ಬೆಂಗಳೂರು: ವಾಲ್ಮೀಕಿ ನಿಗದಮ ಹಗರಣದಲ್ಲಿ ನನ್ನ ಯಾವುದೇ ಪಾತ್ರವಿಲ್ಲ. ಹೀಗಿದ್ದೂ ನನ್ನ ವಿರುದ್ಧ ಇಡಿ ಅಧಿಕಾರಿಗಳು ಕೇಸ್ ದಾಖಲಿಸಿಕೊಂಡಿದ್ದಾರೆ. ನನ್ನ ಬಂಧನದ ಬಳಿಕ ವಿಚಾರಣೆ ವೇಳೆಯಲ್ಲಿ ಇಡಿ ಅಧಿಕಾರಿಗಳು ಸಿಎಂ ಸಿದ್ಧರಾಮಯ್ಯ, ಡಿಸಿಎಂ ಡಿ.ಕೆ ಶಿವಕುಮಾರ್ ಅವರ ಹೆಸರು ಹೇಳುವಂತೆಯೂ ಒತ್ತಾಯ, ಒತ್ತಡ ಹಾಕಿದ್ದಾಗೆ ಮಾಜಿ ಸಚಿವ ಬಿ.ನಾಗೇಂದ್ರ ಸ್ಪೋಟಕ ಹೇಳಿಕೆ ನೀಡಿದ್ದಾರೆ.
ಇಂದು ಸುದ್ದಿಗಾರರೊಂದಿಗೆ ನಗರದಲ್ಲಿ ಮಾತನಾಡಿದಂತ ಅವರು, ಇಡಿ ಅಧಿಕಾರಿಗಳು ಸಿಎಂ ಸಿದ್ಧರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಅವರ ಹೆಸರನ್ನು ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣದಲ್ಲಿ ಹೇಳುವಂತೆ ಒತ್ತಡ ಹಾಕಿದರು. ಆದರೇ ನಾನೇ ಭಾಗೀಯಾಗಿಲ್ಲ, ಇನ್ನೂ ಸಿಎಂ, ಡಿಸಿಎಂ ಹೆಸರೇಕೆ ಹೇಳಲಿ ಎಂದು ಗುಡುಗಿದರು.
ಇಡಿ ಅಧಿಕಾರಿಗಳು ಬಿಜೆಪಿ ಕೈಗೊಂಬಿಯಾಗಿದ್ದಾರೆ. ಬಿಜೆಪಿ ಕೈಗೊಂಬೆಯಾಗಿ ರಾಜ್ಯ ಕಾಂಗ್ರೆಸ್ ಸರ್ಕಾರ ಅಸ್ಥಿರ ಮಾಡಲು ಹೊರಟಿದ್ದಾರೆ. ರಾಜ್ಯದಲ್ಲಿ ತಮ್ಮ ಬಿಜೆಪಿ ಸರ್ಕಾರ ತರಲು ಬಿಜೆಪಿ ಇಡಿ ಬಳಸಿಕೊಳ್ಳುತ್ತಿದೆ. ನನಗೂ ವಾಲ್ಮೀಕಿ ನಿಗಮದ ಹಗರಣಕ್ಕೂ ಯಾವುದೇ ಸಂಬಂಧವಿಲ್ಲ ಎಂಬುದಾಗಿ ಮಾಜಿ ಸಚಿವ ಬಿ.ನಾಗೇಂದ್ರ ಸ್ಪಷ್ಟ ಪಡಿಸಿದರು.