ರಾಯಚೂರು: ರಾಜ್ಯದ ಸರ್ಕಾರಿ ಆಸ್ಪತ್ರೆಯೊಂದರಲ್ಲಿದ್ದಂತ ಲಕ್ಷಾಂತರ ರೂ ಬೆಲೆ ಬಾಳುವಂತ ಯಂತ್ರೋಪಕರಣಗಳು ಕಳವು ಆಗಿರುವುದಾಗಿ ತಿಳಿದು ಬಂದಿದೆ.
ರಾಯಚೂರು ಜಿಲ್ಲೆಯ ದೇವದುರ್ಗ ಸರ್ಕಾರಿ ಆಸ್ಪತ್ರೆಯಲ್ಲೇ ಉಪಕರಣಗಳು ಕಳ್ಳತನವಾಗಿದ್ದಾವೆ. ದೇವದುರ್ಗ ಸರ್ಕಾರಿ ಆಸ್ಪತ್ರೆಯ ಲ್ಯಾಬ್ ನಲ್ಲಿದ್ದಂತ ಲಕ್ಷಾಂತರ ರೂ ಮೌಲ್ಯದ ಉಪಕರಣಗಳು ಕಳ್ಳತನವಾಗಿದ್ದಾವೆ.
ಲ್ಯಾಬ್ ನಲ್ಲಿದ್ದಂತ 10 ಲಕ್ಷ ಮೌಲ್ಯದ ಮೂರು ಯಂತ್ರೋಪಕರಣಗಳನ್ನು ಕದಿಯಲಾಗಿದೆ. ಅಲ್ಲದೇ ಸಿಸಿಟಿವಿ ಡಿವಿಆರ್, ರಕ್ತ ಪರೀಕ್ಷೆ ಮಾಡುವಂತ ಅತ್ಯಾಧುನಿಕ ಯಂತ್ರ, ಎಲೆಕ್ಟ್ರೋಲೈಟ್ ಸೇರಿದಂತೆ ಸುಮಾರು 10 ಲಕ್ಷ ಮೌಲ್ಯದ ಉಪಕರಣಗಳನ್ನು ಕಳ್ಳತನ ಮಾಡಲಾಗಿದೆ.
ಈ ಸಂಬಂಧ ದೇವದುರ್ಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕಳ್ಳರ ಪತ್ತೆಗೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಈ ಬಗ್ಗೆ ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.
Gold Rate Today: ಆಭರಣ ಪ್ರಿಯರಿಗೆ ಮತ್ತೆ ಶಾಕ್: ಚಿನ್ನದ ಬೆಲೆ ಏರಿಕೆ, ಇಂದು ಎಷ್ಟಿದೆ ಬೆಲೆ.? ಇಲ್ಲಿದೆ ಡೀಟೆಲ್ಸ್
BREAKING : ಕಲಬುರ್ಗಿ ಜೈಲಲ್ಲಿ ಕೈದಿಗಳಿಗೆ ‘ರಾಜಾತಿಥ್ಯ’ ಆರೋಪ ಪ್ರಕರಣ : ‘CCB’ ತನಿಖೆಗೆ ವಹಿಸಿ ಕಮಿಷನರ್ ಆದೇಶ