ಬೆಂಗಳೂರು : ಬೆಂಗಳೂರಿನ ಬಾಬು ಸಾಬ್ ಪಾಳ್ಯದಲ್ಲಿ ಕಟ್ಟಡ ಕುಸಿತ ಪ್ರಕರಣದಲ್ಲಿ 8 ಜನರು ಕಾರ್ಮಿಕರು ಸಾವನ್ನಪ್ಪಿರುವ ಘಟನೆ ಮಾಸುವ ಮುನ್ನವೇ ಇದೀಗ ಬೆಂಗಳೂರಿನ ಹೊರಮಾವುನಲ್ಲಿ ಕಟ್ಟಡವೊಂದು ವಾಲಿದ ಘಟನೆ ನಡೆದಿದೆ. ಹೀಗಾಗಿ ಈ ಕಟ್ಟಡವನ್ನು ತೆರವುಗೊಳಿಸುವಂತೆ ಬಿಬಿಎಂಪಿ ಸೂಚಿಸಿದೆ.
ಹೌದು ಬೆಂಗಳೂರಿನಲ್ಲಿ ಮತ್ತೊಂದು ಕಟ್ಟಡ ವಾಲಿದೆ. ನಿರ್ಮಾಣ ಹಂತದಲ್ಲಿರುವಂತಹ ಕಟ್ಟಡ ವಾಲಿದೆ. ಹೊರಮಾವು ನಂಜಪ್ಪ ಗಾರ್ಡನ್ನಲ್ಲಿರುವಂತಹ ಕಟ್ಟಡ ವಾಲಿದ್ದು, ನಿರ್ಮಾಣ ಹಂತದಲ್ಲಿರುವ 6 ಅಂತಸ್ತಿನ ಕಟ್ಟಡ ವಾಲಿದೆ. ಕಟ್ಟಡದ ತೆರವಿಗೆ ಬಿಬಿಎಂಪಿ ಅಧಿಕಾರಿಗಳು ಸೂಚನೆ ನೀಡಿದ್ದಾರೆ. ಈ ಸೂಚನೆಯ ಬೆನ್ನಲ್ಲೇ ವಾಲಿ, ಕುಸಿತದ ಹಂತಕ್ಕೆ ತಲುಪಿದ್ದಂತ ಕಟ್ಟಡವನ್ನು ತೆರವುಗೊಳಿಸೋದಕ್ಕೆ ಕಟ್ಟಡದ ಮಾಲೀಕರು ಮುಂದಾಗಿದ್ದಾರೆ.
ಬಾಬು ಸಾಬ್ ಪಾಳ್ಯದಲ್ಲಿ ಕಟ್ಟಡ ಕುಸಿತ ಪ್ರಕರಣದಲ್ಲಿ ಇದುವರೆಗೂ 8 ಜನರು ಕಾರ್ಮಿಕರು ಸಾವನಪ್ಪಿದ್ದಾರೆ. ಇನ್ನು ಕೂಡ ಈ ಒಂದು ಕಟ್ಟಡ ತೆರವು ಕಾರ್ಯಾಚರಣೆ ನಡೆದಿದ್ದು. ಮೃತ ಕಾರ್ಮಿಕರ ಕುಟುಂಬಗಳಿಗೆ ಸಿಎಂ ಸಿದ್ದರಾಮಯ್ಯ 5 ಲಕ್ಷ ಪರಿಹಾರ ಘೋಷಣೆ ಮಾಡಿದ್ದಾರೆ. ಆದರೆ ಇದೀಗ ಹೊರಮಾವು ನಂಜಪ್ಪ ಗಾರ್ಡನಲ್ಲಿ ಮತ್ತೊಂದು ಕಟ್ಟಡ ವಾಲಿದೆ ಎಂದು ತಿಳಿದು ಬಂದಿದೆ.
BREAKING: ಬಾರಾಮುಲ್ಲಾ ಕೋರ್ಟ್ ಸಾಕ್ಷ್ಯ ಕೊಠಡಿಯಲ್ಲಿ ಗ್ರೆನೇಡ್ ಸ್ಫೋಟ: ಪೊಲೀಸ್ ಸಿಬ್ಬಂದಿಗೆ ಗಾಯ