ಬೆಂಗಳೂರು: ಪಾರ್ಕ್ ನಲ್ಲಿ ಪೋಟೋ ತೆಗೆಯುತ್ತಿದ್ದಾಗ ಅಡ್ಡ ಬಂದ ಎನ್ನುವ ಕಾರಣಕ್ಕೆ ವ್ಯಕ್ತಿಯೊಬ್ಬರ ಮೇಲೆ ಮತ್ತೊಬ್ಬ ವ್ಯಕ್ತಿ ರಕ್ತ ಬರುವಂತೆ ಹಲ್ಲೆ ನಡೆಸಿರುವಂತ ಬೆಚ್ಚಿ ಬೀಳಿಸೋ ಘಟನೆ ಕಬ್ಬನ್ ಪಾರ್ಕ್ ನಲ್ಲಿ ನಡೆದಿರುವುದು ತಡವಾಗಿ ಬೆಳಕಿಗೆ ಬಂದಿದೆ. ಈ ಸಂಬಂಧ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ಕೂಡ ದಾಖಲಾಗಿದೆ.
ಸೆ.29ರಂದು ಮಧ್ಯಾಹ್ನ 3.30ಕ್ಕೆ ಹೆಚ್ ಎಎಲ್ ನ ಡಿಫೆನ್ಸ್ ವಿಭಾಗದಲ್ಲಿ ಟೆಕ್ನೀಷಿಯನ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಂತ ರವಿಕಿರಣ್ ಎಂಬುವರು ಕಬ್ಬನ್ ಪಾರ್ಕ್ ಗೆ ತೆರಳಿದ್ದರು. ಈ ಸಂದರ್ಭದಲ್ಲಿ ಪಾರ್ಕ್ ನಲ್ಲಿ ನಡೆದು ಹೋಗುತ್ತಿದ್ದಂತ ವೇಳೆಯಲ್ಲೇ ಉತ್ತರ ಭಾರತ ಮೂಲಕ ವ್ಯಕ್ತಿಯೊಬ್ಬ ಪೋಟೋ ತೆಗೆದುಕೊಳ್ಳುತ್ತಿದ್ದರು.
ರವಿಕಿರಣ್ ಅದೇ ಸಂದರ್ಭದಲ್ಲಿ ಸಾಗಿದಾಗ, ಪೋಟೋ ತೆಗೆಯುತ್ತಿದ್ದಾಗ ಅಡ್ಡ ಬರ್ತೀಯ ಎಂಬುದಾಗಿ ಗಲಾಟೆ ಶುರುವಾಗಿದೆ. ಕಬ್ಬನ್ ಪಾರ್ಕ್ ಏನು ನಿಮ್ಮಪ್ಪಂದ ಎಂಬುದಾಗಿ ಇಬ್ಬರ ನಡುವೆ ಮಾತಿಗೆ ಮಾತು ಬೆಳೆದು ರಕ್ತ ಬರುವಂತೆ ರವಿಕಿರಣ್ ಮೇಲೆ ಹಲ್ಲೆ ನಡೆಸಲಾಗಿದೆ. ಹಲ್ಲೆಯಿಂದ ಗಾಯಗೊಂಡಂತ ರವಿಕಿರಣ್ ಆಸ್ಪತ್ರೆಗೆ ದಾಖಲಾಗಿ, ಚಿಕಿತ್ಸೆ ಪಡೆದ ಬಳಿಕ, ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದಾರೆ. ಈ ಸಂಬಂಧ ರವಿಕಿರಣ್ ದೂರು ಆಧರಿಸಿ ಎಫ್ಐಆರ್ ದಾಖಲಾಗಿದೆ.
ವಿಮಾನದಲ್ಲಿ ಮಹಿಳೆಗೆ ಲೈಂಗಿಕ ಕಿರುಕುಳ ನೀಡಿದ ವ್ಯಕ್ತಿ ಅರೆಸ್ಟ್ | IndiGo flight
10 ವರ್ಷಗಳ ಹಿಂದೆ ಮಾಡಿದ ಜಾತಿಗಣತಿ ವರದಿ ಇಟ್ಕೊಂಡು ಏನು ಮಾಡ್ತೀರಿ?: HDK ಕಿಡಿ