ಹಾಸನ : ಹಾಸನದ ಹಾಸನಂಬ ದೇಗುಲದ ಗರ್ಭಗುಡಿ ಅಕ್ಟೋಬರ್ 24 ರ ನಿನ್ನೆ ಓಪನ್ ಆಗಿದೆ. ಅರಸು ವಂಶಸ್ಥರು ಬಾಳೆ ಗಿಡ ಕಡಿದ ನಂತರ ದೇಗುಲದ ಪ್ರಧಾನ ಅರ್ಚಕರು ಹಾಸನಾಂಬ ದೇಗುಲದ ಬಾಗಿಲನ್ನು ತೆರೆದರು.
ಇಂದಿನಿಂದ ನವೆಂಬರ್ 3ರವರೆಗೆ ಹಾಸನಾಂಬೆ ಜಾತ್ರೆ ನಡೆಯಲಿದೆ. ಇಂದಿನಿಂದ ನವೆಂಬರ್ 2ರವರೆಗೆ ಹಾಸನಾಂಬೆ ದೇವಿಯ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ಭಕ್ತರಿಗೆ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ಪ್ರಸಿದ್ಧ ಹಾಸನಾಂಬ ದರ್ಶನೋತ್ಸವವು ಆರಂಭವಾಗಿದೆ. ಭಕ್ತಾದಿಗಳಿಗೆ ನವೆಂಬರ್ 2ರ ವರೆಗೆ ದಿನದ 24 ಗಂಟೆಯೂ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ಈ ಬಾರಿ 20 ಲಕ್ಷ ಭಕ್ತರು ಆಗಮಿಸುವ ನಿರೀಕ್ಷೆ ಇದೆ.
ಒಂಬತ್ತು ದಿನಗಳ ಹಾಸನಾಂಬೆ ಉತ್ಸವಕ್ಕೆ ಜಿಲ್ಲಾಡಳಿತವು ಸೂಕ್ತ ವ್ಯವಸ್ಥೆ ಮಾಡಿದೆ. ಸಾಮಾನ್ಯ ಸರತಿ ಸಾಲು, ವಿಐಪಿ ಪಾಸ್ ಹೊಂದಿರುವ ಭಕ್ತರು ಮತ್ತು ವಿಐಪಿಗಳ ವಾಹನಗಳಿಗೆ ಪ್ರವೇಶ ಮತ್ತು ನಿರ್ಗಮನ ಜಿಲ್ಲಾಡಳಿತ ವ್ಯವಸ್ಥಿತಗೊಳಿಸಿದೆ. ಎಲ್ಲಾ ಭಕ್ತರಿಗೆ ಲಡ್ಡು ಮತ್ತು ಪ್ರಸಾದವನ್ನು ವಿತರಿಸಲು ದೇವಾಲಯದ ಪಕ್ಕದಲ್ಲಿ 24 ಕೌಂಟರ್ಗಳನ್ನು ಸ್ಥಾಪಿಸಿದೆ. ಸಮಾರಂಭಕ್ಕೆ ವಿಶೇಷ ಆಹ್ವಾನಿತರಾಗಿ ಸಿದ್ದಗಂಗಾ ಮತ್ತು ಆದಿಚುಂಚನಗಿರಿ ಮಠದ ನಿರ್ಮಲಾನಂದನಾಥ ಸ್ವಾಮೀಜಿ ಆಗಮಿಸಲಿದ್ದಾರೆ.
ಒಟ್ಟು 11 ದಿನದಲ್ಲಿ 9 ದಿನ ಮಾತ್ರ ಸಾರ್ವಜನಿಕರಿಗೆ ದೇವಿ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ದಿನದ 24 ಗಂಟೆಗಳ ಕಾಲ ದೇವಿಯ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ನವೆಂಬರ್ 3ರಂದು ಪುನಃ ದೇವಸ್ಥಾನದ ಬಾಗಿಲನ್ನು ಮುಚ್ಚಲಾಗುವುದು. ದೇವಿ ದರ್ಶನಕ್ಕೆ ಲಕ್ಷಾಂತರ ಭಕ್ತರು ಆಗಮಿಸಲಿರುವ ಹಿನ್ನೆಲೆಯಲ್ಲಿ ಜಿಲ್ಲಾಡಳಿತದಿಂದ ಎಲ್ಲಾ ಸಿದ್ಧತೆ ಮಾಡಿಕೊಳ್ಳಲಾಗಿದೆ.