ಬೆಂಗಳೂರು: ದೋಸೆ ಪ್ರಿಯರಿಗೆ ಗುಡ್ ನ್ಯೂಸ್ ಎನ್ನುವಂತೆ ಶೀಘ್ರವೇ ಕೆಎಂಎಫ್ ನಿಂದ ನಂದಿನಿ ಬ್ರ್ಯಾಂಡ್ ದೋಸೆ ಹಿಟ್ಟನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲಾಗುತ್ತಿದೆ.
ಈಗಾಗಲೇ ಕೆಎಂಎಫ್ ನಿಂದ ಹಾಲೂ ಹಾಗೂ ಹಾಲಿನ ಉತ್ಪನ್ನಗಳನ್ನು ಪರಿಚಯಿಸಲಾಗಿದೆ. ಈಗ ಮಾರುಕಟ್ಟೆಗೆ ನಂದಿನಿ ಬ್ರ್ಯಾಂಡ್ ನಡಿ ದೋಸೆ ಹಿಟ್ಟನ್ನು ಪರಿಚಯಿಸಲಿದೆ. ಮುಖ್ಯವಾಗಿ ಬೆಂಗಳೂರು ಮಹಾನಗರದ ಮಾರುಕಟ್ಟೆ ಗಮನದಲ್ಲಿಟ್ಟುಕೊಂಡು ದೋಸೆ ಹಿಟ್ಟು ಮಾರಾಟಕ್ಕೆ ಸಿದ್ಧತೆಯನ್ನು ನಡೆಸಲಾಗುತ್ತಿದೆ.
ರೆಡಿ ಟು ಕುಕ್ ಪರಿಕಲ್ಪನೆಯಡಿ ಜನರು ಸುಲಭವಾಗಿ ಮನೆಯಲ್ಲೇ ರುಚಿಕರ ದೋಸೆ ಸವಿಯುವ ಅವಕಾಶವನ್ನು ನಂದಿನಿಯ ದೋಸೆ ಹಿಟ್ಟು ಕಲ್ಪಿಸಲಿದೆ. ಈ ಮೂಲಕ ಕಡಿಮೆ ಅವಧಿಯಲ್ಲಿ ಸುಲಭವಾಗಿ ದೋಸೆ ಮಾಡಲು ಪೂರಕವಾಗಿ ಕೆಎಂಎಫ್ ದೋಸೆ ಹಿಟ್ಟು ಸಹಕಾರಿಯಾಗಲಿದೆ.
ಅಂದಹಾಗೇ ಆರಂಭದಲ್ಲಿ ಪ್ರಾಯೋಗಿಕವಾಗಿ ಒಂದು ಮತ್ತು ಎರಡು ಕೆಜಿ ಪ್ರಮಾಣದ ದೋಸೆ ಹಿಟ್ಟಿನ ಪ್ಯಾಕೆಟ್ ಗಳನ್ನು ಕೆಎಂಎಫ್ ಬಿಡುಗಡೆ ಮಾಡುವಂತ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಈಗಾಗಲೇ ನಂದಿನಿ ಬ್ರ್ಯಾಂಡ್ ದೋಸೆ ಹಿಟ್ಟು ಸಿದ್ಧಪಡಿಸಲು ಟೆಂಡರ್ ಪ್ರಕ್ರಿಯೆಯನ್ನು ಪೂರ್ಣಗೊಳಿಸಲಾಗಿದ್ದು, ಸದ್ಯದಲ್ಲೇ ಮಾರುಕಟ್ಟೆಗೆ ಬಿಡುಗಡೆಯಾಗಲಿದೆ.
ನಾಳೆ KSRTCಯಿಂದ 63ನೇ ಸಂಸ್ದಾಪನಾ ದಿನ ಆಚರಣೆ: ವಿವಿಧ ಕಾರ್ಯಕ್ರಮ ಆಯೋಜನೆ