ಬೆಂಗಳೂರು: ನಗರದಲ್ಲಿ ತುರ್ತು ವಿದ್ಯುತ್ ನಿರ್ವಹಣೆ ಹಿನ್ನಲೆಯಲ್ಲಿ, ಬೆಂಗಳೂರಿನ ಕೆಲ ಏರಿಯಾಗಳಲ್ಲಿ ಅಕ್ಟೋಬರ್ 19 ರ ಇಂದು ವಿದ್ಯುತ್ ವ್ಯತ್ಯಯ ಉಂಟಾಗಲಿದೆ ಎಂಬುದಾಗಿ ಬೆಸ್ಕಾಂ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.
ಬೆಂಗಳೂರು ಕವಿಪ್ರನಿನಿ ವತಿಯಿಂದ 66/11 ಕೆ.ವಿ. ರಾಜರಾಜೇಶ್ವರಿ ನಗರ ಉಪಕೇಂದ್ರದಲ್ಲಿ ತುರ್ತು ನಿರ್ವಹಣಾ ಕಾಮಗಾರಿ ಹಿನ್ನಲೆಯಲ್ಲಿ ಜಯನಗರ ವಿಭಾಗದ ದ18ನೇ ಉಪವಿಭಾಗದ ಈ ಪ್ರದೇಶಗಳಾದ ಮ್ಯೆಲಸಂದ್ರ, ಐಡಿಯಲ್ ಹೋಮ್ಸ್, ಉತ್ತರಹಳ್ಳಿ, ಸಚ್ಚಿದಾನಂದ ನಗರ, ವಡ್ಡರ ಪಾಳ್ಯ, ಗಾಮಕಲ್ಲು, ಬೆಮ್ಎಲ್ ಲೇಔಟ್, ಬಿಹೆಚ್ ಸಿಎಸ್ ಲೇಔಟ್ ಮತ್ತು ಸುತ್ತಮುತ್ತಲ ಪ್ರದೇಶಗಳಲ್ಲಿ ದಿನಾಂಕ.19-10-2024 ರಂದು ಬೆಳಿಗ್ಗೆ 10.00 ರಿಂದ ಮಧ್ಯಾಹ್ನ 5.00 ಗಂಟೆಯವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ ಗ್ರಾಹಕರು ಸಹಕರಿಸಬೇಕಾಗಿ ವಿನಂತಿಸಿದೆ.
ದಿನಾಂಕ 19.10.2024 (ಶನಿವಾರ) ಬೆಳಿಗ್ಗೆ 10:00 ಗಂಟೆಯಿಂದ ಮದ್ಯಾಹ್ನ 01:00 ಗಂಟೆಯವರೆಗೆ 66/11ಕೆ.ವಿ ಬ್ರಿಗೇಡ್ ಮೆಟ್ರೋಪೋಲಿಸ್’ ಸ್ಟೇಷನ್ ನಲ್ಲಿ 31.5 ಎಮ್.ವಿ.ಎ ಶಕ್ತಿ ಪರಿವರ್ತಕ-01 ರ ತುರ್ತುನಿರ್ವಹಣಾ ಕೆಲಸಗಳನ್ನು ನಿರ್ವಹಿಸುವುದರಿಂದ ಈ ಕೆಳಗಿನ ಸ್ಥಳಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ ಎಂಬುದಾಗಿ ಬೆಸ್ಕಾಂ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿದೆ.
ವಿದ್ಯುತ್ ವ್ಯತ್ಯಯವಾಗುವ ಸ್ಥಳಗಳು:
“ ಹೆಚ್ ಜಿ ಶೀಲಾ ಬಿಲ್ಡಿಂಗ್ ಔಟರ್ ರಿಂಗ್ ರೋಡ್, ಬ್ರಿಗೇಡ್ ಮೆಟ್ರೋಪೋಲಿಸ್ ಡೆಫ್ ಬ್ಲಾಕ್, ಬ್ರಿಗೇಡ್ ಮೆಟ್ರೋಪಾಲಿಸ್ ಘಿ ಬ್ಲಾಕ್, ದೇವಸಂದ್ರ ಇಂಡಸ್ಟ್ರಿಯಲ್ ಎಸ್ಟೇಟ್, ಬ್ರಿಗೇಡ್ ನಲ್ಪಾಡ್ ಬಿಲ್ಡಿಂಗ್, ಡಬ್ಲ್ಯುಎಫ್‌ಡಿ ಮುಖ್ಯ ರಸ್ತೆ, ರಸ್ತೆ, ಮಾಲ್, ಬ್ರಿಗೇಡ್ ಮೆಟ್ರೋಪೋಲಿಸ್ ಎಬಿಸಿ ಬ್ಲಾಕ್, ನೆಟಾಪ್ ಇಂಡಿಯಾ ಪ್ರೈ ಲಿಮಿಟೆಡ್, ಡಬ್ಲ್ಯುಎಫ್‌ಡಿ ಮುಖ್ಯ ರಸ್ತೆ, ದರ‍್ಗಾ ಪೆಟಲ್ಸ್ ಅಪರ‍್ಟ್‌ಮೆಂಟ್, ಔಟರ್ ರಿಂಗ್ ರೋಡ್, ಫರ‍್ನ್ ಸಿಟಿ, ಫರ‍್ನ್ ಸಿಟಿ ರಸ್ತೆ, ಫರ‍್ನ್ ಪ್ಯಾರಡೈಸ್, ಕುಸುಮಲ್ಲೊಯ್ಸ್ ಡಾಟಾ ಸೆಂಟರ್ ಕುಂಡನಹಳ್ಳಿ ಮುಖ್ಯ ರಸ್ತೆ (ಸತ್ವ ಡೇಟಾ ಸೆಂಟರ್), ಬ್ಯಾಗ್‌ಮನೆ ಐಟಿ ಪಿ ”
ಬೆಳಿಗ್ಗೆ 11ರಿಂದ ಮಧ್ಯಾಹ್ನ 4 ಗಂಟೆಯವರೆಗೆ ಈ ಏರಿಯಾದಲ್ಲಿ ಪವರ್ ಕಟ್
ದಿನಾಂಕ 19.10.2024 (ಶನಿವಾರ) ಬೆಳಿಗ್ಗೆ 11:00 ಗಂಟೆಯಿAದ ಮಧ್ಯಾಹ್ನ 04:00 ಗಂಟೆಯವರೆಗೆ “66/11 ಕೆ.ವಿ ಶೋಭಾ ಸಿಟಿ ಉಪ-ಕೇಂದ್ರÀ” ದಲ್ಲಿ ತುರ್ತುನಿರ್ವಹಣಾ ಕೆಲಸಗಳನ್ನು ನಿರ್ವಹಿಸುವುದರಿಂದ ಈ ಕೆಳಗಿನ ಸ್ಥಳಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗುವುದು.
ಶೊಭಾ ಸಿಟಿ, ಚೊಕ್ಕನಹಳ್ಳಿ, ಡೋಮಿನೊ ಪಿಜ್ಜಾ ಇನ್ ಪ್ಯಾರಡೈಸ್ ನೂರ್ ನಗರ, ಎಕ್ಸ್ ಸರ್ವಿಸ್‌ಮೆನ್ ಲೇಔಟ್, ಪೋಲೀಸ್ ಕ್ವಾಟ್‌ರ್ಸ್, ಆರ್ ಕೆ ಹೆಗ್ಡೆ ನಗರ, ಶಬರಿ ನಗರ, ಹೊಸ ಶಾಂತಿ ನಗರ, ಕೆಂಪೇಗೌಡ ಲೇಯು, ನಾಗೇನಹಳ್ಳಿ ಗ್ರಾಮ, ರೀಜೆನ್ಸಿ ಪರ‍್ಕ್, ಎಸ್ತರ್ ಹರ‍್ಮೋನಿಕ್ ಲೇಔಟ್, ಬಾಲಾಜಿ ಲೇಔಟ್, ನಾಗೇನಹಳ್ಳಿ ಜಿಮ್, ಸ್ಲಂ ಬರ‍್ಡ್ ಮತ್ತು ಬೆಂಚ್ ರಾಯಲ್ ವುಡ್, ರ‍್ಕಾವತಿ ಲೇಔಟ್ ಥಣಿಸಂದ್ರ, ಆರ್ ಕೆ ಹೆಗಡೆ ನಗರ, ಬೆಳ್ಳಹಳ್ಳಿ ಗ್ರಾಮ, ತಿರುಮೇನಹಳ್ಳಿ ಗ್ರಾಮ, ಮಿತ್ತಗಾನಹಳ್ಳಿ ಮತ್ತು ಕೋಗಿಲು ಗ್ರಾಮ, ಬೆಲಹಳ್ಳಿ, ವಿಧಾನಸೌಧ ಲೇಔಟ್, ರ‍್ನಾಟಕ ಕಾಲೇಜು ಮತ್ತು ಸುತ್ತಮುತ್ತಲಿನ ಪ್ರದೇಶಗಳು, ”.
ಮಧ್ಯಾಹ್ನ 1ರಿಂದ ಸಂಜೆ 4 ಗಂಟೆಯವರೆಗೆ ಈ ಪ್ರದೇಶಗಳಲ್ಲಿ ಕರೆಂಟ್ ಇರಲ್ಲ
ದಿನಾಂಕ 19.10.2024 (ಶನಿವಾರ) ಮದ್ಯಾಹ್ನ 01:00 ಗಂಟೆಯಿAದ ಸಂಜೆ 04:00 ಗಂಟೆಯವರೆಗೆ 66/11ಕೆ.ವಿ ಬ್ರಿಗೇಡ್ ಮೆಟ್ರೋಪೋಲಿಸ್’ ಸ್ಟೇಷನ್ ನಲ್ಲಿ 31.5 ಎಮ್.ವಿ.ಎ ಶಕ್ತಿ ಪರಿವರ್ತಕ-02 ರ ತುರ್ತುನಿರ್ವಹಣಾ ಕೆಲಸಗಳನ್ನು ನಿರ್ವಹಿಸುವುದರಿಂದ ಈ ಕೆಳಗಿನ ಸ್ಥಳಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗುವುದು.
“ ದೊಡ್ಡನೆಕ್ಕುಂಡಿ ಇಂಡಸ್ಟ್ರಿಯಲ್ ಏರಿಯಾ, ಆಲ್ಫೈನ್ ಇಕೋ ರೋಡ್, ಫ್ರೆಂಡ್ಸ್ ಲೇಔಟ್, ಬ್ರಿಗೇಡ್ ಮೆಟ್ರೋಪೋಲಿಸ್ ಕಾಮನ್ ಏರಿಯಾ ಆಯೌಟ್, ಕುಂದನ ಹಳ್ಳಿ ಮುಖ್ಯ ರಸ್ತೆ, ಆಶ್ರಯ ಲೇಔಟ್, ಸರ್ ಎಂ ವಿಶ್ವೇಶ್ವರಯ್ಯ ಕೈಗಾರಿಕಾ ಪ್ರದೇಶ , ಯುನೈಟೆಡ್ ಆಕ್ಸಿಜನ್ ಅಪರ‍್ಟ್‌ಮೆಂಟ್ ಕಾವೇರಿನಗರ ಪ್ರವೇಶ, ಪ್ರೆಸ್ಟೀಜ್ ಟೆಕ್ನೋ ಸ್ಟಾರ್ ಐಟಿ ಪಾರ್ಕ್ ನಲ್ಲಿ ಕರೆಂಟ್ ಇರೋದಿಲ್ಲ.