ನವದೆಹಲಿ : ಆಧಾರ್ ಕಾರ್ಡ್ ಹುಟ್ಟಿದ ದಿನಾಂಕದ ಅಧಿಕೃತ ಪುರಾವೆಯಲ್ಲ ಎಂದು ಸುಪ್ರೀಂ ಕೋರ್ಟ್ ಗುರುವಾರ ಹೇಳಿದೆ.
ಯುಐಡಿಎಐ ಹೊರಡಿಸಿದ ಸುತ್ತೋಲೆಯನ್ನು ಉಲ್ಲೇಖಿಸಿದ ಸುಪ್ರೀಂ ಕೋರ್ಟ್, ಶಾಸನಬದ್ಧ ನಿಬಂಧನೆಯ ಜೊತೆಗೆ ಸ್ಕೂಲ್ ಲೀವಿಂಗ್ ಸರ್ಟಿಫಿಕೇಟ್ (ಶಾಲಾ ಬಿಡುವ ಪ್ರಮಾಣಪತ್ರ) ಹುಟ್ಟಿದ ದಿನಾಂಕಕ್ಕೆ ಮಾನ್ಯ ಪುರಾವೆ ಎಂದು ಘೋಷಿಸಿದೆ.
ನ್ಯಾಯಮೂರ್ತಿಗಳಾದ ಸಂಜಯ್ ಕರೋಲ್ ಮತ್ತು ಉಜ್ಜಲ್ ಭುಯಾನ್ ಅವರ ನ್ಯಾಯಪೀಠವು ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದವರಿಗೆ ನೀಡಲಾಗುವ ಪರಿಹಾರವನ್ನ ಆಧಾರ್ ಕಾರ್ಡ್ನಲ್ಲಿ ನಮೂದಿಸಿದ ಜನ್ಮ ದಿನಾಂಕವನ್ನು ಅವಲಂಬಿಸಿ ಕಡಿಮೆ ಮಾಡಿದ ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ತೀರ್ಪಿನ ವಿರುದ್ಧ ಸರೋಜ್ ಮತ್ತು ಇತರರು ಸಲ್ಲಿಸಿದ್ದ ಮೇಲ್ಮನವಿಗೆ ಅನುಮತಿ ನೀಡಿತು.
ಪರಿಹಾರವನ್ನ ನಿಗದಿಪಡಿಸಲು ಶಾಲಾ ಬಿಡುವ ಪ್ರಮಾಣಪತ್ರದ ಆಧಾರದ ಮೇಲೆ ಮೃತರ ವಯಸ್ಸನ್ನ ನಿರ್ಧರಿಸುವ ಮೋಟಾರು ಅಪಘಾತ ಕ್ಲೈಮ್ ಟ್ರಿಬ್ಯೂನಲ್ ಆದೇಶವನ್ನು ನ್ಯಾಯಾಲಯ ಎತ್ತಿಹಿಡಿದಿದೆ.
ಡಿಸೆಂಬರ್ 20, 2018 ರಂದು ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ ಹೊರಡಿಸಿದ ಕಚೇರಿ ಜ್ಞಾಪಕ ಪತ್ರವನ್ನು ಉಲ್ಲೇಖಿಸಿ, ಆಧಾರ್ ಕಾರ್ಡ್ ಗುರುತನ್ನು ಸ್ಥಾಪಿಸಲು ಬಳಸಬಹುದಾದರೂ, ಅದು ಹುಟ್ಟಿದ ದಿನಾಂಕದ ಪುರಾವೆಯಲ್ಲ ಎಂದು 2023 ರಲ್ಲಿ ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ ಹೇಳಿದೆ ಎಂದು ನ್ಯಾಯಾಲಯ ಹೇಳಿದೆ.
ಶಾಲಾ ಬಿಡುವ ಪ್ರಮಾಣಪತ್ರಕ್ಕೆ ಶಾಸನಬದ್ಧ ಮಾನ್ಯತೆ ನೀಡಲಾಗಿದೆ ಎಂದು ನ್ಯಾಯಪೀಠ ಗಮನಸೆಳೆದಿದೆ.
BREAKING : ಸುಪ್ರೀಂಕೋರ್ಟ್ ನೂತನ ಮುಖ್ಯ ನ್ಯಾಯಮೂರ್ತಿಯಾಗಿ ‘ಸಂಜೀವ್ ಖನ್ನಾ’ ನೇಮಕ ; ನ.11ರಂದು ಪ್ರಮಾಣ ವಚನ
ಬಿಹಾರ, ಆಂಧ್ರಕ್ಕೆ ಬಂಪರ್ ಗಿಫ್ಟ್: 6,798 ಕೋಟಿ ಮೊತ್ತದ 2 ರೈಲ್ವೆ ಯೋಜನೆಗಳಿಗೆ ಕೇಂದ್ರ ಕ್ಯಾಬಿನೆಟ್ ಅಸ್ತು