ಬೆಂಗಳೂರು: ರಾಜ್ಯದಲ್ಲಿ ಖಾಲಿ ಇರುವಂತ ಗ್ರಾಮ ಆಡಳಿತಾಧಿಕಾರಿ ಹುದ್ದೆಗಳ ನೇಮಕಾತಿಗೆ ಅರ್ಜಿಯನ್ನು ಕರೆಯಲಾಗಿತ್ತು. ಈ ಹುದ್ದೆಗೆ ಕಡ್ಡಾಯ ಕನ್ನಡ ಪರೀಕ್ಷೆ ನಡೆಸಲಾಗಿತ್ತು. ಇಂದು ಕೆಇಎಯಿಂದ ಇದರ ಫಲಿತಾಂಶವನ್ನು ಪ್ರಕಟಿಸಲಾಗಿದೆ.
ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದು, VAO-GTTC ಗ್ರಾಮ ಆಡಳಿತ ಅಧಿಕಾರಿ & ಜಿಟಿಟಿಸಿಯ ವಿವಿಧ ಹುದ್ದೆಗಳ ನೇಮಕಾತಿಗೆ ನಡೆಸಿದ್ದ ಕನ್ನಡ ಕಡ್ಡಾಯ ಪರೀಕ್ಷೆಯ ತಾತ್ಕಾಲಿಕ ಫಲಿತಾಂಶವನ್ನು ಪ್ರಕಟಿಸಿದೆ ಎಂದು ತಿಳಿಸಿದೆ.
ಗ್ರಾಮ ಅಡಳಿತಾಧಿಕಾರಿ ನೇಮಕಾತಿಯ ಕನ್ನಡ ಕಡ್ಡಾಯ ಪರೀಕ್ಷೆ ಬರೆದಿದ್ದಂತ ಅಭ್ಯರ್ಥಿಗಳು, ತಮ್ಮ ನೋಂದಣಿ ಸಂಖ್ಯೆ & ಹುಟ್ಟಿದ ದಿನಾಂಕವನ್ನು https://cetonline.karnataka.gov.in/kea/ ವೆಬ್ ಸೈಟ್ ನಲ್ಲಿ ನಮೂದಿಸಿ, ಫಲಿತಾಂಶ ಪಡೆಯಬಹುದು ಎಂದು ತಿಳಿಸಿದೆ.
#VAO-GTTC ಗ್ರಾಮ ಆಡಳಿತ ಅಧಿಕಾರಿ & ಜಿಟಿಟಿಸಿಯ ವಿವಿಧ ಹುದ್ದೆಗಳ ನೇಮಕಾತಿಗೆ ನಡೆಸಿದ್ದ ಕನ್ನಡ ಕಡ್ಡಾಯ ಪರೀಕ್ಷೆಯ ತಾತ್ಕಾಲಿಕ ಫಲಿತಾಂಶವನ್ನು #KEA ಪ್ರಕಟಿಸಿದೆ.
ಅಭ್ಯರ್ಥಿಗಳು ತಮ್ಮ ನೋಂದಣಿ ಸಂಖ್ಯೆ & ಹುಟ್ಟಿದ ದಿನಾಂಕವನ್ನು ವೆಬ್ ಸೈಟ್ ನ ಲಿಂಕ್ ನಲ್ಲಿ ನಮೂದಿಸಿ, ಫಲಿತಾಂಶ ಪಡೆಯಬಹುದು.@CMofKarnataka @drmcsudhakar— ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) (@KEA_karnataka) October 14, 2024
ಬೆಂಗಳೂರು ಜನತೆ ಗಮನಕ್ಕೆ: ಈ ಹೊಸ ಮಾರ್ಗದಲ್ಲಿ ‘BMTC ಬಸ್’ ಸಂಚಾರ ಆರಂಭ