ಬೆಂಗಳೂರು: ನಗರದಲ್ಲಿ ಎಡಬಿಡದೇ ಮಳೆ ಸುರಿಯುತ್ತಿದೆ. ಮಳೆಯಿಂದಾಗಿ ರಸ್ತೆಗಳು ಜಲಾವೃತಗೊಂಡು ಸಂಚಾರ ದಟ್ಟಣೆಯೇ ಉಂಟಾಗಿದೆ. ಈ ಹಿನ್ನಲೆಯಲ್ಲಿ ನಾಳೆ ಐಟಿ, ಬಿಟಿ ಉದ್ಯೋಗಿಗಳಿಗೆ ಮನೆಯಿಂದಲೇ ಕೆಲಸ ಮಾಡುವಂತೆ ಅವಕಾಶ ನೀಡಲು ಕಂಪನಿಗಳಿಗೆ ಕರ್ನಾಟಕ ನಾವೀನ್ಯತೆ ಮತ್ತು ತಂತ್ರಜ್ಞಾನ ಸೊಸೈಟಿ( KITS) ಸೂಚಿಸಿದೆ.
ಈ ಸಂಬಂಧ ಇಂದು ಬೆಂಗಳೂರಿನ ಎಲ್ಲಾ ಐಟಿ, ಬಿಟಿ ಕಂಪನಿಗಳಿಗೆ ಪತ್ರ ಬರೆದಿರುವಂತ ಕೆಐಟಿಎಸ್, ಬೆಂಗಳೂರು ನಗರದಲ್ಲಿ ನಿರಂತರ ಮತ್ತು ಭಾರಿ ಮಳೆ ಮತ್ತು ಹವಾಮಾನ ಇಲಾಖೆ ಹೊರಡಿಸಿದ ಆರೆಂಜ್ ಅಲರ್ಟ್ ಹಿನ್ನೆಲೆಯಲ್ಲಿ, ಬೆಂಗಳೂರಿನಲ್ಲಿರುವ ಐಟಿ, ಬಿಟಿ ಮತ್ತು ಖಾಸಗಿ ಕಂಪನಿಗಳಲ್ಲಿ ಕೆಲಸ ಮಾಡುವ ಎಲ್ಲಾ ಉದ್ಯೋಗಿಗಳ ಸುರಕ್ಷತೆ ಮತ್ತು ಯೋಗಕ್ಷೇಮಕ್ಕೆ ನಾವು ಆದ್ಯತೆ ನೀಡುತ್ತಿದ್ದೇವೆ. ಪ್ರವಾಹ, ಜಲಾವೃತ ಮತ್ತು ಸಂಚಾರ ದಟ್ಟಣೆಯಿಂದಾಗಿ ಸಾರಿಗೆ ವ್ಯವಸ್ಥೆಗಳು ಅಸ್ತವ್ಯಸ್ತಗೊಳ್ಳುವುದರಿಂದ, ಕಚೇರಿಗೆ ತೆರಳಿ ಕೆಲಸ ಮಾಡೋದಕ್ಕೆ ಉದ್ಯೋಗಿಗಳಿಗೆ ಕಷ್ಟಕರವಾಗಲಿದೆ ಎಂದಿದೆ.
ಮುನ್ನೆಚ್ಚರಿಕೆ ಕ್ರಮವಾಗಿ, ಐಟಿ, ಬಿಟಿ ಮತ್ತು ಖಾಸಗಿ ಕಂಪನಿಗಳು ತಮ್ಮ ಉದ್ಯೋಗಿಗಳಿಗೆ 2024 ರ ಅಕ್ಟೋಬರ್ 16 ರಂದು ಮನೆಯಿಂದ ಕೆಲಸ ಮಾಡಲು (ಡಬ್ಲ್ಯುಎಫ್ಎಚ್) ಅನುಮತಿ ನೀಡುವಂತೆ ಶಿಫಾರಸು ಮಾಡಲಾಗಿದೆ ಎಂದು ತಿಳಿಸಿದೆ.
BREAKING: ಕೆಲವೇ ಕ್ಷಣಗಳಲ್ಲಿ ಆರಂಭಗೊಳ್ಳಬೇಕಿದ್ದ ಡಿಸಿಎಂ ಡಿ.ಕೆ ಶಿವಕುಮಾರ್ ‘ಬೆಂಗಳೂರು ಸಿಟಿ ರೌಂಡ್ಸ್’ ರದ್ದು
ಚಿತ್ರದುರ್ಗದಲ್ಲಿ ಮನಕಲಕುವ ಘಟನೆ : ಪತ್ನಿ ಸಾವಿನಿಂದ ನೊಂದು ಪತಿಯೂ ನೇಣು ಬಿಗಿದುಕೊಂಡು ಆತ್ಮಹತ್ಯೆ!