ಬೆಂಗಳೂರುCauvery Water Supply Cut In Bengaluru Today: Check Affected Areas: ಬಿಬಿಎಂಪಿ ವ್ಯಾಪ್ತಿಯ 110 ಗ್ರಾಮಗಳಿಗೆ ಕಾವೇರಿ ಕುಡಿಯುವ ನೀರು ಪೂರೈಸಲು ಜಿಕೆವಿಕೆ ಆವರಣದಲ್ಲಿರುವ ನೀರು ಸಂಸ್ಕರಣಾ ಘಟಕದಿಂದ ಅಮೃತ್ ಪೈಪ್ ಲೈನ್ ವರೆಗೆ ಪೈಪ್ ಲೈನ್ ಸಂಪರ್ಕ ಕಲ್ಪಿಸಲಾಗುತ್ತಿದೆ
ಇದರ ಪರಿಣಾಮವಾಗಿ ಅಕ್ಟೋಬರ್ 19 ರಂದು ಬೆಳಿಗ್ಗೆ 9:00 ರಿಂದ ಸಂಜೆ 7:00 ರವರೆಗೆ ಈ ಕೆಳಗಿನ ಪ್ರದೇಶಗಳಲ್ಲಿ ಕಾವೇರಿ ಕುಡಿಯುವ ನೀರು ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (ಬಿಡಬ್ಲ್ಯೂಎಸ್ಎಸ್ಬಿ) ಅಧ್ಯಕ್ಷ ಡಾ.ವಿ.ರಾಮ್ ಪ್ರಸಾತ್ ಮನೋಹರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕಾವೇರಿ ಕುಡಿಯುವ ನೀರು ಸರಬರಾಜಿನಲ್ಲಿ ವ್ಯತ್ಯಯದಿಂದ ಬಾಧಿತವಾದ ಪ್ರದೇಶಗಳು:
ರಾಜು ಕಾಲೋನಿ, ಸರ್ವೋದಯ ನಗರ, ಇಬ್ರಾಹಿಂ ಸ್ಟ್ರೀಟ್ (1 ರಿಂದ 9 ನೇ ರಸ್ತೆ), ನೋಬಲ್ ಶಾಲೆ (1 ಮತ್ತು 2 ನೇ ಕ್ರಾಸ್), ನೂರ್ ಲೇಔಟ್, ಶಂಪುರ ರೈಲ್ವೆ ಗೇಟ್ (1 ಮತ್ತು 2 ನೇ ಕ್ರಾಸ್), ವೈಯಾಲಿಕಾವಲ್ ಲೇಔಟ್ (1 ರಿಂದ 9 ನೇ ಮುಖ್ಯರಸ್ತೆ), ಸಂಧ್ಯಾಪ್ಪ ಲೇಔಟ್ (1 ರಿಂದ 3 ನೇ ಕ್ರಾಸ್), ವೀರಣ್ಣ ಪಾಳ್ಯ, ನಾರಾಯಣಸ್ವಾಮಿ ಲೇಔಟ್, ರೈಲ್ವೆ ಗೇಟ್, ವೈಯಾಲಿಕಾವಲ್ ಲೇಔಟ್ (10 ರಿಂದ 16 ನೇ ಕ್ರಾಸ್), ಪ್ರಕೃತಿ ಲೇಔಟ್, ಗುಂಡುತೋಪು, ಆಯಿಲ್ ಮಿಲ್ ರಸ್ತೆ (1 ರಿಂದ 15 ನೇ ಕ್ರಾಸ್ – ಕೆಳ ವಿಭಾಗ), 16 ರಿಂದ 18 ನೇ ಕ್ರಾಸ್ (1 ರಿಂದ 15 ನೇ ಕ್ರಾಸ್ ನ ಮೇಲ್ಭಾಗ), 3 ನೇ ಬ್ಲಾಕ್ ಸರ್ವಿಸ್ ರಸ್ತೆ, ಎಚ್ ಆರ್ ಬಿಆರ್ ಲೇಔಟ್, ಆರ್ ಎಸ್ ಪಾಳ್ಯ, ಸದಾಶಿವ ದೇವಸ್ಥಾನ ರಸ್ತೆ, ಸತ್ಯಮೂರ್ತಿ ರಸ್ತೆ, ಆಯಿಲ್ ಮಿಲ್ ರಸ್ತೆ, ಕೆಎಚ್ ಬಿ ಕ್ವಾರ್ಟರ್ಸ್, ಗುರುಮೂರ್ತಿ ರಸ್ತೆ ಮತ್ತು ಸುತ್ತಮುತ್ತಲಿನ ಪ್ರದೇಶಗಳು.