ಶಿವಮೊಗ್ಗ: ಇಂದು ಅರಣ್ಯ ನೀತಿಗಳು ಕಠಿಣವಾಗಿದ್ದಾವೆ. ಬಗರ್ ಹುಕುಂ ಆಸೆಗಾಗಿ ಕಾಡು ಒತ್ತುವರಿ ಮಾಡುವುದಕ್ಕೆ ಹೋಗಬೇಡಿ ಎಂಬುದಾಗಿ ಮನವಿಯನ್ನು ಶಾಸಕ ಬೇಳೂರು ಗೋಪಾಲಕೃಷ್ಣ ಮಾಡಿದರು. ಅಲ್ಲದೇ ನಾನು ರೈತರು ಈಗ ಸಾಗುವಳಿ ಮಾಡುತ್ತಿರುವಂತ ಆಸ್ತಿಯನ್ನು ಕಿತ್ತುಕೊಳ್ಳುವುದಕ್ಕೆ ಬಿಡುವುದಿಲ್ಲ ಎಂಬುದಾಗಿ ಹೇಳಿದರು.
ಇಂದು ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನ ತಾಳಗುಪ್ಪದಲ್ಲಿ ನಡೆದಂತ ಕಾಗೋಡು ತಿಮ್ಮಪ್ಪ ಅವರಿಗೆ ನಾಗರೀಕ ಸನ್ಮಾನ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿದ ಅವರು, ಕಾಡೋಡು ಸಾಹೇಬ್ರು ಭೂಮಿ ಕೊಡಬೇಕಾದರೇ ಫಾರೆಸ್ಟ್ ಆಕ್ಟ್ ತುಂಬಾ ಕಠಿಣವಾಗಿರಲಿಲ್ಲ. ಆದರೇ ಇಂದು ಬಹಳ ಕಠಿಣವಾಗಿದೆ. ಸುಪ್ರೀಂ ಕೋರ್ಟ್, ಹೈಕೋರ್ಟ್ ನಿಂದ, ಗ್ರೀನ್ ಬೆಲ್ಡ್ ನಿಂದ ಒತ್ತಡವಿದೆ. ನಿಮ್ಮ ಜಮೀನು ಈಗ ಏನಿದ್ಯೋ ಅದನ್ನು ಮಾಡಿಕೊಂಡು ಹೋಗಿ. ಅದರ ಹೊರತಾಗಿ ಅರಣ್ಯ ಭೂಮಿಯನ್ನು ಒತ್ತುವರಿ ಮಾಡಬೇಡಿ. ಇರುವ ಆಸ್ತಿಯನ್ನು ಕಿತ್ತುಕೊಳ್ಳುವುದಕ್ಕೆ ಖಂಡಿತಾ ನಾವು ಬಿಡುವುದಿಲ್ಲ. ರೈತರಿಗೆ ಪರವಾಗಿ ನಾವಿದ್ದೇವೆ ಎಂದರು.
ಕಾಡೋಗು ತಿಮ್ಮಪ್ಪ ಅವರು ಅಷ್ಟು ಹೋರಾಟ ಮಾಡಿದ್ರು. ಅದರ ಫಲವಾಗಿ ನೀವು ಭೂಮಿ ಪಡೆದುಕೊಂಡಿದ್ದೀರಿ. ಭೂಮಿ ಪಡೆದುಕೊಂಡಿದ್ದರಿಂದ ಬದುಕು ಕಟ್ಟಿಕೊಂಡಿದ್ದೀರಿ. ನಿಮ್ಮ ಜೀವನ ಇಂದು ಬೆಳಕಾಗಿದೆ. ಇಂದು ಕಾಗೋಡು ತಿಮ್ಮಪ್ಪನವರಿಗೆ ನಾಗರೀಕ ಸನ್ಮಾನ ನಿಜಕ್ಕೂ ಮೆಚ್ಚುವಂತದ್ದು. ಇಂತಹ ಕಾರ್ಯಕ್ರಮ ಆಯೋಜಿಸಿದಂತ ಆಯೋಜಕರಿಗೆ ಧನ್ಯವಾದಗಳು ಅಂತ ತಿಳಿಸಿದರು.
ವರದಿ: ವಸಂತ ಬಿ ಈಶ್ವರಗೆರೆ, ಸಂಪಾದಕರು
BIG NEWS: ಜೂಜಾಟದಲ್ಲಿ ಬ್ಯಾಂಕ್, ಅಬಕಾರಿ ಇಲಾಖೆ ಅಧಿಕಾರಿಗಳೇ ಭಾಗಿ: 9 ಮಂದಿ ಅರೆಸ್ಟ್
Rain Alert : ರಾಜ್ಯದಲ್ಲಿ ಇನ್ನೆರಡು ದಿನ ಭಾರಿ ಮಳೆ : ಈ 13 ಜಿಲ್ಲೆಗಳಲ್ಲಿ ‘ಯಲ್ಲೋ’ ಅಲರ್ಟ್ ಘೋಷಣೆ
BREAKING : ಕೆಂಪೇಗೌಡ ಅಂತರಾಷ್ಟ್ರೀಯ ಏರ್ಪೋರ್ಟ್ ಗೆ ಬಾಂಬ್ ಬೆದರಿಕೆ ಕರೆ : ಭದ್ರತಾ ಪಡೆಗಳಿಂದ ಮುಂಜಾಗ್ರತಾ ಕ್ರಮ