು ಸವಿವರವಾಗಿ ವಿವರಿಸಿದ್ದಾರೆ. ಆ ಬಗ್ಗೆ ಮುಂದೆ ಓದಿ.

ಕೋರಮಂಗಲ, ST BED, ಈಜಿಪುರ, ರಾಜೇಂದ್ರ ನಗರ, National Games Village ಮತ್ತು ವೆಂಕಟೇಶ್ವರ ಬಡಾವಣೆ ಮಡಿವಾಳ, ಪ್ರದೇಶಗಳಲ್ಲಿ ಮಳೆ ಬಂತೆಂದರೆ ಅಕ್ಷರಶಃ ನರಕ ಸದೃಶ ದೃಶ್ಯ ಕಾಣಸಿಗುತ್ತಿತ್ತು. ಕಳೆದ 20 ವರ್ಷಗಳ ಹಿಂದೆಯೇ ಸಮಸ್ಯೆಗೆ ಪರಿಹಾರ ಕಂಡುಕೊಂಡ ರೀತಿ ಇತರರಿಗೆ ಮಾದರಿಯಾಗಿದೆ.

ಒಬ್ಬ ಜನಪ್ರತಿನಿಧಿ ಯಾವ ರೀತಿ ತನ್ನ ಕ್ಷೇತ್ರವನ್ನು ಅಭಿವೃದ್ಧಿ ಮಾಡಬಹುದು ಎಂಬುದಕ್ಕೆ ಜಲ್ವಂತ ಉದಾಹರಣೆ ರಾಮಲಿಂಗಾ ರೆಡ್ಡಿ ಅವರ ವಿಧಾನಸಭಾ ಕ್ಷೇತ್ರ. ಜನರಿಗೆ ಬಹುಮುಖ್ಯವಾಗಿ ಬೇಕಾಗಿರುವುದು ವಸತಿ ಸೌಲಭ್ಯ, ಸುಸಜ್ಜಿತ ರಸ್ತೆ, ಗುಣಮಟ್ಟದ ಶಿಕ್ಷಣ ಇವೆಲ್ಲವುಗಳು ಒಂದೇ ಕ್ಷೇತ್ರದಲ್ಲಿ ವ್ಯವಸ್ಥಿತವಾಗಿ ಜನರಿಗೆ ಸಿಗುವಂತೆ ಮಾಡಿರುವ ಹೆಗ್ಗಳಿಕೆ ರಾಮಲಿಂಗಾರೆಡ್ಡಿ ಅವರದ್ದು. ಇಂದಿನ ಜನ ಯಾರೋಬ್ಬರನ್ನು ಸತತವಾಗಿ 8 ಬಾರಿ ಆಯ್ಕೆ ಮಾಡುವುದು ಕಷ್ಟ, ಆಯ್ಕೆ ಮಾಡಿದ್ದಾರೆ ಅಂದರೆ ಅದಕ್ಕೆ ಉತ್ತರ ಒಂದೇ ಕ್ಷೇತ್ರದ ಅಭಿವೃದ್ಧಿ.

2015 ಕೋರಮಂಗಲದ ಚಿತ್ರಣ ಎಲ್ಲರ ಕಣ್ಣಮುಂದೆ ಬಂದು ನಿಲ್ಲುತ್ತದೆ. ಮಳೆಯಿಂದಾಗಿ ಸಂಪೂರ್ಣ ಜಲಾವೃತಗೊಂಡ ಲೇಔಟ್ ಗಳು, ನೀರು ತುಂಬಿದ ರಸ್ತೆಗಳು, ಮನೆಗಳು, ಜನರು ಮನೆಯಿಂದ ಹೊರಗೆ ಬರಲಾಗದೆ , ನೀರು ಊಟಕ್ಕೆ ಪರದಾಡುವ ಪರಿಸ್ಥಿತಿ ಯಾರೊಬ್ಬರೂ ಇದನ್ನು ಮರೆತಿರಲಾರರು.

ಇಂತಹ ಅವಸ್ಥೆಗಳಿಗೆಲ್ಲಾ ಕಾರಣ ಕೆಟ್ಟ ಅವೈಜ್ಞಾನಿಕ ನಗರ ಯೋಜನೆ ( Town Planning), ಕೆರೆಗಳ ಆಕ್ರಮಣ, ಎಲ್ಲೆಂದರಲ್ಲಿ ಮನೆ‌ ನಿರ್ಮಾಣ, ವ್ಯವಸ್ಥಿತವಲ್ಲದ ಚರಂಡಿ ಯೋಜನೆಗಳು. ಇವೆಲ್ಲವುಗಳ ಹೊರತಾಗಿಯೂ ಹೇಗೆ ಇಂತಹ ಪರಿಸ್ಥಿತಿಗೆ ಪರಿಹಾರ ಹುಡುಕಬಹುದು ಎಂಬುದು ಕೋರಮಂಗಲದ ಇವತ್ತಿನ ಚಿತ್ರಣ ನೋಡಿದರೆ‌ ತಿಳಿಯುತ್ತದೆ.

Big shoutout to Minister @RLR_BTM for permanently fixing Koramangala’s flooding problem. In 2017, the area faced constant floods, but this time, even with heavy #BengaluruRains, there’s no flooding!

This is exactly the kind of solution #NammaBengaluru needs & an example of how a… pic.twitter.com/QzRd3X0eGl

— Satish Shekar (@SatishShekar) October 24, 2024

ಹಿಂದೆದೂ ಕಂಡರಿಯದಂತಹ ಮಹಾಮಳೆ 2024 ರಲ್ಲಿ ಬೆಂಗಳೂರಿನಲ್ಲಿ ದಾಖಲಾಗಿದೆ. ಹಲವಾರು ಲೇಔಟ್ ಗಳು ಮಳೆಯಿಂದ ಮುಳುಗಿವೆ, ಜನರು‌ ಪರದಾಡುವ ದೃಶ್ಯ ನೋಡಲಾಗುತ್ತಿಲ್ಲ. ಅದಾಗ್ಯೂ ಸಹ ಕೋರಮಂಗಲದಲ್ಲಿ ಆ ರೀತಿಯ ಯಾವುದೇ ಚಿತ್ರಣ ಕಾಣಸಿಗದಿರುವುದು ಎಲ್ಲರಿಗೂ ಅಚ್ಚರಿ ಮೂಡಿಸಿದೆ. ಇದಕ್ಕೆ ಕಾರಣ ರಾಮಲಿಂಗಾ ರೆಡ್ಡಿ ಅವರ ದೂರದೃಷ್ಟಿ ಯೋಜನೆಗಳು, ನಿರಂತರವಾಗಿ ಸ್ಥಳೀಯ Resident Welfare Associations ಗಳ ಜೊತೆ ಸಂವಹನ, ಸಂಪರ್ಕ ಸಾಧಿಸಿ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವಲ್ಲಿ ತೀವ್ರ ಗಮನಹರಿಸುವಿಕೆ, ವೈಜ್ಞಾನಿಕವಾಗಿ ಚರಂಡಿ ವ್ಯವಸ್ಥೆಗಳಿಗೆ ಕ್ರಮ, ಪ್ರತಿಯೊಂದು ವಾರ್ಡ್ ಗಳಿಗೆ ಖುದ್ದು ಭೇಟಿ ನೀಡಿ ಸಮಸ್ಯೆಗಳ ಬಗ್ಗೆ ವೈಯಕ್ತಿಕ ಕಾಳಜಿ ನೀಡುವಿಕೆ ಕಾರಣವೆಂದು RWA, ವಾರ್ಡ್ ಅಧ್ಯಕ್ಷರುಗಳು, ಸದಸ್ಯರುಗಳು ಮಾಹಿತಿ ಹಂಚಿಕೊಂಡಿದ್ದಾರೆ. ಕಳೆದ ಹಲವಾರು ವರುಷಗಳ ಸಮಸ್ಯೆಗೆ ಪರಿಹಾರ ನೀಡಿರುವ ಮಾನ್ಯ ಸಚಿವರಿಗೆ RWA ಅವರು ಧನ್ಯವಾದಗಳನ್ನು ತಿಳಿಸಿದರು.

ಜಯಣ್ಣ, ರಘು, 4ನೇ ಬ್ಲಾಕ್ , ರಾಜೇಂದ್ರ ಬಾಬು, ಎಸ್ ಟಿ ಬೆಡ್, ಶ್ರೀ.ಪಿ ಎಂ ವಿಶ್ವನಾಥ್, 3ನೇ ಬ್ಲಾಕ್ , ಸುರೇಶ್, 6ನೇ ಬ್ಲಾಕ್, ಕಿಶನ್ ನಾಯಕ್ , ಅಜಯ್ ರೆಡ್ಡಿ, 2ನೇ ಬ್ಲಾಕ್ ಕೋರಮಂಗಲ, ಸುವರ್ಣ ಅಗರವಾಲ್, ಗೋವರ್ಧನ್ ರೆಡ್ಡಿ, ಬ್ಲಾಕ್ ಅದ್ಯಕ್ಷರು, ನಿತಿನ್ ಶೇಷಾದ್ರಿ, ಮಾಜಿ ಅಧ್ಯಕ್ಷರು, ಜಿ ಎಂ ಶೆಟ್ಟಿ, ಮಾಜಿ ಅಧ್ಯಕ್ಷರು, ಪದ್ಮಶ್ರೀ, 1ನೇ ಬ್ಲಾಕ್, ಪಿಲ್ಲಪ್ಪ, 6ನೇ ಬ್ಲಾಕ್, ಎನ್‌ ಜಿ ವಿ ರಾಜೇಂದ್ರ, ಮಲ್ಲಪ್ಪ ಇತರರು.

BREAKING: ಬೆಂಗಳೂರಲ್ಲಿ ‘HMT ವಶ’ದಲ್ಲಿದ್ದ ‘5 ಎಕರೆ ಅರಣ್ಯ ಭೂಮಿ’ಯನ್ನು ‘ಅರಣ್ಯ ಇಲಾಖೆ’ ಮರುವಶ

BIG NEWS: ಜಾತಿಗಣತಿ ವರದಿ ಒಪ್ಪದಿರಲು ವೀರಶೈವ-ಲಿಂಗಾಯತ ಮಹಾಸಭಾ ತೀರ್ಮಾನ: ರಾಜಕುಮಾರ ಪಾಟೀಲ್ ತೇಲ್ಕೂರ

Share. Facebook Twitter LinkedIn WhatsApp Email

Related Posts

BREAKING : ಕದನ ವಿರಾಮ ಘೋಷಣೆಯಾದರು, ಭಯೋತ್ಪಾದನೆ ಮೂಲೋತ್ಪಾಟನೆಗೆ ಕ್ರಮ : CM ಸಿದ್ದರಾಮಯ್ಯ

10/05/2025 9:02 PM1 Min Read

BIG NEWS : ಮೇ 12 ರಂದು ‘ಬುದ್ಧ ಪೂರ್ಣಿಮ’ ಹಿನ್ನೆಲೆ, ಮಾಂಸ ಮಾರಾಟ ನಿಷೇಧಿಸಿ ‘BBMP’ ಆದೇಶ

10/05/2025 8:26 PM1 Min Read

BREAKING: ಆಪರೇಷನ್ ಸಿಂಧೂರ್: ಎಲ್ಲಾ ಜಿಲ್ಲೆಗಳಲ್ಲಿ ಸಹಾಯ ಕೇಂದ್ರ ತೆರೆದು, ಸಹಾಯವಾಣಿ ಆರಂಭಿಸಿ- ಸಿಎಂ ಸಿದ್ಧರಾಮಯ್ಯ

10/05/2025 5:44 PM2 Mins Read
Recent News

ಇನ್ಮುಂದೆ ಕದನ ವಿರಾಮ ಉಲ್ಲಂಘನೆಯಾದರೆ ಪಾಕ್ ಗೆ ತಕ್ಕ ಪ್ರತ್ಯುತ್ತರ: ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಶ್ರಿ

10/05/2025 11:32 PM

BREAKING: ಪಾಕಿಸ್ತಾನ ಕದನ ವಿರಾಮ ಉಲ್ಲಂಘನೆ ದೃಢಪಡಿಸಿದ ಕೇಂದ್ರ ಸರ್ಕಾರ: ಭಾರತೀಯ ಸೇನೆಗೆ ತಿರುಗೇಟಿಗೆ ಸೂಚನೆ

10/05/2025 11:27 PM

BREAKING: ಪಾಕಿಸ್ತಾನಕ್ಕೆ ಕದನ ವಿರಾಮ ಒಪ್ಪಂದ ಅರ್ಥವಾಗುತ್ತಿಲ್ಲ, ಶೀಘ್ರದಲ್ಲೇ ಭಾರತೀಯ ಸೇವೆ ಪ್ರತ್ಯುತ್ತರ: ಕೇಂದ್ರ ಗೃಹ ಸಚಿವಾಲಯ

10/05/2025 11:22 PM

BREAKING : ಕದನ ವಿರಾಮ ಉಲ್ಲಂಘಿಸಿ ಪಾಕ್ ನಿಂದ ಮತ್ತೆ ದಾಳಿ : 50ಕ್ಕೂ ಹೆಚ್ಚು ಡ್ರೋನ್ ಧ್ವಂಸಗೊಳಿಸಿದ ಭಾರತ | Watch Video

10/05/2025 9:23 PM
State News
KARNATAKA

BREAKING : ಕದನ ವಿರಾಮ ಘೋಷಣೆಯಾದರು, ಭಯೋತ್ಪಾದನೆ ಮೂಲೋತ್ಪಾಟನೆಗೆ ಕ್ರಮ : CM ಸಿದ್ದರಾಮಯ್ಯ

By kannadanewsnow0510/05/2025 9:02 PM KARNATAKA 1 Min Read

ಬೆಂಗಳೂರು : ಪಹಲ್ಗಾಂ ಉಗ್ರರ ದಾಳಿಗೆ ಭಾರತ ಪ್ರತಿಕಾರ ತೀರಿಸಿಕೊಂಡಿದ್ದು, ಇದೀಗ ಇಂದು ಸಂಜೆ 5 ಗಂಟೆಗೆ ಭಾರತ ಮತ್ತು…

BIG NEWS : ಮೇ 12 ರಂದು ‘ಬುದ್ಧ ಪೂರ್ಣಿಮ’ ಹಿನ್ನೆಲೆ, ಮಾಂಸ ಮಾರಾಟ ನಿಷೇಧಿಸಿ ‘BBMP’ ಆದೇಶ

10/05/2025 8:26 PM

BREAKING: ಆಪರೇಷನ್ ಸಿಂಧೂರ್: ಎಲ್ಲಾ ಜಿಲ್ಲೆಗಳಲ್ಲಿ ಸಹಾಯ ಕೇಂದ್ರ ತೆರೆದು, ಸಹಾಯವಾಣಿ ಆರಂಭಿಸಿ- ಸಿಎಂ ಸಿದ್ಧರಾಮಯ್ಯ

10/05/2025 5:44 PM

BREAKING : ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ‘ಮಾಕ್ ಡ್ರಿಲ್’ ನಡೆಸಿ : ಅಧಿಕಾರಿಗಳಿಗೆ CM ಸಿದ್ದರಾಮಯ್ಯ ಸೂಚನೆ

10/05/2025 5:28 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.