ನವದೆಹಲಿ : ಕೆನಡಾದ ಪ್ರಧಾನಿ ಜಸ್ಟಿನ್ ಟ್ರುಡೋ ಬುಧವಾರ ಹೇಳಿಕೆಯೊಂದನ್ನ ನೀಡಿದ್ದು, ದಕ್ಷಿಣ ಏಷ್ಯಾದ ದೇಶದೊಂದಿಗಿನ ರಾಜತಾಂತ್ರಿಕ ವಿವಾದದ ಮಧ್ಯೆ ಭಾರತವು ‘ಭಾರಿ ತಪ್ಪು ಮಾಡಿದೆ ಮತ್ತು ದೇಶದ ಸಾರ್ವಭೌಮತ್ವವನ್ನು ಉಲ್ಲಂಘಿಸಿದೆ’ ಎಂದು ಹೇಳಿದ್ದಾರೆ.
ಕೆನಡಾದ ಆಂತರಿಕ ವಿಷಯಗಳಲ್ಲಿ ವಿದೇಶಿ ಹಸ್ತಕ್ಷೇಪದ ಬಗ್ಗೆ ಫೆಡರಲ್ ವಿಚಾರಣೆಯಲ್ಲಿ ಸಾಕ್ಷ್ಯ ನುಡಿಯುವಾಗ ಟ್ರುಡೊ ಈ ಹೇಳಿಕೆ ನೀಡಿದ್ದಾರೆ.
ಒಟ್ಟಾವಾದಲ್ಲಿದ್ದ ಆರು ಭಾರತೀಯ ರಾಜತಾಂತ್ರಿಕರನ್ನ ದೇಶವು ಹೊರಹಾಕಿದ ಕೆಲವೇ ದಿನಗಳ ನಂತರ ಕೆನಡಾ ಪ್ರಧಾನಿಯ ಹೇಳಿಕೆ ಬಂದಿದೆ. ಅಂದ್ಹಾಗೆ, ಕೆನಡಾದ ರಾಜತಾಂತ್ರಿಕರನ್ನ ಹೊರಹಾಕುವ ಮೂಲಕ ಭಾರತವು ತ್ವರಿತವಾಗಿ ಪ್ರತೀಕಾರ ತೀರಿಸಿಕೊಂಡಿದೆ.
ಕಳೆದ ಸೆಪ್ಟೆಂಬರ್’ನಲ್ಲಿ ಖಲಿಸ್ತಾನಿ ಭಯೋತ್ಪಾದಕ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಯಲ್ಲಿ ಭಾಗಿಯಾಗಿದ್ದಾರೆ ಎಂದು ಆರೋಪಿಸಿ ಕೆನಡಾವು ಒಟ್ಟಾವಾದಲ್ಲಿನ ಭಾರತೀಯ ರಾಜತಾಂತ್ರಿಕರನ್ನ ‘ಆಸಕ್ತಿಯ ವ್ಯಕ್ತಿಗಳು’ ಎಂದು ಕರೆದ ನಂತರ ರಾಜತಾಂತ್ರಿಕ ವಿವಾದವು ಉಲ್ಬಣಗೊಂಡಿತು.
ಫ್ರೀಯಾಗಿ ಸಿಗುತ್ತೆಂದು ‘ಪಡಿತರ ಅಕ್ಕಿ’ ಕೀಳಾಗಿ ನೋಡ್ಬೇಡಿ, ಇದ್ರಲ್ಲಿರುವ ‘ಆರೋಗ್ಯ ಪ್ರಯೋಜನ’ಗಳು ಅಷ್ಟಿಷ್ಟಲ್ಲ!
SHOCKING : ಶಿವಮೊಗ್ಗದಲ್ಲಿ ವಾಲಿಬಾಲ್ ತರಬೇತಿ ವೇಳೆ ಕುಸಿದು ಬಿದ್ದು ಶಾಲಾ ಶಿಕ್ಷಕ ಸಾವು!
‘ಕಾನೂನು ಕುರುಡಲ್ಲ’ : ಸುಪ್ರೀಂ ಕೋರ್ಟ್’ನಲ್ಲಿ ಹೊಸ ‘ನ್ಯಾಯದೇವತೆ ಪ್ರತಿಮೆ’ ಅನಾವರಣ