ಮೈಸೂರು: ಜಾತಿಗಣತಿ ವರದಿ ಸಿಎಂ ಸಿದ್ಧರಾಮಯ್ಯ ಆಫೀಸಲ್ಲೇ ಕುಳಿತು ಮಾಡಿದ ವರದಿ ಎಂಬುದಾಗಿ ಕಾಂಗ್ರೆಸ್ ನವರೇ ಹೇಳಿದ್ದಾರೆ. ಇಂತಹ ಹತ್ತು ವರ್ಷಗಳ ಹಿಂದೆ ಮಾಡಿದಂತ ಜಾತಿಗಣತಿ ವರದಿಯನ್ನು ಇಟ್ಟುಕೊಂಡು ಏನು ಮಾಡ್ತೀರಿ ಎಂಬುದಾಗಿ ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ ಕಿಡಿಕಾರಿದ್ದಾರೆ.
ಇಂದು ಆಯುಧ ಪೂಜೆ ಹಿನ್ನಲೆಯಲ್ಲಿ ಮೈಸೂರಿನ ಚಾಮುಂಡೇಶ್ವರಿ ದರ್ಶನ ಪಡೆದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ನಾನು 14 ತಿಂಗಳ ಸಿಎಂ ಆಗಿದ್ದೆ. ಅವರು ಬಂದು 14 ತಿಂಗಳಾಗಿದೆ. ಆದರೇ ಯಾಕೆ ಜಾತಿಗಣತಿ ವರದಿಯನ್ನು ಬಿಡುಗಡೆ ಮಾಡಿಲ್ಲ ಎಂದು ಪ್ರಶ್ನಿಸಿದರು.
ಸಿದ್ಧರಾಮಯ್ಯ ಅವರು ಪ್ರತಿನಿತ್ಯ ಹೊಟ್ಟೆ ಉರಿ ಅಂತ ಹೇಳಿಕೊಂಡು ಓಡಾಡುತ್ತಿದ್ದಾರೆ. ಸಿದ್ಧರಾಮಯ್ಯ ಕುರಿ ಕಾದಿದ್ದರೇ, ಮೋದಿ ಟೀ ಮಾರಿಲ್ವ.? ನಾವು ಅಸೂಯೆ ಪಟ್ರೆ ಆಗುತ್ತಾ.? ಜನರು ತೀರ್ಮಾನ ಮಾಡಬೇಕು. ಹತ್ತು ವರ್ಷಗಳ ಹಿಂದಿನ ಜಾತಿ ಗಣತಿ ವರದಿ ಇಟ್ಟುಕೊಂಡು ಏನು ಮಾಡ್ತೀರಿ ಎಂದು ಕೇಳಿದರು.
ವಿಮಾನದಲ್ಲಿ ಮಹಿಳೆಗೆ ಲೈಂಗಿಕ ಕಿರುಕುಳ ನೀಡಿದ ವ್ಯಕ್ತಿ ಅರೆಸ್ಟ್ | IndiGo flight
’ಗೃಹಲಕ್ಷ್ಮೀ ಯೋಜನೆ’ ಹಣದಲ್ಲಿ ದಸರಾ ಸಂಭ್ರಮ: ಮಗನಿಗೆ ‘ಬೈಕ್’ ಕೊಡಿಸಿದ ತಾಯಿ | Gruhalakshmi Scheme