Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ALERT : ಪೋಷಕರೇ ಎಚ್ಚರ : ಗಂಟಲಲ್ಲಿ ಕೂಲ್ ಡ್ರಿಂಕ್ಸ್ ಬಾಟಲಿಯ `ಮುಚ್ಚಳ ‘ ಸಿಲುಕಿ 18 ತಿಂಗಳ ಮಗು ಸಾವು.!

11/02/2026 12:24 PM

Shocking: ನೀವು ಕುಡಿಯುವ ಹಾಲು ಎಷ್ಟು ಸುರಕ್ಷಿತ? ಮದರ್ ಡೈರಿ,ಅಮುಲ್ ಸೇರಿ ಪ್ರಮುಖ ಬ್ರ್ಯಾಂಡ್‌ಗಳ ಕ್ವಾಲಿಟಿ ಫೇಲ್ !

11/02/2026 12:22 PM

BIG NEWS : ನಾನಾಗಲಿ ಡಿಕೆ ಶಿವಕುಮಾರ್ ಅಗಲಿ, ಹೈಕಮಾಂಡ್ ಹೇಳಿದಂತೆ ನಡೆದುಕೊಳ್ಳಬೇಕು : ಸಿಎಂ ಸಿದ್ದರಾಮಯ್ಯ

11/02/2026 12:20 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಕಾಶಿನಾಥ್ ಪುತ್ರನ ಚಿತ್ರದ ಟ್ರೈಲರ್ ಬಿಡುಗಡೆಗೊಳಿಸಿದ ‘ಸುದೀಪ್’….!
FILM

ಕಾಶಿನಾಥ್ ಪುತ್ರನ ಚಿತ್ರದ ಟ್ರೈಲರ್ ಬಿಡುಗಡೆಗೊಳಿಸಿದ ‘ಸುದೀಪ್’….!

By kannadanewsnow0715/10/2024 6:21 PM

ಕೆಎನ್‌ಎನ್‌ಡಿಜಿಟಲ್‌ಡೆಸ್ಕ್‌: ಹಿರಿಯ ನಟ, ನಿರ್ದೇಶಕ ಕಾಶಿನಾಥ್ ಅವರ ಪುತ್ರ ಅಭಿಮನ್ಯು ನಟಿಸಿರುವ ಚಿತ್ರ `ಎಲ್ಲಿಗೆ ಪಯಣ ಯಾವುದೋ ದಾರಿ’. ಈ ಸಿನಿಮಾದ ಟ್ರೈಲರ್ ಅನ್ನು ಕಿಚ್ಚಾ ಸುದೀಪ್ ಪ್ರೀತಿಯಿಂದ ಬಿಡುಗಡೆಗೊಳಿಸಿದ್ದಾರೆ. ಅಚ್ಚುಕಟ್ಟಾಗಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಈ ಟ್ರೈಲರ್ ಲಾಂಚ್ ಆಗಿದೆ. ಬಿಗ್ ಬಾಸ್ ಶೋ ಹಾಗೂ ಸಿನಿಮಾ ಒತ್ತಡಗಳ ನಡುವೆಯೂ ಪ್ರೀತಿಯಿಂದ ಆಗಮಿಸಿದ ಸುದೀಪ್, ಕಾಶೀನಾಥ್ ಅವರು ಕನ್ನಡ ಚಿತ್ರರಂಗಕ್ಕೆ ಕೊಟ್ಟ ಕೊಡುಗೆಯನ್ನು ಸ್ಮರಿಸುತ್ತಾ, ಅವರ ಪುತ್ರ ಅಭಿಮನ್ಯು ಕಾಶೀನಾಥ್ ಅವರಿಗೆ ಶುಭ ಕೋರುತ್ತಾ, ಟ್ರೈಲರ್ ಅನ್ನು ಲೋಕಾರ್ಪಣೆಗೊಳಿಸಿದ್ದಾರೆ. ಅಂದಹಾಗೆ, ಈ ಚಿತ್ರ ಇದೇ ಅಕ್ಟೋಬರ್ 25ರಂದು ತೆರೆಗಾಣಲಿದೆ. 

ಕನ್ನಡ ಚಿತ್ರರಂಗ ಎಂದಿಗೂ ಕಾಶಿನಾಥ್ ಅವರ ಕೊಡುಗೆಗಳನ್ನು, ಅವರಿಂದಾದ ಒಳಿತುಗಳನ್ನು ಮರೆಯಲು ಸಾಧ್ಯವಿಲ್ಲ. ಅದರ ಮುಂದೆ ಅಭಿಮನ್ಯುಗೆ ನಾವು ಕೊಡುತ್ತಿರುವ ಬೆಂಬಲ ತೀರಾ ಚಿಕ್ಕದು’ ಎಂದಿರುವ ಸುದೀಪ್, ಈ ಟ್ರೈಲರಿನಲ್ಲಿ ಅಭಿಮನ್ಯು ಕಾಣಿಸಿಕೊಂಡಿರುವ ರೀತಿಯನ್ನೂ ಮೆಚ್ಚಿಕೊಂಡಿದ್ದಾರೆ. ಸದರಿ ಟ್ರೈಲರ್ ಭರವಸೆ ಮೂಡಿಸಿದೆ ಎನ್ನುತ್ತಲೇ ನಿರ್ದೇಶಕ ಕಿರಣ್ ಎಸ್ ಸೂರ್ಯ ಹಾಗೂ ತಂಡದ ಪರಿಶ್ರಮಕ್ಕೂ ಮೆಚ್ಚುಗೆ ಸೂಚಿಸಿದ್ದಾರೆ. ಜೊತೆಗೆ ಖುದ್ದು ತಾವೇ ಈ ಸಿನಿಮಾಕ್ಕಾಗಿ ಹಾಡಿರುವ ಹಾಡಿನ ಕುರಿತೂ ಮಾತಾಡಿದ್ದಾರೆ. ಒಟ್ಟಾರೆಯಾಗಿ ಈ ಟ್ರೈಲರ್ ಪ್ರಾಮಿಸಿಂಗ್ ಆಗಿ ಮೂಡಿ ಬಂದಿದೆ ಎಂದಿರುವ ಕಿಚ್ಚ, ಚಿತ್ರಕ್ಕೆ ಶುಭ ಕೋರಿದ್ದಾರೆ.

Sudeep releases the trailer of Kashinath’s son’s film

ನಂತರ ಮಾತಾಡಿದ ನಾಯಕನಟ ಅಭಿಮನ್ಯು ಆರಂಭಿಕವಾಗಿ ಈ ಸಿನಿಮಾ ಸಾಗಿ ಬಂದ ರೀತಿಯ ಬಗ್ಗೆ ಸವಿವರವಾಗಿ ಮಾತಾಡಿದ್ದಾರೆ. ನಿರ್ದೇಶಕರ ಸೂಕ್ಷ್ಮವಂತಿಕೆಯನ್ನು ಮೆಚ್ಚಿಕೊಳ್ಳುತ್ತಲೇ, ಆರಂಭದಲ್ಲಿ ಕಥಾ ಎಳೆ ಹೇಳಿದಂತೆಯೇ ಚೆಂದಗೆ ಈ ಸಿನಿಮಾವನ್ನು ರೂಪಿಸಿದ್ದಾರೆಂಬ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. ಇದೇ ಹಂತದಲ್ಲಿ ಸಿನಿಮಾದ ಕೆಲ ಪಾತ್ರಗಳ ಚಹರೆಗಳನ್ನು ಪ್ರೇಕ್ಷಕರಿಗೆ ದಾಟಿಸಿದ್ದಾರೆ. ಸುದರ್ಶನ ಆರ್ಟ್ಸ್ ಬ್ಯಾನರಿನಡಿಯಲ್ಲಿ ಈ ಚಿತ್ರವನ್ನು ಜತಿನ್ ಪಟೇಲ್ ನಿರ್ಮಾಣ ಮಾಡಿದ್ದಾರೆ. ಆತಿನ್ ಅವರು ಈ ಸಿನಿಮಾ ನಿರ್ಮಾದ ಅನುಭವಗಳ ಬಗ್ಗೆ ಮಾತಾಡುತ್ತಲೇ, ಇಂಥಾ ಚೆಂದದ ಚಿತ್ರ ಮಾಡಲು ಸಾಥ್ ಕೊಟ್ಟವರನ್ನೆಲ್ಲ ಸ್ಮರಿಸಿದ್ದಾರೆ.

ನಾಯಕಿ ಸ್ಫೂರ್ತಿ ಉಡಿಮನೆ ಈ ಸಮಾರಂಭದಲ್ಲಿ ಹಾಜರಿದ್ದ, ತಾನು ನಾಯಕಿಯಾಗಿ ಆಯ್ಕೆಯಾದ ಕುರಿತಾಗಿ ಒಂದಷ್ಟು ಇಂಟರೆಸ್ಟಿಂಗ್ ವಿಚಾರಗಳನ್ನು ತೆರೆದಿಟ್ಟಿದ್ದಾರೆ. ತನ್ನ ಪಾತ್ರದ ಒಂದಷ್ಟು ಸುಳಿವುಗಳನ್ನೂ ಬಿಟ್ಟುಕೊಟ್ಟಿದ್ದಾರೆ. ಪ್ರಧಾನ ಪಾತ್ರದಲ್ಲಿ ನಟಿಸಿರುವ ವಿಜಯಶ್ರೀ ಕಲಬುರ್ಗಿ ಹಾಜರಿದ್ದು ಒಂದಷ್ಟು ವಿವರಗಳನ್ನು ಹಂಚಿಕೊಂಡಿದ್ದಾರೆ. ಕಥೆ, ಚಿತ್ರಕಥೆ ಮತ್ತು ಸಂಭಾಷಣೆಯೊಂದಿಗೆ ಕಿರಣ್ ಎಸ್ ಸೂರ್ಯ ನಿರ್ದೇಶನ ಮಾಡಿದ್ದಾರೆ. ಅಭಿಮನ್ಯು ಕಾಶಿನಾಥ್ ಅವರಿಗೆ ಸ್ಫೂರ್ತಿ ಉಡಿಮನೆ ನಾಯಕಿಯಾಗಿ ಸಾಥ್ ಕೊಟ್ಟಿದ್ದಾರೆ. ವಿಜಯಶ್ರೀ ಕಲಬುರ್ಗಿ ಪ್ರಧಾನ ಪಾತ್ರದಲ್ಲಿ ನಟಿಸಿದ್ದಾರೆ. ಬಲ ರಾಜವಾಡಿ, ಶೋಭನ್, ಅಯಾಂಕ್, ರಿನಿ ಬೋಪಣ್ಣ, ಪ್ರದೀಪ್, ರವಿತೇಜ, ಕಿಶೋರ್, ಅಶ್ವಿನಿ ರಾವ್, ಪ್ರಿಯಾ ಮುಂತಾದವರ ತಾರಾಗಣವಿದೆ. ಪ್ರಣವ್ ರಾವ್ ಸಂಗೀತ ನಿರ್ದೇಶನ, ಸತ್ಯ ರಾಮ್ ಛಾಯಾಗ್ರಹಣವಿರುವ ಈ ಚಿತ್ರಕ್ಕೆ ಪ್ರಮೋದ್ ಮರವಂತೆ ಸಾಹಿತ್ಯವಿದೆ.

 

Sudeep releases the trailer of Kashinath's son's film
Share. Facebook Twitter LinkedIn WhatsApp Email

Related Posts

‘ದಿ ಕೇರಳ ಸ್ಟೋರಿ 2: ಗೋಸ್ ಬಿಯಾಂಡ್’ ಟೀಸರ್ ಬಿಡುಗಡೆ | The Kerala Story 2 Teaser

30/01/2026 2:13 PM1 Min Read

BREAKING : ಬಾಲಿವುಡ್ ನ `ದಿ ಕೇರಳ ಸ್ಟೋರಿ-2’ ಚಿತ್ರದ ಟೀಸರ್ ರಿಲೀಸ್ | WATCH VIDEO

30/01/2026 1:19 PM1 Min Read

BBK12: ಬಿಗ್​​ಬಾಸ್ ಕನ್ನಡ-12 ಗೆಲ್ಲಲಿರುವ ಸ್ಪರ್ಧಿಗೆ ಬಂದಿವೆ 37 ಕೋಟಿ ವೋಟ್!

17/01/2026 8:14 PM1 Min Read
Recent News

ALERT : ಪೋಷಕರೇ ಎಚ್ಚರ : ಗಂಟಲಲ್ಲಿ ಕೂಲ್ ಡ್ರಿಂಕ್ಸ್ ಬಾಟಲಿಯ `ಮುಚ್ಚಳ ‘ ಸಿಲುಕಿ 18 ತಿಂಗಳ ಮಗು ಸಾವು.!

11/02/2026 12:24 PM

Shocking: ನೀವು ಕುಡಿಯುವ ಹಾಲು ಎಷ್ಟು ಸುರಕ್ಷಿತ? ಮದರ್ ಡೈರಿ,ಅಮುಲ್ ಸೇರಿ ಪ್ರಮುಖ ಬ್ರ್ಯಾಂಡ್‌ಗಳ ಕ್ವಾಲಿಟಿ ಫೇಲ್ !

11/02/2026 12:22 PM

BIG NEWS : ನಾನಾಗಲಿ ಡಿಕೆ ಶಿವಕುಮಾರ್ ಅಗಲಿ, ಹೈಕಮಾಂಡ್ ಹೇಳಿದಂತೆ ನಡೆದುಕೊಳ್ಳಬೇಕು : ಸಿಎಂ ಸಿದ್ದರಾಮಯ್ಯ

11/02/2026 12:20 PM

BREAKING : ಶೀಘ್ರದಲ್ಲಿಯೇ ಬಜೆಟ್ ಮಂಡನೆ ದಿನಾಂಕ ಘೋಷಣೆ ಮಾಡುತ್ತೇನೆ : ಸಿಎಂ ಸಿದ್ದರಾಮಯ್ಯ

11/02/2026 12:15 PM
State News
KARNATAKA

BIG NEWS : ನಾನಾಗಲಿ ಡಿಕೆ ಶಿವಕುಮಾರ್ ಅಗಲಿ, ಹೈಕಮಾಂಡ್ ಹೇಳಿದಂತೆ ನಡೆದುಕೊಳ್ಳಬೇಕು : ಸಿಎಂ ಸಿದ್ದರಾಮಯ್ಯ

By kannadanewsnow0511/02/2026 12:20 PM KARNATAKA 1 Min Read

ಬೆಂಗಳೂರು : ಶೀಘ್ರದಲ್ಲಿಯೇ ಬಜೆಟ್ ಮಂಡನೆ ದಿನಾಂಕ ಘೋಷಣೆ ಮಾಡುತ್ತೇನೆ. ಅಲ್ಲದೇ ರಾಜ್ಯದಲ್ಲಿ ಸಿಎಂ ಬದಲಾವಣೆ ಕುರಿತ ವಿಚಾರವಾಗಿ ನಾನು…

BREAKING : ಶೀಘ್ರದಲ್ಲಿಯೇ ಬಜೆಟ್ ಮಂಡನೆ ದಿನಾಂಕ ಘೋಷಣೆ ಮಾಡುತ್ತೇನೆ : ಸಿಎಂ ಸಿದ್ದರಾಮಯ್ಯ

11/02/2026 12:15 PM

ಸಿಎಂ ಸಿದ್ದರಾಮಯ್ಯ ಕೊಟ್ಟ ಮಾತು ಉಳಿಸಿಕೊಳ್ಳುತ್ತಾರೆ ಎನ್ನುವ ಭರವಸೆ ಇದೆ : ಮಾಜಿ ಸಂಸದ ಡಿಕೆ ಸುರೇಶ್ ಹೇಳಿಕೆ

11/02/2026 11:52 AM

ರೈಲಿನಲ್ಲಿ ಪ್ರಯಾಣಿಸುವಾಗ ನಿಮ್ಮ `ಮೊಬೈಲ್’ ಕಳೆದುಹೋದರೆ ಚಿಂತೆ ಬೇಡ : ಜಸ್ಟ್ ಹೀಗೆ ಮಾಡಿ.!

11/02/2026 11:43 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.