ಬೆಂಗಳೂರು: ಬೆಸ್ಕಾಂನಿಂದ ( BESCOM ) ತುರ್ತು ವಿದ್ಯುತ್ ನಿರ್ವಹಣಾ ಕಾಮಗಾರಿಯನ್ನು ಕೈಗೊಳ್ಳುತ್ತಿರುವುದರಿಂದ, ನಗರದ ಕೆಲ ಪ್ರದೇಶಗಳಲ್ಲಿ ಅಕ್ಟೋಬರ್.23ರಂದು ವಿದ್ಯುತ್ ವ್ಯತ್ಯಯ ( Power Cut ) ಉಂಟಾಗಲಿದೆ ಎಂಬುದಾಗಿ ತಿಳಿಸಿದೆ.
ಈ ಕುರಿತಂತೆ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ಹಂಚಿಕೊಂಡಿದ್ದು, ಬೆಂಗಳೂರು 23: 66/11 kV ವಿಡಿಯಾ ಸಬ್‌ಸ್ಟೇಷನ್ ಕೆಪಿಟಿಸಿಎಲ್ ವತಿಯಿಂದ ತುರ್ತು ನಿರ್ವಹಣಾ ಕಾಮಗಾರಿ ಹಿನ್ನೆಲೆಯಲ್ಲಿ ಜಾಲಹಳ್ಳಿ ವಿಭಾಗದ ಎನ್-9 ಉಪ ವಿಭಾಗದಲ್ಲಿ ಈ ಕೆಳಕಂಡ ಪ್ರದೇಶಗಳಲ್ಲಿ ದಿನಾಂಕ 23.10.2024 ರಂದು ಬೆಳಗ್ಗೆ 10:00 ಯಿಂದ ಮಧ್ಯಾಹ್ನ 05:00 ಗಂಟೆವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂದಿದೆ.
ವಿನಾಯಕ ನಗರ, ವಿಕಾಸ್ ನಗರ, ಶೋಭಾ ಅಪಾರ್ಟ್‌ಮೆಂಟ್, 8 ನೇ ಮೈಲ್ ರಸ್ತೆ, ರಾಮಯ್ಯ ಲೇಔಟ್, ಹಾವನೂರು ಎಕ್ಸ್‌ಟೆನ್. ನಾರಾಯಣ ಲೇಔಟ್, ವಿಡಿಯಾ ಸ್ಕೂಲ್, ಕುವೆಂಪು ನಗರ, ವಿಡಿಯಾ ಬಸ್ ಸ್ಟಾಪ್, ರಿಲಯನ್ಸ್ ಫ್ರೆಶ್, ಮುನಿಕೊಂಡಪ್ಪ ಲೇಔಟ್, ಅಶೋಕ್ ನಗರ, ವಿದ್ಯಾ ನಗರ, ಡಿಫೆನ್ಸ್ ಕಾಲೋನಿ, ಹಾವನೂರು ಎಕ್ಸ್,. ಮಂಜುನಾಥ್ ನಗರ, ಮಹಾಲಕ್ಷ್ಮಿ ನಗರ, ಕಾಟರಾಯ ನಗರ ಕರೆಂಟ್ ಇರೋದಿಲ್ಲ.
ಸೋಪ್ ಫ್ಯಾಕ್ಟರಿ ಲೇಔಟ್, ವಿಜಯಲಕ್ಷ್ಮಿ ಲೇಔಟ್, ಅಂದಾನಪ್ಪ ಲೇಔಟ್ , ಬಿಟಿಎಸ್ ಲೇಔಟ್, ಸಿದ್ದೇಶ್ವರ ಲೇಔಟ್, ಸಾಸುವೆಘಟ್ಟ, ಸೋಲದೇವನಹಳ್ಳಿಯ ಭಾಗಶಃ, ತರಬನಹಳ್ಳಿ ಮುಖ್ಯ ರಸ್ತೆ, , ಹಾವನೂರು ಎಕ್ಸ್‌ಟಿಎನ್., ಹೆಸರಘಟ್ಟ ಮುಖ್ಯ ರಸ್ತೆ, ಸಿಡೇದಹಳ್ಳಿ, ಭಾಗಶಃ ವಿಶ್ವೇಶರಯ್ಯ ಲೇಔಟ್, ರಾಯಲ್ ಎನ್‌ಕ್ಲೇವ್, ಬೈರವೇಶ್ವರ ವೃತ್ತ. ಮತ್ತು ಮೇಲೆ ಹೇಳಿದ ಪ್ರದೇಶದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ. ಸಾರ್ವಜನಿಕರು ಸಹಕರಿಸುವಂತೆ ಮನವಿ ಮಾಡಿದೆ.
ವಾಹನ ಸವಾರರ ಗಮನಕ್ಕೆ : ಇಂದಿನಿಂದ 3 ದಿನ ಬೆಂಗಳೂರಿನ ಈ ಮಾರ್ಗಗಳಲ್ಲಿ ಸಂಚಾರ ಬಂದ್
BREAKING : ಚನ್ನಪಟ್ಟಣಕ್ಕೆ ಡಿಕೆ ಸುರೇಶ್ ಸ್ಪರ್ಧೆ ಖಚಿತ : ಸುಳಿವು ನೀಡಿದ ಡಿಸಿಎಂ ಡಿಕೆ ಶಿವಕುಮಾರ್