ಕೋಲಾರ : ರಾಜ್ಯದಲ್ಲಿ ಮತ್ತೊಂದು ಪೈಶಾಚಿಕ ಕೃತ್ಯ ನಡೆದಿದ್ದು, ಮಹಿಳೆಯನ್ನು ಕೊಲೆ ಮಾಡಿ, ಶವದೊಂದಿಗೆ ಅತ್ಯಾಚಾರ ಮಾಡಿದ ಘಟನೆ ಬೆಳಕಿಗೆ ಬಂದಿದೆ.
ಕೋಲಾರ ಜಿಲ್ಲೆಯ ಮುಳಬಾಗಿಲು ತಾಳೂಕಿನ ಹೈದರಿನಗರದಲ್ಲಿ ಈ ಘಟನೆ ನಡೆದಿದ್ದು, ಆರೋಪಿ ಆಟೋಚಾಲಕ ಸೈಯ್ಯದ್ ಸುಹೇಲ್ ಎಂಬಾತ ಸುಶೀಲಮ್ಮ ಎಂಬ ಮಹಿಳೆಯನ್ನು ಕೊಲೆ ಮಾಡಿ ಬಳಿಕ ಅತ್ಯಾಚಾರ ಎಸಗಿರುವುದಾಗಿ ವರದಿಯಾಗಿದೆ.
ಸೆಪ್ಟೆಂಬರ್ 24 ರಂದು ಮುಳಬಾಗಿಲು ನಗರದ ಹೈದರಿನಗರದಲ್ಲಿ 50 ವರ್ಷದ ಸುಶೀಲಮ್ಮ ಎಂಬ ಮಹಿಳೆಯನ್ನು ಕೊಲೆ ಮಾಡಿ ಆಟೋ ಚಾಲಕ ಸೈಯ್ಯದ್ ಸುಹೇಲ್ ಬಳಿಕ ಶವದೊಂದಿಗೆ ಅತ್ಯಾಚಾರ ಮಾಡಿದ್ದ. ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ ಪೊಲೀಸರು ಇದೀಗ ಆರೋಪಿಯನ್ನು ಬಂಧಿಸಿದ್ದಾರೆ. ಮುಳಬಾಗಲು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.