ಕೆಎನ್ಎನ್‍ಡಿಜಿಟಲ್ ಡೆಸ್ಕ್ : ನೋಕಿಯಾ ಸುಮಾರು 2,000 ಉದ್ಯೋಗಿಗಳನ್ನು ವಜಾಗೊಳಿಸುತ್ತಿದೆ ಎಂದು ವರದಿಯಾಗಿದೆ, ಇದು ಗ್ರೇಟರ್ ಚೀನಾದಲ್ಲಿ ತನ್ನ ಉದ್ಯೋಗಿಗಳ ಶೇಕಡಾ 20ರಷ್ಟಿದೆ. ವೆಚ್ಚ ಕಡಿತ ಕಾರ್ಯತಂತ್ರದ ಭಾಗವಾಗಿ ಯುರೋಪಿನಾದ್ಯಂತ ಹೆಚ್ಚುವರಿ 350 ಉದ್ಯೋಗಗಳನ್ನು ಕಡಿತಗೊಳಿಸಲು ಯೋಜಿಸಿದೆ ಎಂದು ವರದಿ ತಿಳಿಸಿದೆ.
ಯುರೋಪ್ನಲ್ಲಿ 350 ಉದ್ಯೋಗಿಗಳನ್ನ ವಜಾಗೊಳಿಸುವ ಬಗ್ಗೆ ಕಂಪನಿಯು ಸಮಾಲೋಚನೆಗಳನ್ನ ಪ್ರಾರಂಭಿಸಿದೆ ಎಂದು ನೋಕಿಯಾ ವಕ್ತಾರರು ದೃಢಪಡಿಸಿದ್ದಾರೆ. ಆದ್ರೆ, ಗ್ರೇಟರ್ ಚೀನಾದಲ್ಲಿನ ಪರಿಸ್ಥಿತಿಯ ಬಗ್ಗೆ ಪ್ರತಿಕ್ರಿಯಿಸಲು ನಿರಾಕರಿಸಿದ್ದಾರೆ ಎಂದು ವರದಿ ಹೇಳಿದೆ.
ನೋಕಿಯಾ ತನ್ನ ವಾರ್ಷಿಕ ವರದಿಯ ಪ್ರಕಾರ, ಡಿಸೆಂಬರ್ 2023 ರ ಹೊತ್ತಿಗೆ ಗ್ರೇಟರ್ ಚೀನಾದಲ್ಲಿ 10,400 ಮತ್ತು ಯುರೋಪ್ನಲ್ಲಿ 37,400 ಉದ್ಯೋಗಿಗಳನ್ನು ಹೊಂದಿದೆ. ಕಳೆದ ವರ್ಷ, ವೆಚ್ಚವನ್ನ ಕಡಿಮೆ ಮಾಡುವ ಕಾರ್ಯತಂತ್ರದ ಭಾಗವಾಗಿ ಕಂಪನಿಯು 14,000 ಉದ್ಯೋಗಗಳನ್ನ ಕಡಿತಗೊಳಿಸುವ ಯೋಜನೆಗಳನ್ನ ಘೋಷಿಸಿತು, 2026ರ ವೇಳೆಗೆ 800 ಮಿಲಿಯನ್ ಯುರೋಗಳು ($ 868 ಮಿಲಿಯನ್) ಮತ್ತು 1.2 ಬಿಲಿಯನ್ ಯುರೋಗಳನ್ನ ಉಳಿಸುವ ಗುರಿಯನ್ನ ಹೊಂದಿದೆ. ಕಡಿತವು ಆ ಯೋಜನೆಯ ಭಾಗವಾಗಿದೆ ಎಂದು ಮೂಲಗಳು ವರದಿಯಲ್ಲಿ ತಿಳಿಸಿವೆ.
‘ಬಾಲ್ಯ ವಿವಾಹ ಕಾಯ್ದೆ’ ಮೇಲೆ ‘ವೈಯಕ್ತಿಕ ಕಾನೂನು’ಗಳು ಮೇಲುಗೈ ಸಾಧಿಸಲು ಸಾಧ್ಯವಿಲ್ಲ : ಸುಪ್ರೀಂ ಕೋರ್ಟ್
ಬಾಲ್ಯ ವಿವಾಹ ‘ಜೀವನ ಸಂಗಾತಿ’ಯನ್ನ ಆಯ್ಕೆ ಮಾಡುವ ಸ್ವಾತಂತ್ರ ಕಸಿದುಕೊಳ್ಳುತ್ತೆ : ಸುಪ್ರೀಂ ಕೋರ್ಟ್
ಪಂಚಮಸಾಲಿ ಮೀಸಲಾತಿ ವಿಚಾರ: ಹೀಗಿದೆ ಸಿಎಂ ಸಿದ್ಧರಾಮಯ್ಯ ನೇತೃತ್ವದಲ್ಲಿ ನಡೆದ ಸಭೆಯ ಹೈಲೈಟ್ಸ್