ಶಿವಮೊಗ್ಗ: ಮೂರು ಎಕರೆಗಿಂತ ಹೆಚ್ಚು ಜಮೀನು ಹೊಂದಿರುವ ಮತ್ತು 2015ರ ನಂತರದ ಅರಣ್ಯ ಒತ್ತುವರಿಯನ್ನು ಮಾತ್ರ ತೆರವು ಮಾಡಬೇಕು ಎಂಬುದಾಗಿ ಜಿಲ್ಲಾ ಉಸ್ತುವಾರಿ ಹಾಗೂ ಶಾಲಾ ಶಿಕ್ಷಣ ಇಲಾಖೆಯ ಸಚಿವ ಮಧು ಎಸ್ ಬಂಗಾರಪ್ಪ ಸೂಚಿಸಿದ್ದಾರೆ. ಈ ಮೂಲಕ ಬಗರ್ ಹುಕುಂ ಸಾಗುವಳಿದಾರರಿಗೆ ಬಿಗ್ ರಿಲೀಫ್ ನೀಡಿದ್ದಾರೆ.
ಇಂದು ಶಿವಮೊಗ್ಗದ ಲೋಕಪಯೋಗಿ ಭವನದಲ್ಲಿ “ಅರಣ್ಯ ಇಲಾಖೆ”ಯ ಉನ್ನತ ಅಧಿಕಾರಿಗಳೊಂದಿಗೆ ಸಭೆ ನಡೆಸಲಾಯಿತು.
ಅರಣ್ಯ ಒತ್ತುವರಿ ತೆರವು ಕಾನೂನು ಪ್ರಕ್ರಿಯೆಯಲ್ಲಿ ಅಧಿಕಾರಿಗಳು ಮೂರು ಎಕರೆಗಿಂತ ಹೆಚ್ಚು ಜಮೀನು ಹೊಂದಿರುವ ಮತ್ತು 2015ರ ನಂತರದ ಅರಣ್ಯ ಒತ್ತುವರಿಯನ್ನು ಮಾತ್ರ ತೆರವು ಮಾಡಬೇಕು ಎಂಬ ಸ್ಪಷ್ಟ ಸೂಚನೆಯನ್ನು ಈಗಾಗಲೇ ಸಚಿವರು ತಿಳಿಸಿದ್ದಾರೆ.
ಆದರೆ ಅರಣ್ಯ ಇಲಾಖೆಯ ಕೆಲ ಅಧಿಕಾರಿಗಳು ಮುಗ್ದ ಹಾಗೂ ಬಡ ರೈತರ ಜಮೀನು ಒತ್ತುವರಿ ವಿಚಾರದಲ್ಲಿ 3 ಎಕರೆ ಹೊಂದಿರುವ ರೈತರಿಗೂ ತೊಂದರೆ ನೀಡಿ ಒಕ್ಕಲೆಬ್ಬಿಸುವ ಕಾರ್ಯದಲ್ಲಿ ತೊಡಗಿರುವ ವಿಷಯ ನನ್ನ ಗಮನಕ್ಕೆ ಬಂದಿದ್ದು, ಈ ವರ್ತನೆ ಸರಿಯಲ್ಲ.
ಅಧಿಕಾರಿಗಳು ರೈತರೊಂದಿಗೆ ತಾಳ್ಮೆಯಿಂದ ವರ್ತಿಸಿ ಕಾನೂನಾತ್ಮಕವಾಗಿ ಕ್ರಮ ಕೈಗೊಳ್ಳಿ ಅಭ್ಯಂತರವಿಲ್ಲ. ರೈತ ವಿರೋಧಿಯಾಗಿ ಕಾರ್ಯನಿರ್ವಹಿಸುವ ಕೆಲ ಅಧಿಕಾರಿಗಳ ವಿರುದ್ಧ ಕ್ರಮಕೈಗೊಳ್ಳುವುದಾಗಿ ಎಚ್ಚರಿಕೆ ಈ ವೇಳೆ ನೀಡಲಾಯಿತು.
GOOD NEWS: ರಾಜ್ಯದ ವಿದ್ಯಾರ್ಥಿಗಳ ಫಲಿತಾಂಶ ಹೆಚ್ಚಿಸಲು ‘ಶಿಕ್ಷಣ ಕೋಪೈಲಟ್ ಆಪ್’ – ಸಚಿವ ಮಧು ಬಂಗಾರಪ್ಪ
BIG NEWS: ‘ಹಸಿರು ಪಟಾಕಿ’ಯನ್ನು ಮಾತ್ರ ‘ರಾತ್ರಿ 8 ರಿಂದ 10 ಗಂಟೆ’ವರೆಗೆ ಸಿಡಿಸಲು ಅವಕಾಶ: ಸಚಿವ ಈಶ್ವರ್ ಖಂಡ್ರೆ
BREAKING : ಜಪಾನ್‌ನ ಆಡಳಿತ ಪಕ್ಷದ ಪ್ರಧಾನ ಕಛೇರಿಯ ಮೇಲೆ ಬಾಂಬ್ ದಾಳಿ : ಸ್ಥಳದಲ್ಲೇ ಶಂಕಿತ ಅರೆಸ್ಟ್!