ಬೆಂಗಳೂರು : ಡಾ.ರಾಜಕುಮಾರ್ ಅವರ ಕೆರಳಿದ ಸಿಂಹ ಸೇರಿದಂತೆ ಹಲವು ಸಿನಿಮಾಗಳನ್ನು ನಿರ್ದೇಶನ ಮಾಡಿದ್ದ ಖ್ಯಾತ ನಿರ್ದೇಶಕ ಚಿ. ದತ್ತರಾಜ್ ಇಂದು ನಿಧನರಾಗಿದ್ದಾರೆ.
ಡಾ.ರಾಜ್ ಕುಮಾರ್ ಚಿತ್ರ ಸೇರಿದಂತೆ ಶಿವರಾಜ್ ಕುಮಾರ್, ಮಂಜುಳಾ ಅವರ ಚಿತ್ರಗಳನ್ನ ನಿರ್ದೇಶನ ಮಾಡಿದ್ದ ಚಿ ದತ್ತರಾಜ್ ನಿಧನರಾಗಿದ್ದಾರೆ. ಖ್ಯಾತ ಸಾಹಿತಿ ಚಿ.ಉದಯಶಂಕರ್ ಸಹೋದರ ದತ್ತರಾಜ್ ಅವರಿಗೆ 87 ವಯಸ್ಸಾಗಿತ್ತು. ಇಂದು ಬೆಂಗಳೂರಿನಲ್ಲಿ ಚಿ ದತ್ತರಾಜ್ ನಿಧನರಾಗಿದ್ದಾರೆ. ಇಂದು ಮಧ್ಯಾಹ್ನ 1.30 ಕ್ಕೆ ಹರಿಶ್ಚಂದ್ರ ಘಾಟ್ ನಲ್ಲಿ ಅಂತ್ಯಕ್ರಿಯೆ ನಡೆಯಲಿದೆ.
ಚಿ.ದತ್ತರಾಜ್ ಅವರು ‘ಕೆರಳಿದ ಸಿಂಹ’, ‘ಕಾಮನಬಿಲ್ಲು’, ‘ಅದೇ ಕಣ್ಣು’, ‘ಶೃತಿ ಸೇರಿದಾಗ’, ‘ಮೃತ್ಯುಂಜಯ’, ‘ಆನಂದ ಜ್ಯೋತಿ’, ರುದ್ರಿ ಸೇರಿದಂತೆ ಹಲವು ಹಿಟ್ ಚಿತ್ರಗಳನ್ನು ನಿರ್ದೇಶಿಸಿದ್ದರು.