ಮುಂಬೈ : ವರ್ಲಿ ಪಾರ್ಸಿ ಚಿತಾಗಾರದಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ರತನ್ ಟಾಟಾ ಅವರ ಅಂತ್ಯಕ್ರಿಯೆ ನಡೆಸಲಾಯಿತು. ಈ ಮೂಲಕ ಉದ್ಯಮ ರಂಗದ ಅಧಿಪತಿಗೆ ಅಂತಿಮ ವಿದಾಯ ಹೇಳಲಾಯಿತು.
ಅಂತಿಮ ವಿಧಿಗಳ ಸಮಯದಲ್ಲಿ ಪಾರ್ಸಿ ಪ್ರಾರ್ಥನೆಗಳನ್ನ ಪಠಿಸಲಾಯಿತು. ಇದಲ್ಲದೆ, ರತನ್ ಟಾಟಾ ಅವರಿಗೆ 21 ಗನ್ ಸೆಲ್ಯೂಟ್ ಗೌರವವನ್ನ ನೀಡಲಾಯಿತು.
#WATCH | Last rites of veteran industrialist Ratan Tata, being performed with state honour at Worli crematorium in Mumbai pic.twitter.com/08G7gnahyS
— ANI (@ANI) October 10, 2024
ಇದಕ್ಕೂ ಮುನ್ನ, ಟಾಟಾ ಅವರ ಪಾರ್ಥಿವ ಶರೀರವನ್ನು ಸಾರ್ವಜನಿಕ ಗೌರವಕ್ಕಾಗಿ ನಾರಿಮನ್ ಪಾಯಿಂಟ್’ನ ಎನ್ಸಿಪಿಎ ಹುಲ್ಲುಹಾಸಿನಲ್ಲಿ ಜನರು ಅಂತಿಮ ಗೌರವ ಸಲ್ಲಿಸಲು ಇರಿಸಲಾಗಿದ್ದ ರತನ್ ಟಾಟಾ ಅವರ ಪಾರ್ಥಿವ ಶರೀರವನ್ನ ವರ್ಲಿ ಚಿತಾಗಾರಕ್ಕೆ ತರಲಾಯಿತು. ಭಾರತದ ಅತ್ಯಂತ ಪ್ರೀತಿಯ ಐಕಾನ್’ಗಳಲ್ಲಿ ಒಬ್ಬರು. ಹಲವು ಜನರು ತಮ್ಮ ಪ್ರೀತಿಯ ಉದ್ಯಮಿಗೆ ಅಂತಿಮ ಪ್ರಾರ್ಥನೆ ಸಲ್ಲಿಸಲು ಎನ್ಸಿಪಿಎ ಹುಲ್ಲುಹಾಸಿನಲ್ಲಿ ಜಮಾಯಿಸಿದ್ದರು.
ಅಂದ್ಹಾಗೆ, ಕೇಂದ್ರ ಗೃಹ ಸಚಿವ ಅಮಿತ್ ಶಾ ಸೇರಿ ಹಲವು ಗಣ್ಯರು ಭಾರತ ಸರ್ಕಾರದ ಪರವಾಗಿ ಕೈಗಾರಿಕೋದ್ಯಮಿ ರತನ್ ಟಾಟಾ ಅವರ ಅಂತ್ಯಕ್ರಿಯೆಯಲ್ಲಿ ಭಾಗವಹಿಸಿದ್ದರು.
ಟಾಟಾ ಗ್ರೂಪ್ನ ಮಾಜಿ ಅಧ್ಯಕ್ಷರಿಗೆ ಅಂತಿಮ ಗೌರವ ಸಲ್ಲಿಸಲು ಕಾರ್ಪೊರೇಟ್ ನಾಯಕರು, ರಾಜಕಾರಣಿಗಳು ಮತ್ತು ಸೆಲೆಬ್ರಿಟಿಗಳ ಸಾಗರವೇ ನೆರೆದಿತ್ತು. ಭಾರತ ಸರ್ಕಾರದ ಪರವಾಗಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಎನ್ಸಿಪಿಎಯಲ್ಲಿ ಕ್ರಾಂತಿಕಾರಿ ಕೈಗಾರಿಕೋದ್ಯಮಿ ರತನ್ ಟಾಟಾ ಅವರಿಗೆ ಅಂತಿಮ ನಮನ ಸಲ್ಲಿಸಿದರು.
ಸಂಘರ್ಷ, ಉದ್ವಿಗ್ನತೆಯ ಸಮಯದಲ್ಲಿ ಭಾರತ-ಆಸಿಯಾನ್ ಸ್ನೇಹ ಮುಖ್ಯ : ಪ್ರಧಾನಿ ಮೋದಿ
ED ಬಾರದೆ ಇದ್ದಲ್ಲಿ ವಾಲ್ಮೀಕಿ ನಿಗಮದ ಹಗರಣ ಮುಚ್ಚಿ ಹೋಗುತ್ತಿತ್ತು: ಮಾಜಿ ಶಾಸಕ ರಾಜಕುಮಾರ ಪಾಟೀಲ ತೇಲ್ಕೂರ
ED ಬಾರದೆ ಇದ್ದಲ್ಲಿ ವಾಲ್ಮೀಕಿ ನಿಗಮದ ಹಗರಣ ಮುಚ್ಚಿ ಹೋಗುತ್ತಿತ್ತು: ಮಾಜಿ ಶಾಸಕ ರಾಜಕುಮಾರ ಪಾಟೀಲ ತೇಲ್ಕೂರ