ಬೆಳಗಾವಿ : ಬೆಳಗಾವಿ ಜಿಲ್ಲೆಯ ರಾಯಭಾಗ ತಾಲೂಕು ಮಂಟೂರ ಗ್ರಾಮ ಪಂಚಾಯಿತಿ ಸದಸ್ಯೆ ಮಲ್ಲವ್ವ ಮೇಟಿ ಅವರು ಗ್ರಾಮದ ಮಕ್ಕಳು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಓದಲು ಅನುಕೂಲವಾಗಲೆಂದು ತಮ್ಮ ಗೃಹಲಕ್ಷ್ಮೀ ಹಣ, ಗೌರವಧನದ ಜೊತೆಗೆ ಸಾರ್ವಜನಿಕರಿಂದ ಹಣ ಸಂಗ್ರಹಿಸಿ, ಸಣ್ಣ ಪ್ರಮಾಣದ ಗ್ರಂಥಾಲಯ ನಿರ್ಮಿಸಿ ಮಾದರಿಯಾಗಿದ್ದಾರೆ.
ಮಲ್ಲವ್ವ ಮೇಟಿ ಅವರು ತಮ್ಮ 13 ಕಂತಿನ 26 ಸಾವಿರ ರೂ. ಗೃಹಲಕ್ಷ್ಮಿ ಹಣ, ಪಂಚಾಯಿತಿ ಸದಸ್ಯತ್ವದ 45 ಸಾವಿರ ರೂ. ಗೌರವಧನವನ್ನು ತಮಗಾಗಿ ಬಳಸಿಕೊಳ್ಳದೆ ಔದಾರ್ಯ ಮೆರೆದಿದ್ದಾರೆ. ಇದಕ್ಕೆ ಸಾರ್ವಜನಿಕರಿಂದ ಪಡೆದ ಹಣ ಸೇರಿಸಿ ಒಟ್ಟು ಒಂದು ಲಕ್ಷ ರೂ. ಖರ್ಚು ಮಾಡಿ, ಗ್ರಂಥಾಲಯ ತೆರೆದಿದ್ದಾರೆ.
ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳು ಸಾಮಾಜಿಕ ಹಾಗೂ ಆರ್ಥಿಕ ಬದಲಾವಣೆ ತರುತ್ತಿರುವುದಕ್ಕೆ ಇದೊಂದು ಉತ್ತಮ ನಿದರ್ಶನ.