ಬೆಂಗಳೂರು: ರಾಜ್ಯದ ವೈದ್ಯಕೀಯ ಕಾಲೇಜು ಹಾಗೂ ಆಸ್ಪತ್ರೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ವೈದ್ಯರಿಗೆ ಹಾಗೂ ಮಹಿಳಾ ಸಿಬ್ಬಂದಿಗಳಿಗೆ ರಕ್ಷಣೆ ನೀಡುವ ಉದ್ದೇಶದಿಂದ ʼರಕ್ಷಾ ಕೋಟೆʼ ನಿರ್ಮಿಸಲಾಗಿದ್ದು, ಮಾಜಿ ಸೇನಾ ಅಧಿಕಾರಿಗಳು ಹಾಗೂ ಸಿಬ್ಬಂದಿಗಳನ್ನು ನೇಮಕ ಮಾಡಿಕೊಳ್ಳಲಾಗುತ್ತಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವರಾದ ಡಾ. ಶರಣಪ್ರಕಾಶ್ ಪಾಟೀಲ್ ತಿಳಿಸಿದ್ದಾರೆ.
ರಾಜ್ಯದ ವೈದ್ಯಕೀಯ ಕಾಲೇಜು ಹಾಗೂ ಆಸ್ಪತ್ರೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ವೈದ್ಯರಿಗೆ ಹಾಗೂ ಮಹಿಳಾ ಸಿಬ್ಬಂದಿಗಳಿಗೆ ರಕ್ಷಣೆ ನೀಡುವ ಉದ್ದೇಶದಿಂದ ʼರಕ್ಷಾ ಕೋಟೆʼ ನಿರ್ಮಿಸಲಾಗಿದ್ದು, ಮಾಜಿ ಸೇನಾ ಅಧಿಕಾರಿಗಳು ಹಾಗೂ ಸಿಬ್ಬಂದಿಗಳನ್ನು ನೇಮಕ ಮಾಡಿಕೊಳ್ಳಲಾಗುತ್ತಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವರಾದ ಡಾ. ಶರಣಪ್ರಕಾಶ್ ಪಾಟೀಲ್… pic.twitter.com/BZDRpuV5pM
— DIPR Karnataka (@KarnatakaVarthe) October 22, 2024
ಕೋಲ್ಕತ್ತಾ ವೈದ್ಯ ವಿದ್ಯಾರ್ಥಿನಿ ಮೇಲಿನ ಅತ್ಯಾಚಾರ, ಕೊಲೆ ನಂತ್ರ ಕರ್ನಾಟಕ ಸರ್ಕಾರ ಎಚ್ಚೆತ್ತುಕೊಂಡಿದೆ. ಈ ರೀತಿಯ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ಕ್ರಮವಾಗಿ ವೈದ್ಯಕೀಯ ಕಾಲೇಜು ಹಾಗೂ ಆಸ್ಪತ್ರೆಗಳ ವೈದ್ಯೆಯರು, ಮಹಿಳಾ ವೈದ್ಯಕೀಯ ಸಿಬ್ಬಂದಿಗಳ ಸುರಕ್ಷತೆಗೆ ಸರ್ಕಾರ ಹೊಸ ನಿಯಮ ಸಿದ್ಧಪಡಿಸಿದೆ. ರಕ್ಷಾ ಕೋಟೆ ನಿರ್ಮಿಸಲು ಮುಂದಾಗಿದ್ದು, ಇದಕ್ಕೆ ಸೇನೆಯ ಮಾಜಿ ಅಧಿಕಾರಿಗಳು, ಸಿಬ್ಬಂದಿಯನ್ನು ನೇಮಕ ಮಾಡಿಕೊಳ್ಳಲಾಗುತ್ತಿದೆ.
ಹೀಗೆ ನೇಮಕಗೊಂಡಂತ ಸೇನೆಯ ಮಾಜಿ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ದಿನದ 24 ಗಂಟೆ ಕೆಲಸ ಮಾಡಲಿದ್ದಾರೆ. ಇದಲ್ಲದೇ ನಿಯಂತ್ರಣ ಕೊಠಡಿಗಳನ್ನು ಅವರೇ ನಿರ್ವಹಿಸಲಿದ್ದಾರೆ. ಜೊತೆ ಜೊತೆ ಪ್ರಮುಖ ಸ್ಥಳ, ಕೊಠಡಿಗಳಲ್ಲೂ ಸಿಸಿಟಿವಿ ಕ್ಯಾಮರಾ ಅಳವಡಿಕೆಯನ್ನು ಕಡ್ಡಾಯಗೊಳಿಸಲಾಗುತ್ತಿದೆ. ಯಾವುದೇ ಅನುಮಾನಾಸ್ಪದ ಚಲನವಲನ, ಘಟನೆಗಳು ಕಂಡು ಬಂದ್ರೇ, ತಕ್ಷಣವೇ ತುರ್ತು ಸಂದೇಶವನ್ನು ಸ್ಥಳೀಯ ಪೊಲೀಸರಿಗೆ ರವಾನಿಸಲಿದ್ದಾರೆ. ಈ ಮೂಲಕ ಮಹಿಳಾ ದೌರ್ಜನ್ಯ ಪ್ರಕರಣಗಳನ್ನು ತಡೆಗಟ್ಟುವಂತ ಕೆಲಸ ಮಾಡಲಿದ್ದಾರೆ.
BREAKING: ಹಾಸನದಲ್ಲಿ ಪೊಲೀಸರ ಭರ್ಜರಿ ಕಾರ್ಯಾಚರಣೆ: ಅಕ್ರಮವಾಗಿ ನೆಲೆಸಿದ್ದ ಮೂವರು ಬಾಂಗ್ಲಾದೇಶಿಗರು ಅರೆಸ್ಟ್
ಮೈಸೂರು ವಿಭಾಗದ ’15 ರೈಲ್ವೆ ನಿಲ್ದಾಣ’ಗಳಲ್ಲಿ ಭರದಿಂದ ಸಾಗಿದ ‘ಮೂಲ ಸೌಕರ್ಯ ಅಭಿವೃದ್ಧಿ’ ಕಾಮಗಾರಿ