ಬೆಂಗಳೂರು: ನಾಡಿನ ಅದಿ ದೇವತೆ ಚಾಮುಂಡೇಶ್ವರಿ ಚಿತ್ರವನ್ನು ಬಳಸಿಕೊಂಡು ಜಾಹೀರಾತು ನೀಡಿದ್ದು ತಪ್ಪು. ಕರ್ನಾಟಕದಲ್ಲಿ ದುಷ್ಟ ಶಕ್ತಿಗಳು ಯಾರು ಅಂದ್ರೆ ಅದು ಸಿದ್ಧರಾಮಯ್ಯ. ಅವರಿಂದಲೇ ದುಷ್ಟ ಶಕ್ತಿಗಳ ಸಂಹಾರ ಶುರುವಾಗಲಿ ಎಂಬುದಾಗಿ ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.
ಇಂದು ಸುದ್ದಿಗಾರರೊಂದಿಗೆ ನಗರದಲ್ಲಿ ಮಾತನಾಡಿದಂತ ಅವರು, ಹುಬ್ಬಳ್ಳಿ ಪೊಲೀಸ್ ಠಾಣೆ ಮೇಲೆ ದಾಳಿ, ಗಲಭೆ ಮಾಡಿದವರು ಹಾಗೂ ಕ್ರಿಮಿನಲ್ ಗಳ ಮೇಲೆ ಸರ್ಕಾರ ಪ್ರಕರಣ ದಾಖಲಿಸಿತ್ತು. ಈಗ ಒಂದು ಸಮುದಾಯವನ್ನು ಓಲೈಕೆ ಮಾಡೋ ಕಾರಣದಿಂದಾಗಿ ಎಲ್ಲಾ ಕೇಸ್ ವಾಪಾಸ್ ಪಡೆದಿದ್ದಾರೆ. ಇದು ರಾಜ್ಯ ಸರ್ಕಾರ ಮಾಡಿದಂತ ಅಕ್ಷಮ್ಯ ಅಪರಾಧ ಎಂಬುದಾಗಿ ಗುಡುಗಿದರು.
ಶಿವಮೊಗ್ಗ, ಉಡುಪಿ, ಮಂಗಳೂರು ಹಿಂದೂ ಕಾರ್ಯಕರ್ತರ ಮೇಲೆ ಯಾಕೆ ದಾಖಲಿಸಿದ್ದಂತ ಕೇಸ್ ವಾಪಾಸ್ ಪಡೆದಿಲ್ಲ? ಅವರು ಕ್ರಿಮಿನಲ್ ಗಳು, ಇವರು ಕ್ರಿಮಿನಲ್ ಗಳು ಅಲ್ವ? ನೀವು ಜನರನ್ನು ಕೆರಳಿಸುವಂತ ಕೆಲಸ ಮಾಡುತ್ತಿದ್ದೀರಿ. ಕೇಂದ್ರ ಸರ್ಕಾರಕ್ಕೆ ನಿಮ್ಮ ವಿರುದ್ಧ ಕ್ರಮ ಜರುಗಿಸಬೇಕು ಎಂಬುದಾಗಿ ಪತ್ರ ಬರೆಯುತ್ತಿದ್ದೇನೆ. ಕೇಂದ್ರ ಸರ್ಕಾರ ತಕ್ಷಣ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಒತ್ತಾಯಿಸಿದರು.
ರಾಜ್ಯದ ‘ವಲಸೆ ಕುರಿಗಾಯಿ’ಗಳ ಗಮನಕ್ಕೆ: ‘ಗುರುತಿನ ಚೀಟಿ’ ವಿತರಣೆಗೆ ಅರ್ಜಿ ಆಹ್ವಾನ
ರೈತರ ಗಮನಕ್ಕೆ: ‘ಕೃಷಿ ಭಾಗ್ಯ ಯೋಜನೆ’ಗೆ ಅರ್ಜಿ ಸಲ್ಲಿಸಲು 8 ದಿನ ಬಾಕಿ, ಅ.20 ಲಾಸ್ಟ್ ಡೇಟ್
ಮಹಿಳೆಯರೇ ಗಮನಿಸಿ : ಉಚಿತ ‘ಹೊಲಿಗೆ ಯಂತ್ರ’ ಪಡೆಯಲು ಈ ದಾಖಲೆಗಳು ಕಡ್ಡಾಯ…!