Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಭಾರತರತ್ನ ಪ್ರೊ. ಸಿ.ಎನ್.ಆರ್. ರಾವ್ ಅವರಿಂದ ಅಮನ ಜೆ. ಕುಮಾರ್ ಅವರ 5ನೇ ಕೃತಿ ‘ದಿ ಮಿಸ್ಟಿಕಲ್ ವೇವ್ಸ್’ ಲೋಕಾರ್ಪಣೆ!

ಬೆಳ್ತಂಗಡಿಯಲ್ಲಿ ಧರ್ಮಸ್ಥಳ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆಯವರಿಂದ ಜಿಯೊ ಮೊಬೈಲ್‌ ಟವರ್‌ ಉದ್ಘಾಟನೆ

ಜೂನ್.4ರಿಂದ ದಕ್ಷಿಣ ಆಫ್ರಿಕಾದ ಚೀತಾಗಳು ಸಾರ್ವಜನಿಕ ವೀಕ್ಷಣೆಗೆ ಲಭ್ಯ: ಸಚಿವ ಈಶ್ವರ ಖಂಡ್ರೆ

Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BIG NEWS : ಕೇಂದ್ರ ಸಚಿವ `HDK’ ವಿರುದ್ಧ ವಿರುದ್ಧ ದೂರು ದಾಖಲಿಸಿದ ADGP ಚಂದ್ರಶೇಖರ್ : NCR ದಾಖಲು!
KARNATAKA

BIG NEWS : ಕೇಂದ್ರ ಸಚಿವ `HDK’ ವಿರುದ್ಧ ವಿರುದ್ಧ ದೂರು ದಾಖಲಿಸಿದ ADGP ಚಂದ್ರಶೇಖರ್ : NCR ದಾಖಲು!

By kannadanewsnow57

ಬೆಂಗಳೂರು: ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ, ಪುತ್ರ ನಿಖಿಲ್ ಕುಮಾರಸ್ವಾಮಿ, ಹಾಗೂ ಹೆಚ್ ಡಿಕೆ ಆಪ್ತ ಸುರೇಶ್ ಬಾಬು ವಿರುದ್ಧ ಎಸ್ಐಟಿಯ ಐಜಿಪಿ, ಐಪಿಎಸ್ ಅಧಿಕಾರಿ ಚಂದ್ರ ಶೇಖರ್ ಅವರು ಪೊಲೀಸರಿಗೆ ಬೆದರಿಕೆ, ಸುಳ್ಳು ಆರೋಪಗಳ ಬಗ್ಗೆ ದೂರು ನೀಡಿದ್ದಾರೆ. ಅವರ ದೂರು ಆಧರಿಸಿ, ಸಂಜಯನಗರ ಪೊಲೀಸ್ ಠಾಣೆಯಲ್ಲಿ ಎನ್ ಸಿಆರ್ ದಾಖಲಾಗಿದೆ.

ಸಂಜಯನಗರ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿರುವಂತ ಎಸ್ಐಟಿಯ ಐಜಿಪಿ ಚಂದ್ರ ಶೇಖರ್.ಎಂ ಅವರು, ನಾನು ಐಎಸ್ ಡಿ ಮತ್ತು ಗಣಿಗಾರಿಕೆಗೆ ಸಂಬಂಧಿಸಿದ ಎಸ್ಐಟಿಯಲ್ಲಿ ಎಡಿಜಿಪಿಯಾಗಿ ಕೆಲಸ ಮಾಡುತ್ತಿರುತ್ತೇನೆ. ಹೆಚ್ ಡಿ ಕುಮಾರಸ್ವಾಮಿ ಮೇಲೆ ಮೊಕದಮ್ಮೆ ಸಂಖ್ಯೆ 16/2014ರಲ್ಲಿ ತನಿಖೆ ಕೈಗೊಂಡಿದ್ದು, ಇವರ ವಿರುದ್ಧ ಹೆಚ್ಚುವರಿ ಸಾಕ್ಷ್ಯಾಧಾರಗಳು ದೊರೆತಿದ್ದರಿಂದ, ಕಾನೂನು ಕ್ರಮ ಕೈಗೊಳ್ಳಲು ಅನುಮತಿಗಾಗಿ ರಾಜ್ಯಪಾಲರಿಗೆ ಕೋರಲಾಗಿದೆ ಎಂದಿದ್ದಾರೆ.

ರಾಜ್ಯಪಾಲರಿಗೆ ಹೆಚ್.ಡಿ ಕುಮಾರಸ್ವಾಮಿ ವಿರುದ್ಧದ ಪ್ರಕರಣದ ತನಿಖೆಗೆ ರಾಜ್ಯಪಾಲರಿಗೆ ಅನುಮತಿ ಕೋರಿದ ನಂತ್ರ, ಈ ಬಗ್ಗೆ ದಿನಾಂಕ 28-09-2024 ಮತ್ತು 29-09-2024ರಂದು ಪತ್ರಿಕಾ ಘೋಷ್ಠಿಯನ್ನು ನೆಡೆಸಿ ನನ್ನ ಬಗ್ಗೆ ಸುಳ್ಳು ಮತ್ತು ದುರುದ್ದೇಶ ಪೂರಿತ ಆರೋಪಗಳನ್ನು ಮಾಡಿ, ಬೆದರಿಕೆಯನ್ನು ಹಾಕಿರುತ್ತಾರೆ ಎಂಬುದಾಗಿ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ನನ್ನನ್ನು ಕರ್ನಾಟಕ ರಾಜ್ಯ ಕೇಡರ್ ನಿಂದ ಬೇರೆ ರಾಜ್ಯಕ್ಕೆ ಕಳುಹಿಸುವುದಾಗಿ ಮೌಖಿಕವಾಗಿ ಬೆದರಿಕೆ ಹಾಕಿರುತ್ತಾರೆ. ನನ್ನ ಕುಟುಂಬದವರ ವಿರುದ್ಧವೂ ಸಹ ಸುಳ್ಳು ಆಪಾದನೆಗಳ್ನು ಮಾಡಿ ಅವರಿಗೂ ತೊಂದರೆ ಕೊಡುವುದಾಗಿ ಬೆದರಿಕೆ ಹಾಕಿರುತ್ತಾರೆ. ನಾನು ಬೌರಿಂಕ್ ಆಸ್ಪತ್ರೆಯಿಂದ ಸುಳ್ಳು ಮೆಡಿಕಲ್ ದಾಖಲೆಗಳನ್ನು ಪಡೆದು, ಕರ್ನಾಟಕ ಕೇಡರ್ ನಲ್ಲೇ ಮುಂದುವರೆಯುತ್ತಿರುವುದಾಗಿ ಸುಳ್ಳು ಆರೋಪ ಮಾಡಿರುತ್ತಾರೆ. ನಾನು ಲಂಚ ತೆಗೆದುಕೊಂಡಿರುವುದಾಗಿ ಸುಳ್ಳು ಆರೋಪ ಮಾಡಿರುತ್ತಾರೆ ಎಂದು ತಿಳಿಸಿದ್ದಾರೆ.

ದಿನಾಂಕ 29-09-2024ರಂದು ಹೆಚ್ ಡಿ ಕುಮಾರಸ್ವಾಮಿ ಅವರ ಮಗನಾದ ನಿಖಿಲ್ ಕುಮಾರಸ್ವಾಮಿ ಅವರು ಪತ್ರಿಕಾ ಘೋಷ್ಠಿಯಲ್ಲಿ ನನ್ನ ವಿರುದ್ಧ ಸುಳ್ಳು ಮತ್ತು ದುರುದ್ದೇಶಪೂರಿತ ಆರೋಪಗಳ್ನು ಮಾಡಿರುತ್ತಾರೆ. ನಂತ್ರ ಹೆಚ್ ಡಿ ಕುಮಾರಸ್ವಾಮಿ ಅವರ ಆಪ್ತರಾದ ಸುರೇಶ್ ಬಾಬು ಅವರು ನನ್ನ ಮೇಲೆ ಸುಳ್ಳು ಆರೋಪಗಳನ್ನು ಮಾಡಿ, ನನ್ನ ವಿರುದ್ಧ ಮುಖ್ಯ ಕಾರ್ಯದರ್ಶಿಯವರಿಗೆ ನನ್ನ ವಿರುದ್ಧ ಕ್ರಮ ಕೈಗೊಳ್ಳುವಂತೆ ಪತ್ರ ಬರೆದು, ಆ ಪತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿ, ಬೆದರಿಕೆ ಹಾಕಿರುತ್ತಾರೆ ಎಂಬುದಾಗಿ ಆರೋಪಿಸಿದ್ದಾರೆ. ಅವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ದೂರಿನಲ್ಲಿ ಮನವಿ ಮಾಡಿದ್ದಾರೆ.

ಈ ದೂರು ಆಧರಿಸಿ ಸಂಜಯನಗರ ಪೊಲೀಸ್ ಠಾಣೆಯಲ್ಲಿ ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ, ಪುತ್ರ ನಿಖಿಲ್ ಕುಮಾರಸ್ವಾಮಿ ಹಾಗೂ ಹೆಚ್ ಡಿಕೆ ಆಪ್ತ ಸುರೇಶ್ ಬಾಬು ವಿರುದ್ಧ 207/2024ರಂತೆ ಎನ್ ಸಿಆರ್ ದಾಖಲಾಗಿದೆ.

ವರದಿ: ವಸಂತ ಬಿ ಈಶ್ವರಗೆರೆ, ಸಂಪಾದಕರು

BIG NEWS: ರೈತರಿಗಾಗಿ ಆತ್ಮಹತ್ಯೆಗೂ ರೆಡಿ, ಬೇಕಿದ್ರೆ ನಾಳೆಯೇ ರಾಜೀನಾಮೆಗೆ ಸಿದ್ಧ: ಕಾಂಗ್ರೆಸ್ ಶಾಸಕ ರಾಜು ಕಾಗೆ

GOOD NEWS: ಗ್ರಾಮ ಪಂಚಾಯಿತಿ ‘ಸದಸ್ಯ’ರಿಗೆ ಗುಡ್ ನ್ಯೂಸ್: ಶೀಘ್ರವೇ ‘ಗೌರವಧನ’ ಹೆಚ್ಚಳ: ಸಚಿವ ಪ್ರಿಯಾಂಕ್ ಖರ್ಗೆ

BIG NEWS : ಕೇಂದ್ರ ಸಚಿವ `HDK' ವಿರುದ್ಧ ವಿರುದ್ಧ ದೂರು ದಾಖಲಿಸಿದ ADGP ಚಂದ್ರಶೇಖರ್ : NCR ದಾಖಲು! BIG NEWS: ADGP Chandrasekhar filed a complaint against Union Minister ``HDK'': NCR file!
Share. Facebook Twitter LinkedIn WhatsApp Email

Related Posts

ಭಾರತರತ್ನ ಪ್ರೊ. ಸಿ.ಎನ್.ಆರ್. ರಾವ್ ಅವರಿಂದ ಅಮನ ಜೆ. ಕುಮಾರ್ ಅವರ 5ನೇ ಕೃತಿ ‘ದಿ ಮಿಸ್ಟಿಕಲ್ ವೇವ್ಸ್’ ಲೋಕಾರ್ಪಣೆ!

3 Mins Read

ಬೆಳ್ತಂಗಡಿಯಲ್ಲಿ ಧರ್ಮಸ್ಥಳ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆಯವರಿಂದ ಜಿಯೊ ಮೊಬೈಲ್‌ ಟವರ್‌ ಉದ್ಘಾಟನೆ

2 Mins Read

ಜೂನ್.4ರಿಂದ ದಕ್ಷಿಣ ಆಫ್ರಿಕಾದ ಚೀತಾಗಳು ಸಾರ್ವಜನಿಕ ವೀಕ್ಷಣೆಗೆ ಲಭ್ಯ: ಸಚಿವ ಈಶ್ವರ ಖಂಡ್ರೆ

1 Min Read
Recent News

ಭಾರತರತ್ನ ಪ್ರೊ. ಸಿ.ಎನ್.ಆರ್. ರಾವ್ ಅವರಿಂದ ಅಮನ ಜೆ. ಕುಮಾರ್ ಅವರ 5ನೇ ಕೃತಿ ‘ದಿ ಮಿಸ್ಟಿಕಲ್ ವೇವ್ಸ್’ ಲೋಕಾರ್ಪಣೆ!

ಬೆಳ್ತಂಗಡಿಯಲ್ಲಿ ಧರ್ಮಸ್ಥಳ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆಯವರಿಂದ ಜಿಯೊ ಮೊಬೈಲ್‌ ಟವರ್‌ ಉದ್ಘಾಟನೆ

ಜೂನ್.4ರಿಂದ ದಕ್ಷಿಣ ಆಫ್ರಿಕಾದ ಚೀತಾಗಳು ಸಾರ್ವಜನಿಕ ವೀಕ್ಷಣೆಗೆ ಲಭ್ಯ: ಸಚಿವ ಈಶ್ವರ ಖಂಡ್ರೆ

BIG NEWS: ಸ್ನ್ಯಾಪ್‌ಚಾಟ್ ಪ್ರೀತಿ, ಎರಡೇ ತಿಂಗಳಿಗೆ ಮುನಿಸು: ‘ಗಂಡ ಬೇಕು’ ಎಂದು ಠಾಣೆ ಮೆಟ್ಟಿಲೇರಿದ ಪತ್ನಿ!

State News
KARNATAKA

ಭಾರತರತ್ನ ಪ್ರೊ. ಸಿ.ಎನ್.ಆರ್. ರಾವ್ ಅವರಿಂದ ಅಮನ ಜೆ. ಕುಮಾರ್ ಅವರ 5ನೇ ಕೃತಿ ‘ದಿ ಮಿಸ್ಟಿಕಲ್ ವೇವ್ಸ್’ ಲೋಕಾರ್ಪಣೆ!

By ವಸಂತ ಬಿ ಈಶ್ವರಗೆರೆ KARNATAKA 3 Mins Read

ಬೆಂಗಳೂರು: ಹದಿಹರೆಯದ ವಯಸ್ಸು ಎಂದರೆ ಕನಸುಗಳ ಬೆನ್ನತ್ತಿ ಹೋಗುವ ಕಾಲ. ಆದರೆ ಆ ವಯಸ್ಸಿನಲ್ಲೇ ಅಕ್ಷರಗಳನ್ನೇ ತನ್ನ ಉಸಿರಾಗಿಸಿಕೊಂಡು, ಜಾಗತಿಕ…

ಬೆಳ್ತಂಗಡಿಯಲ್ಲಿ ಧರ್ಮಸ್ಥಳ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆಯವರಿಂದ ಜಿಯೊ ಮೊಬೈಲ್‌ ಟವರ್‌ ಉದ್ಘಾಟನೆ

ಜೂನ್.4ರಿಂದ ದಕ್ಷಿಣ ಆಫ್ರಿಕಾದ ಚೀತಾಗಳು ಸಾರ್ವಜನಿಕ ವೀಕ್ಷಣೆಗೆ ಲಭ್ಯ: ಸಚಿವ ಈಶ್ವರ ಖಂಡ್ರೆ

BIG NEWS: ಸ್ನ್ಯಾಪ್‌ಚಾಟ್ ಪ್ರೀತಿ, ಎರಡೇ ತಿಂಗಳಿಗೆ ಮುನಿಸು: ‘ಗಂಡ ಬೇಕು’ ಎಂದು ಠಾಣೆ ಮೆಟ್ಟಿಲೇರಿದ ಪತ್ನಿ!

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.