ನವದೆಹಲಿ: ನ್ಯಾಷನಲ್ ಕಾನ್ಫರೆನ್ಸ್ ಶಾಸಕಾಂಗ ಪಕ್ಷದ ನಾಯಕರಾಗಿ ಒಮರ್ ಅಬ್ದುಲ್ಲಾ ಅವರನ್ನ ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ ಎಂದು ಪಕ್ಷದ ಮುಖ್ಯಸ್ಥ ಫಾರೂಕ್ ಅಬ್ದುಲ್ಲಾ ಗುರುವಾರ ಪ್ರಕಟಿಸಿದ್ದಾರೆ.
“ಶಾಸಕಾಂಗ ಪಕ್ಷದ ಸಭೆ ನಡೆಯಿತು, ಅಲ್ಲಿ ಎಲ್ಲರೂ ಒಮರ್ ಅಬ್ದುಲ್ಲಾ ಅವರನ್ನ ಪಕ್ಷದ ನಾಯಕರಾಗಿ ಸರ್ವಾನುಮತದಿಂದ ಆಯ್ಕೆ ಮಾಡಿದರು” ಎಂದು ಅವರು ತಿಳಿಸಿದ್ದಾರೆ.
ಹೊಸ ಸರ್ಕಾರ ರಚಿಸುವ ಪ್ರಕ್ರಿಯೆಯನ್ನು ಮುಂದುವರಿಸಲು ಚುನಾವಣಾ ಪೂರ್ವ ಮೈತ್ರಿ ಸದಸ್ಯರ ಸಭೆಯನ್ನು ಶುಕ್ರವಾರ ನಿಗದಿಪಡಿಸಲಾಗಿದೆ ಎಂದು ಅವರು ಘೋಷಿಸಿದರು.
ಇದಕ್ಕೂ ಮುನ್ನ, ನ್ಯಾಷನಲ್ ಕಾನ್ಫರೆನ್ಸ್ (NC)ನಿಂದ ಹೊಸದಾಗಿ ಆಯ್ಕೆಯಾದ ಶಾಸಕರು ಪಕ್ಷದ ಪ್ರಧಾನ ಕಚೇರಿ ನವಾ-ಇ-ಸುಬಾದಲ್ಲಿ ಸಭೆ ಸೇರಿ ತಮ್ಮ ನಾಯಕನನ್ನ ಆಯ್ಕೆ ಮಾಡಿದರು. ಒಮರ್ ಜಮ್ಮು ಮತ್ತು ಕಾಶ್ಮೀರದ ಮುಂದಿನ ಮುಖ್ಯಮಂತ್ರಿಯಾಗಲಿದ್ದಾರೆ.
BREAKING : ಸ್ಪೇನ್ ಟೆನಿಸ್ ದಂತಕತೆ ‘ರಾಫೆಲ್ ನಡಾಲ್’ ನಿವೃತ್ತಿ ಘೋಷಣೆ | Rafael Nadal retires
ದೇವನಹಳ್ಳಿ ಕೆಐಎಡಿಬಿ ಭೂಹಗರಣ ಆರೋಪ: ಸಮಗ್ರ ತನಿಖೆಗೆ ಸಿ.ಟಿ.ರವಿ ಆಗ್ರಹ
Watch Video : ‘ಗರ್ಬಾ ನೃತ್ಯ’ ನಿಲ್ಲಿಸಿ ಉದ್ಯಮಿ ‘ರತನ್ ಟಾಟಾ’ ಸಂತಾಪ ; ಹೃದಯಸ್ಪರ್ಶಿ ವೀಡಿಯೋ ವೈರಲ್