ಮೋರ್ನಿ : ಪಂಚಕುಲದ ಮೋರ್ನಿ ಬಳಿಯ ಟಿಕ್ಕರ್ ತಾಲ್ ಬಳಿ ಶಾಲಾ ಮಕ್ಕಳು ಪ್ರಯಾಣಿಸುತ್ತಿದ್ದ ಬಸ್ ಅಪಘಾತಕ್ಕೀಡಾಗಿದೆ. ಚಾಲಕ ಬಸ್’ನ್ನ ಅತಿವೇಗದಲ್ಲಿ ಚಲಾಯಿಸಿದ್ದರಿಂದ ಈ ಅವಘಡ ಸಂಭವಿಸಿದೆ ಎಂದು ಮಾಹಿತಿ ಲಭ್ಯವಾಗಿದೆ. ಅಪಘಾತ ಸಂಭವಿಸಿದ ತಕ್ಷಣ ಸ್ಥಳೀಯ ಆಡಳಿತವು ಗಾಯಾಳುಗಳನ್ನ ರಕ್ಷಿಸಲು ಪ್ರಾರಂಭಿಸಿದ್ದು, ಅಪಘಾತದಲ್ಲಿ ಚಾಲಕ ಗಂಭೀರವಾಗಿ ಗಾಯಗೊಂಡಿದ್ದಾನೆ. ಟಿಕ್ಕರ್ ತಾಲ್ ರಸ್ತೆಯ ಥಾಲ್ ಗ್ರಾಮದ ಬಳಿ ಬಸ್ ಪಲ್ಟಿಯಾಗಿ ಹಳ್ಳಕ್ಕೆ ಬಿದ್ದಿದೆ ಎಂದು ಹೇಳಲಾಗುತ್ತಿದೆ.
ಘಟನೆಯಲ್ಲಿ ಸುಮಾರು 10 ರಿಂದ 15 ಮಕ್ಕಳು ಗಾಯಗೊಂಡಿದ್ದು, ಅವರನ್ನು ಚಿಕಿತ್ಸೆಗಾಗಿ ಮೋರ್ನಿಯ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ದಾಖಲಿಸಲಾಗಿದೆ. ಅದೇ ಸಮಯದಲ್ಲಿ, ಕೆಲವು ಮಕ್ಕಳನ್ನ ಪಂಚಕುಲದ ಸೆಕ್ಟರ್ 6 ಸಿವಿಲ್ ಆಸ್ಪತ್ರೆಗೆ ಕಳುಹಿಸಲಾಗಿದೆ. ಪೊಲೀಸರು ಸ್ಥಳಕ್ಕೆ ಆಗಮಿಸಿ ತನಿಖೆ ಆರಂಭಿಸಿದ್ದಾರೆ. ಪ್ರಾಥಮಿಕ ತನಿಖೆಯ ಪ್ರಕಾರ, ಪಂಜಾಬ್’ನ ಮಲೇರ್’ಕೋಟ್ಲಾದ ನಂಕಾನಾ ಸಾಹಿಬ್ ಶಾಲೆಯ ಮಕ್ಕಳು ಮತ್ತು ಸಿಬ್ಬಂದಿಗಳು ಪಂಚಕುಲದ ಮೋರ್ನಿ ಹಿಲ್ಸ್‌ಗೆ ವಿಹಾರಕ್ಕೆ ಹೋಗುತ್ತಿದ್ದರು. ಬಸ್ ಹಠಾತ್ ಪಲ್ಟಿಯಾಗಿ ಈ ಭೀಕರ ಅಪಘಾತ ಸಂಭವಿಸಿದೆ. ಈ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
BIG NEWS: ಕರ್ನಾಟಕದಲ್ಲಿ ‘ಪಟಾಕಿ’ ಬ್ಯಾನ್: ‘ಹಸಿರು ಪಟಾಕಿ’ ಮಾತ್ರ ‘ದೀಪಾವಳಿ ಹಬ್ಬ’ದಲ್ಲಿ ಸಿಡಿಸಲು ಅವಕಾಶ
BREAKING : ಬೆಳಗಾವಿಯಲ್ಲಿ ಅ.23 ರಿಂದ 25ರವರೆಗೆ ‘ಕಿತ್ತೂರು ಉತ್ಸವ’ : ಶಾಸಕ ಬಾಬಾ ಸಾಹೇಬ್ ಪಾಟೀಲ್ ಘೋಷಣೆ
ಅ.23ರಂದು ವಯನಾಡು ಕ್ಷೇತ್ರದ ಉಪ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಯಾಗಿ ಪ್ರಿಯಾಂಕಾ ಗಾಂಧಿ ನಾಮಪತ್ರ ಸಲ್ಲಿಕೆ