ಶಿವಮೊಗ್ಗ: ಕನ್ನಡದ ಬಿಗ್ ಬಾಸ್ ಸೀಜನ್ 11ಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ಇಂದಿಗೆ 19 ದಿನ ಬಿಗ್ ಬಾಸ್ ಕನ್ನಡ ಆರಂಭಗೊಂಡ ಬಳಿಕ, ಈಗ ದೊಡ್ಡ ಸಂಕಷ್ಟವೇ ಎದುರಾಗಿದೆ. ಬಿಗ್ ಬಾಸ್ ಶೋಗೆ ಶಿವಮೊಗ್ಗ ಜಿಲ್ಲೆಯ ಸಾಗರ ನಗರದ ಕೋರ್ಟ್ ತುರ್ತು ನೋಟಿಸ್ ಜಾರಿಗೊಳಿಸಿದೆ. ಹೀಗಾಗಿ ಕನ್ನಡದ ಬಿಗ್ಬಾಸ್ ಸೀಸನ್ 11ಗೆ ದೊಡ್ಡ ಸಂಕಷ್ಟ ಎದುರಾಗಿದೆ.
ಶಿವಮೊಗ್ಗ ಜಿಲ್ಲೆಯ ಸಾಗರ ನ್ಯಾಯಾಲಯಕ್ಕೆ ವಕೀಲ ಕೆ.ಎಲ್ ಭೋಜರಾಜ್ ಅವರು ಕನ್ನಡದ ರಿಯಾಲಿಟಿ ಶೋ ಬಿಗ್ ಬಾಸ್ ಕನ್ನಡ 11 ಕುರಿತಂತೆ ಅರ್ಜಿಯನ್ನು ಸಲ್ಲಿಸಿದ್ದರು. ಅದರಲ್ಲಿ ದಿನಾಂಕ: 29-ಸೆಪ್ಟೆಂಬರ್-2024 ರಿಂದ Colors ಕನ್ನಡ ವಾಹಿನಿ ಹಾಗೂ voot app ನಲ್ಲಿ ಬಿಗ್ ಬಾಸ್ ಸೀಸನ್ 11 ಕಾರ್ಯಕ್ರಮವು ಪ್ರಸಾರವಾಗಿರುತ್ತದೆ. ಇದರಲ್ಲಿ ಕನ್ನಡದ ಖ್ಯಾತ ನಟರಾದ ಸುದೀಪ್ ಅವರು 17 ಸ್ಪರ್ಧಿಗಳನ್ನು ಘೋಷಣೆ ಮಾಡಿ, ಸಾರ್ವಜನಿಕರಿಗೆ ಸ್ಪರ್ಧಿಗಳನ್ನು ಪರಿಚಯಿಸಿರುತ್ತಾರೆ. ಈ 17 ಜನ ಸ್ಪರ್ಧಿಗಳ ಪೈಕಿ, ಅಪರಾಧ ಹಿನ್ನೆಲೆಯುಳ್ಳ ಚೈತ್ರ ಕುಂದಾಪುರ ಇವರನ್ನೂ ಸಹ ಸ್ಪರ್ಧಿಯಾಗಿ ಘೋಷಣೆ ಮಾಡಿರುವುದು ಕನ್ನಡದ ಕೋಟ್ಯಾಂತರ ಬಿಗ್ ಬಾಸ್ ಸೀಸನ್ 11 ವೀಕ್ಷಕರಿಗೆ ಹಾಗು ಸಾರ್ವಜನಿಕರಿಗೆ ಆಘಾತ ಉಂಟಾಗಿರುತ್ತದೆ ಎಂದಿದ್ದರು.
ಅತ್ಯಂತ ಜನಪ್ರಿಯವಾಗಿರುವ ಬಿಗ್ ಬಾಸ್ ಕಾರ್ಯಕ್ರಮದಲ್ಲಿ ನಟ ಸುದೀಪ್ ಅವರು ಚೈತ್ರ ಕುಂದಾಪುರ ಇವರನ್ನು “ಹಿಂದೂ fire brand” ಎಂದು ಹೊಗಳಿದ್ದಲ್ಲದೆ, ಇವರ ಕುಟುಂಬದವರನ್ನು ಕೂಡಾ ಹೊಗಳುವ ಸಂದರ್ಭದಲ್ಲಿ ಚೈತ್ರಾ ಇವರು ‘ಹಿಂದಿನ season ನಡೆಯುವ ಸಂದರ್ಭದಲ್ಲಿ ಜೈಲಿನಲ್ಲಿ ಇದ್ದುಕೊಂಡು ವೀಕ್ಷಣೆ ಮಾಡಿದ್ದೇನೆ’ ಎಂದು ಹೇಳಿರುವುದು ಪ್ರೇಕ್ಷಕರಲ್ಲಿ ಮುಜುಗರ ಉಂಟಾಗಿರುತ್ತದೆ. ಈಗಾಗಲೇ ಚೈತ್ರ ಕುಂದಾಪುರ ಇವರ ಮೇಲೆ ಸುಮಾರು 11 ಕೇಸ್ ಗಳು ದಾಖಲಾಗಿದ್ದು ಅವುಗಳು ಈ ಕೆಳಗಿನಂತಿವೆ;
1. Koppal Rural PS crime no. 116/2018 IPC U/S 143, 147, 504, 323, 341, 427, 506, 149 IPC
2. Gangavati town PS crime no. 168/2018 IPC U/S 125 RP Act
3. Gangavati town PS crime no. 170/2018 IPC U/S 505(2)
4. Gangawati town PS crime no. 181/2018 IPC U/S 34, 188 IPC
5. Koppal Rural PS crime no. 117/2021 IPC U/S 171 h, 171 G IPC, 125, 127 RP Act
6. Subramanya PS crime no. 054/2018 IPC U/S 143, 147, 148, 322, 448, 504, 506, 307 r/w 149 IPC
7. Suratkal PS crime no. 141/2021 IPC U/S 153A, 505(2) IPC
8. Udupi town PS crime no. 135/2018 IPC U/S 143, 147, 347, 504, 506 r/w 149 IPC
9. Udupi town PS crime no. 155/2018 IPC U/S 420, 465, 467, 468, 471 r/w 149 IPC
10. Suratkal PS crime no. 161/2021 IPC U/S 420, 465, 467, 468, 471 r/w 149 IPC
11. Bandepalya PS crime no. 206/2023 IPC U/S 406, 419, 420, 170, 506, 120B IPC
ಈ ಮೇಲ್ಕಂಡ ಕೇಸ್ ಗಳು ಗಲಾಟೆ, ದೊಂಬಿ, ಜೀವ ಬೆದರಿಕೆ ಹಾಗು ವಂಚನೆ ಪ್ರಕರಣಗಳಾಗಿರುತ್ತವೆ. ಇತ್ತೀಚೆಗೆ ತಾನು RSS ಹಾಗು ಬಿಜೆಪಿ ನಂಟು ಹೊಂದಿರುವುದಾಗಿ ಸುಳ್ಳು ಹೇಳಿ, ನಂಬಿಸಿ, ಖ್ಯಾತ ಉದ್ಯಮಿಯಾದ ಗೋವಿಂದ ಬಾಬು ಪೂಜಾರಿ ಇವರಿಗೆ ಸಾರ್ವತ್ರಿಕ ಚುನಾವಣೆಯಲ್ಲಿ ಚಿಕ್ಕಮಗಳೂರಿನ ಬಿಜೆಪಿ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ, ಗಗನ್ ಕಡೂರು ಅವರ ಮೂಲಕ ಟಿಕೆಟ್ ಕೊಡಿಸುವುದಾಗಿ ಹೇಳಿ ನಂಬಿಸಿ, ಸುಮಾರು 5,00,00,000(ಐದು ಕೋಟಿ) ರೂಪಾಯಿಗಳನ್ನು ವಂಚನೆ ಮಾಡಿದ್ದು, ಇದು ವಂಚನೆ ಎಂದು ತಿಳಿದು ಬಂದು, ಸದರಿ ಗೋವಿಂದ ಪೂಜಾರಿ ರವರು ಬಂದೇಪಾಳ್ಯ ಪೊಲೀಸ್ ಠಾಣೆಯಲ್ಲಿ IPC 1860(u/s – 406, 419, 420, 170, 506, 120B) ರ ಅಡಿಯಲ್ಲಿ ಕೇಸ್ ದಾಖಲಿಸಿದ್ದು, ಸದರಿ ಕೇಸ್ ನಲ್ಲಿ ಚೈತ್ರ ಕುಂದಾಪುರ ಇವರನ್ನು ಮೊದಲನೇ ಆರೋಪಿಯನ್ನಾಗಿ ಮಾಡಿ 8 ಜನರ ಮೇಲೆ ಕೇಸ್ ನೊಂದಾಯಿಸಿ, ಸುಮಾರು 3,75,00,000/-(ಮೂರು ಕೋಟಿ ಎಪ್ಪತ್ತೈದು ಲಕ್ಷ) ಗಿಂತಲೂ ಹೆಚ್ಚು ಹಣವನ್ನು ಸದರಿ ಆರೋಪಿಗಳಿಂದ ಹಣವನ್ನು ವಸೂಲಿ ಮಾಡಿದ್ದು, ಇವರ ಮೇಲೆ ಚಾರ್ಜ್ ಶೀಟ್ ಕೂಡಾ ಆಗಿದ್ದು, ಇದರ CC no. 31132/2023 ಆಗಿರುತ್ತದೆ. ಹೀಗಿದ್ದಾಗ್ಯೂ ಸಹ ಸದರಿ ಆರೋಪಿಯನ್ನು colors ಕನ್ನಡ ವಾಹಿನಿ ಹಾಗೂ voot app ನಲ್ಲಿ ಪ್ರಸಾರವಾಗುತ್ತಿರುವ ಬಿಗ್ ಬಾಸ್ ಸೀಸನ್ 11 ಪ್ರತಿಸ್ಪರ್ಧಿಯಾಗಿ ನೇಮಿಸಿರುವುದು ವಿಷಾದಕರ. ವಾಹಿನಿಯನ್ನು ಕೋಟ್ಯಾಂತರ ಅಭಿಮಾನಿಗಳು, ಪ್ರೇಕ್ಷಕರು, ಸಾರ್ವಜನಿಕರು, ವಿಶೇಷವಾಗಿ ಮಕ್ಕಳು ವೀಕ್ಷಣೆ ಮಾಡುತ್ತಿದ್ದು, ಚೈತ್ರ ಕುಂದಾಪುರ ಇವರಿಂದ ಎಂತಹ ಸಂದೇಶವನ್ನು ಮೇಲ್ಕಂಡವರು ಪಡೆಯಬಹುದು?! ಎಂಬುದನ್ನು ಅಭಿಪ್ರಾಯಿಸಬಹುದಾಗಿದೆ ಎಂದು ಹೇಳಿದ್ದರು.
ಈ ಹಿಂದೆ ಮೇಲ್ಕಂಡ ವಂಚನೆ ಕೇಸ್ ಗೆ ಒಳಗಾಗಿರುವ ಚೈತ್ರ ಇವರ ಹೆಸರಿನ ಮುಂದೆ ‘ಕುಂದಾಪುರ’ ಎಂಬಿರುವ ಹೆಸರನ್ನು ತೆಗೆದು ಹಾಕುವಂತೆ, ಆ ಹೆಸರನ್ನು ಬಳಸಬಾರದು, ಬಳಸಿದ್ದಲ್ಲಿ, ಕುಂದಾಪುರದ ಜನತೆಗೆ ಅವಮಾರ್ಯಾದೆ ಆಗುತ್ತದೆ. ರಾಜ್ಯದ ಜನರು, ಕುಂದಾಪುರದ ಜನರನ್ನು ನೋಡುವ ದೃಷ್ಟಿಯೇ ಬದಲಾಗುತ್ತದೆ ಎಂಬ ವಿಚಾರವನ್ನು ಇಟ್ಟುಕೊಂಡು ಸ್ಥಳೀಯರು, ಚೈತ್ರ ಅವರ ಮುಂದಿರುವ ‘ಕುಂದಾಪುರ’ ಎಂಬ ನಾಮಾಂಕಿತವನ್ನ ತೆಗೆದು ಹಾಕುವಂತೆ ಪ್ರತಿಭಟನೆಯನ್ನು ಸಹ ಮಾಡಿರುತ್ತಾರೆ. ಹೀಗಿದ್ದಾಗ್ಯೂ ಸಹ ವಾಹಿನಿಯವರು ತಮ್ಮ TRP ಗಾಗಿ ಸಮಾಜದ ಸ್ವಾಸ್ಥ್ಯವನ್ನು ಹಾಳು ಮಾಡುತ್ತಿರುವುದು, ಮೇಲ್ನೋಟಕ್ಕೆ ಕಂಡುಬರುತ್ತದೆ ಎಂದಿದ್ದರು.
ಆದ್ದರಿಂದ ಬಿಗ್ ಬಾಸ್ ಸೀಸನ್ 11 ರ ಪ್ರತಿಸ್ಪರ್ಡಿಯಾದ ಸ್ವಯಂ ಘೋಷಿತ “ಹಿಂದೂ fire brand” ಎಂಬ ಹೆಸರನ್ನು ಇಟ್ಟುಕೊಂಡು, ಮತ್ತೊಬ್ಬ ಹಿಂದುವಾದ ಸಾಮಾಜಿಕ ಕಾರ್ಯಕರ್ತ, ಬಡವರ ಬಂಧುಗಳಾದ, ಗೋವಿಂದ ಬಾಬು ಪೂಜಾರಿ ಹಾಗೂ ಇನ್ನಿತರರಿಗೂ ಸಹ ಮೋಸ ವಂಚನೆ ಮಾಡಿದ್ದಾರೆ ಎಂಬ FIR ಮತ್ತು CC ಹೊಂದಿರುವ, ಚೈತ್ರ ಕುಂದಾಪುರ ಇವರನ್ನ ನೋಟಿಸ್ ನ ಪ್ರತಿಯಾದ ಇಮೇಲ್ ತಲುಪಿದ ತಕ್ಷಣವೇ ಸ್ಪರ್ಧೆಯಿಂದ ತೆಗೆದುಹಾಕಬೇಕು. ಇಲ್ಲದಿದ್ದಲ್ಲಿ ನಿಮ್ಮ ವಿರುದ್ಧ ಸೂಕ್ತ ಕಂಡ ನ್ಯಾಯಾಲಯದಲ್ಲಿ ಕಾನೂನು ಕ್ರಮ ಜರುಗಿಸಲಾಗುವುದು. ಇದರಿಂದ ಮುಂದೆ ಆಗುವ ಎಲ್ಲಾ ಆಗು ಹೋಗುಗಳಿಗೆ ತಾವೇ ಜವಾಬ್ದಾರರಾಗಿರುತ್ತೀರಿ ಎಂದು ಸಾಗರದ ವಕೀಲ ಕೆ.ಎಲ್ ಭೋಜರಾಜ್ ವಕೀಲರು ನೊಟೀಸ್ ಕಳುಹಿಸಿದ ನಂತರವೂ colors ಕನ್ನಡ ವಾಹಿನಿಯವರು ಸೂಕ್ತ ಕ್ರಮ ಕೈಗೊಂಡಿರುವುದಿಲ್ಲ ಎಂದಿದ್ದಾರೆ.
ಈ ಸಂಬಂಧಿತವಾಗಿ colors ಕನ್ನಡ ಹಾಗು voot app ನಲ್ಲಿ ಪ್ರಸಾರವಾಗುತ್ತಿರುವ ಬಿಗ್ ಬಾಸ್ ಸೀಸನ್ 11 ಕಾರ್ಯಕ್ರಮ ತಡೆಕೋರಿ ಸಾಗರದ ಕೆ ಎಲ್ ಬೋಜರಾಜ್ ವಕೀಲರು ಇಂಜೆಕ್ಷನ್ ದಾವೆ ಸಲ್ಲಿಸಿದ್ದು ಸಾಗರದ ಹೆಚ್ಚವರಿ ಸಿವಿಲ್ ನ್ಯಾಯಾಧೀಶರಾದ ಚಾಂದನಿ ರವರು ತುರ್ತು ನೋಟೀಸ್ ಜಾರಿಮಾಡಿ ಮುಂದಿನ ವಿಚಾರಣೆಯನ್ನು ದಿನಾಂಕ: 28-ಅಕ್ಟೋಬರ್-2024 ಕ್ಕೆ ನಿಗದಿಗೊಳಿಸಿದ್ದಾರೆ. ಒಂದು ವೇಳೆ ಅಂದು ಕೋರ್ಟ್ ಗೆ ಬಿಗ್ ಬಾಸ್ ಕನ್ನಡಕ್ಕೆ ಸಂಬಂಧಿಸಿದಂತ ವಕೀಲರು, ಕಲರ್ಸ್ ಕನ್ನಡ ವಾಹಿನಿಗೆ ಸಂಬಂಧಿಸಿದಂತ ವಕೀಲರು ಹಾಜರಾಗದೇ ಇದ್ದರೇ, ಬಿಗ್ ಬಾಸ್ ಕನ್ನಡ 11 ಪ್ರಸಾರ ಸ್ಥಗಿತಕ್ಕೂ ಕೋರ್ಟ್ ಆದೇಶಿಸುವ ಸಾಧ್ಯತೆ ಇದೆ.
BREAKING: ‘ಬಾಲಿವುಡ್ ನಟ ಸಲ್ಮಾನ್ ಖಾನ್’ಗೆ ಮತ್ತೊಂದು ‘ಕೊಲೆ ಬೆದರಿಕೆ’ ಸಂದೇಶ: 5 ಕೋಟಿ ನೀಡುವಂತೆ ಒತ್ತಾಯ
BREAKING : ಕಲಬುರ್ಗಿ ಜೈಲಲ್ಲಿ ಕೈದಿಗಳಿಗೆ ‘ರಾಜಾತಿಥ್ಯ’ ಆರೋಪ ಪ್ರಕರಣ : ‘CCB’ ತನಿಖೆಗೆ ವಹಿಸಿ ಕಮಿಷನರ್ ಆದೇಶ