ಬೆಂಗಳೂರು: ಸಾಕ್ಷ್ಯಾಧಾರ ಸಮಂಜಸ, ನಂಬಲರ್ಹ, ವಿಶ್ವಾಸಾರ್ಹವಾಗಿದ್ದರೇ ಹತ್ಯೆಗೀಡಾದವನ ಬಂಧುಗಳ ಸಾಕ್ಷ್ಯ ನಿರ್ಲಕ್ಷಿಸುವಂತಿಲ್ಲ ಎಂಬುದಾಗಿ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.
ಪ್ರತ್ಯಕ್ಷ ಸಾಕ್ಷಿಯೊಬ್ಬ ಕೊಲೆಯಾದವರ ನಿಕಟ ಸಂಬಂಧಿ ಎಂಬ ಕಾರಣಕ್ಕೆ ಆ ಸಾಕ್ಷ್ಯವನ್ನು ನಿರ್ಲಕ್ಷ್ಯಿಸಲು ಸಾಧ್ಯವಿಲ್ಲ ಎಂಬುದಾಗಿ ಹೈಕೋರ್ಟ್ ಕೊಲೆ ಪ್ರಕರಣದಲ್ಲಿ ಮೃತರ ತಂದೆ ಹಾಗೂ ಸಹೋದರನ ಸಾಕ್ಷ್ಯ ಆಧರಿಸಿ ಇಬ್ಬರಿಗೆ ವಿಧಿಸಲಾಗಿದ್ದಂತ ಜೀವಾವಧಿ ಶಿಕ್ಷೆಯನ್ನು ಎತ್ತಿಹಿಡಿದಿದೆ.
ಕೊಲೆ ಪ್ರಕರಣದಲ್ಲಿ ಒಬ್ಬ ಪ್ರತ್ಯಕ್ಷ ಸಾಕ್ಷಿ ಹತ್ಯೆಗೀಡಾದರ ಕುಟುಂಬದ ಸದಸ್ಯನಾಗಿರುವ ಮಾತ್ರಕ್ಕೆ ಅಂತಹ ಸಾಕ್ಷಿಯ ಸಾಕ್ಷ್ಯವನ್ನು ತಿರಸ್ಕರಿಸಲಾಗುವುದಿಲ್ಲ ಎಂಬುದಾಗಿ ಹೈಕೋರ್ಟ್ ಅಭಿಪ್ರಾಯ ಪಟ್ಟಿದೆ.
ನಿಕಟ ಸಂಬಂಧಿಯಾಗಿರುವ ಪ್ರತ್ಯಕ್ಷದರ್ಶಿಯ ಸಾಕ್ಷ್ಯವು ಸಮಂಜಸ, ನಂಬಲರ್ಹ ಮತ್ತು ವಿಶ್ವಾಸಾರ್ಹವಾಗಿದ್ದರೇ ಅದನ್ನು ಪರಿಗಣಿಸಬಹುದು ಎಂಬುದಾಗಿ ಹೈಕೋರ್ಟ್ ಅಭಿಪ್ರಾಯ ಪಟ್ಟಿದೆ.
ಏನಿದು ಪ್ರಕರಣ?
ವಿಜಯಪುರದ ಅಮಸಿದ್ದ ಬರಕಡೆ ಕೊಲೆ ಪ್ರಕರಣದಲ್ಲಿ ತಮ್ಮನ್ನು ದೋಷಿಯಾಗಿ ತೀರ್ಮಾನಿಸಿ, ಜೀವಾವಧಿ ಶಿಕ್ಷೆಯನ್ನು ವಿಧಿಸಿದ್ದಂತ ವಿಚಾರಣಾ ನ್ಯಾಯಾಲಯದ ಆದೇಶ ರದ್ದುಗೊಳಿಸುವಂತೆ ಹೈಕೋರ್ಟ್ ಗೆ ಕಾಮಣ್ಣ(42) ಹಾಗೂ ಸೋಮಲಿಂಗ (36) ಅರ್ಜಿ ಸಲ್ಲಿಸಿದ್ದರು.
ವಿಜಯಪುರದ ಕನ್ನೂರು ಗ್ರಾಮದಲ್ಲಿ 5 ಎಕರೆ ಭೂಮಿನ್ನು ಮಲ್ಲಪ್ಪ ಬರಕಡೆ ಎಂಬುವರು ಕಾಮಣ್ಣನ ಸಂಬಂಧಿ ರುದ್ರಪ್ಪ ಅವರಿಂದ ಖರೀದಿಸಿದ್ದರು. ಈ ಜಮೀನನ್ನು ಹಿಂದಿರುಗಿಸಬೇಕೆಂಬ ಕಾಮಣ್ಣನ ಒತ್ತಾಯಕ್ಕೆ ಮಲ್ಲಪ್ಪ ನಿರಾಕರಿಸಿದ್ದರು. ಅಲ್ಲದೇ ಮಲ್ಲಪ್ಪನ ಬೆಂಬಲಕ್ಕೆ ಸಹೋದರ ಅಮರಸಿದ್ದ ಬರಕಡೆ ನಿಂತಿದ್ದರು.
ಈ ವಿಚಾರವಾಗಿ ಕೋಪಗೊಂಡ ಕಾಮಣ್ಣ ಮತ್ತು ಇತರೆ ಆರೋಪಿಗಳು ಸೆ.19, 2013ರಂದು ಸಂಜೆ ತನ್ನ ಜಮೀನಿನಲ್ಲಿದ್ದ ಅಮರಸಿದ್ದ ಬರಕಡೆಯನ್ನು ಕೊಲೆಗೈದಿದ್ದರು. ಈ ಸಂಬಂಧ ಮೃತನ ತಂದೆ ಶಂಕರಪ್ಪ ವಿಜಯಪುರ ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಈ ದೂರು ಆಧರಿಸಿ ಕೇಸ್ ದಾಖಲಿಸಿಕೊಂಡು, ಕೊಲೆ ಅಪರಾದದಡಿ ದೋಷಾರೋಪಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು.
ಈ ಪ್ರಕರಣದ ವಿಚಾರಣೆ ನಡೆಸಿದ್ದಂತ ವಿಜಯಪುರದ 5ನೇ ಹೆಚ್ಚುವರಿ ಸೆಷನ್ಸ್ ಕೋರ್ಟ್, ಕಾಮಣ್ಣ ಹಾಗೂ ಸೋಮಲಿಂಗ ಸೇರಿ ನಾಲ್ವರಿಗೆ ಜೀವಾವಧಿ ಶಿಕ್ಷೆಯನ್ನು ಮತ್ತು ತಲಾ 30 ಸಾವಿರ ದಂಡವನ್ನು ಮಾ.28, 2017ರಲ್ಲಿ ವಿಧಿಸಿ ಆದೇಶಿಸಿತ್ತು. ಈ ಆದೇಶವನ್ನು ರದ್ದು ಕೋರಿ ಮೊದಲ ಆರೋಪಿ ಕಾಮಣ್ಣ ಹಾಗೂ 4ನೇ ಆರೋಪಿ ಸೋಮಲಿಂಗಾ ಹೈಕೋರ್ಟ್ ಗೆ ಮೇಲ್ಮನವಿ ಅರ್ಜಿಯನ್ನು ಸಲ್ಲಿಸಿದ್ದರು.
ಈ ಕ್ರಿಮಿನಲ್ ಮೇಲ್ಮನವಿಯನ್ನು ವಿಚಾರಣೆ ನಡೆಸಿದಂತ ನ್ಯಾಯೂರ್ತಿ ಎಸ್ ಸುನೀಲ್ ದತ್ ಯಾದವ್ ಹಾಗೂ ನ್ಯಾಯಮೂರ್ತಿ ರಾಮಚಂದ್ರ ಡಿ ಹುದ್ದಾರ್ ಅವರನ್ನೊಳಗೊಂಡ ದ್ವಿ ಸದಸ್ಯ ನ್ಯಾಯಪೀಠವು, ಅರ್ಜಿಯನ್ನು ವಜಾಗೊಳಿಸಿದೆ. ಅಲ್ಲದೇ ಹತ್ಯೆಗೀಡಾದವನ ಬಂಧುಗಳ ಸಾಕ್ಷ್ಯ ನಿರ್ಲಕ್ಷ್ಯಿಸುವಂತಿಲ್ಲ ಎಂಬುದಾಗಿ ಸುಪ್ರೀಂ ಕೋರ್ಟ್ ಆದೇಶ ಉಲ್ಲೇಖಿಸಿ, ಮಹತ್ವದ ತೀರ್ಪು ನೀಡಿದೆ.
‘ದೋಸೆ ಪ್ರಿಯ’ರಿಗೆ ಗುಡ್ ನ್ಯೂಸ್: ಶೀಘ್ರವೇ KMFನಿಂದ ‘ನಂದಿನಿ ದೋಸೆ ಹಿಟ್ಟು’ ಬಿಡುಗಡೆ