ಬೆಂಗಳೂರು: ನಾನು ಮುಡಾದ ಯಾವುದೇ ಫೈಲ್ ಗಳನ್ನು ತಂದಿಲ್ಲ. ಈ ಬಗ್ಗೆ ದೇವರ ಮುಂದೆ ಆಣೆ ಮಾಡೋದಕ್ಕೂ ನಾನು ಸಿದ್ಧ ಎಂಬುದಾಗಿ ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ಸ್ಪಷ್ಟ ಪಡಿಸಿದ್ದಾರೆ.
ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು ಮುಡಾ ಹಗರಣದಲ್ಲಿ ಸಿಎಂ ತಪ್ಪು ಇಲ್ಲವೇ ಇಲ್ಲ. ಇದು ರಾಜಕೀಯ ಪ್ರೇರಿತ ದಾಳಿಯಾಗಿದೆ. ನಾನಂತೂ ಮುಡಾದಿಂದ ಯಾವುದೇ ಫೈಲ್ ತಗೊಂಡು ಬಂದಿಲ್ಲ ಎಂಬುದಾಗಿ ತಿಳಿಸಿದರು.
ಮೋಸ್ಟ್ಲೀ ಛಲವಾದಿ ನಾರಾಯಣಸ್ವಾಮಿ ಮನೆಯಲ್ಲಿ ಇರಬೇಕು. ಇಲ್ಲದೇ ಕುಮಾರಸ್ವಾಮಿ ತಂದಿರಬೇಕು. ನಾನು ಮುಡಾದಿಂದ ಒಂದೇ ಒಂದು ಸಣ್ಣ ಪೇಪರ್ ತಂದಿಲ್ಲ. ನಾನು ಚಾಮುಂಡೇಶ್ವರಿ, ಮಂಜುನಾಥನ ಮೇಲೆ ಬೇಕಾದ್ರೂ ಆಣೆ ಪ್ರಮಾಣಕ್ಕೆ ಸಿದ್ಧ ಎಂಬುದಾಗಿ ಹೇಳಿದರು.
ಅಂದಹಾಗೇ ಬಿಜೆಪಿ ಸೇರಿದಂತೆ ವಿಪಕ್ಷಗಳ ನಾಯಕರು ಮುಡಾದಿಂದ ಫೈಲ್ ತಂದಿದ್ದಾರೆ. ರಾತ್ರೋ ರಾತ್ರಿ ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ಫೈಲ್ ಹೆಲಿಕಾಪ್ಟರ್ ಮೂಲಕ ತಂದಿದ್ದಾರೆ. ಇವುಗಳನ್ನೇ ಸಿಎಂ ಸಿದ್ಧರಾಮಯ್ಯ ಸುದ್ದಿಗೋಷ್ಠಿಯಲ್ಲಿ ತೋರಿಸಿ ಮಾತನಾಡಿದ್ದು ಎಂಬುದಾಗಿ ಆರೋಪ ಮಾಡಿದ್ದರು. ಇದಕ್ಕೆ ಇಂದು ನಾನು ಯಾವುದೇ ಮುಡಾ ಫೈಲ್ ತಂದಿಲ್ಲ ಅಂತ ಅವರು ಸ್ಪಷ್ಟ ಪಡಿಸಿದ್ದಾರೆ.
ಕನ್ನಡ ರಾಜ್ಯೋತ್ಸವ ಪೂರ್ವಬಾವಿ ಸಭೆ: ಸಕಲ ಸಿದ್ದತೆಗೆ ಶಿವಮೊಗ್ಗ ಡಿಸಿ ಗುರುದತ್ತ ಹೆಗಡೆ ಸೂಚನೆ
BREAKING: ಮುಡಾ ಹಗರಣ: ಅಕ್ರಮ ಹಣ ವರ್ಗಾವಣೆ ಬಗ್ಗೆ ‘ಕಮೀಷನರ್’ಗೆ 41 ಪ್ರಶ್ನೆ ಕೇಳಿದ ‘ED’
ಬಾಲ್ಯ ವಿವಾಹ ತಡೆಗಟ್ಟುವ ಕಾನೂನನ್ನು ವೈಯಕ್ತಿಕ ಕಾನೂನುಗಳಿಂದ ತಡೆಯಲು ಸಾಧ್ಯವಿಲ್ಲ: ಸುಪ್ರೀಂ ಕೋರ್ಟ್