ನವದೆಹಲಿ: ಹರಿಯಾಣದಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಗೆದ್ದ ದೇಶದ ಅತ್ಯಂತ ಶ್ರೀಮಂತ ಮಹಿಳೆ ಸಾವಿತ್ರಿ ಜಿಂದಾಲ್ ಅವರು ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಮತ್ತು ತ್ರಿಪುರಾದ ಮಾಜಿ ಮುಖ್ಯಮಂತ್ರಿ ಬಿಪ್ಲಬ್ ದೇಬ್ ಅವರನ್ನ ಭೇಟಿಯಾದ ನಂತರ ಬಿಜೆಪಿಗೆ ಬೆಂಬಲ ನೀಡಲು ಒಪ್ಪಿಕೊಂಡಿದ್ದಾರೆ. ಅವರು ಮತ್ತು ಈಗಾಗಲೇ ತಮ್ಮ ಬೆಂಬಲವನ್ನು ಘೋಷಿಸಿರುವ ಇತರ ಇಬ್ಬರು ಸ್ವತಂತ್ರರೊಂದಿಗೆ, ರಾಜ್ಯ ವಿಧಾನಸಭೆಯಲ್ಲಿ ಬಿಜೆಪಿಯ ಸಂಖ್ಯೆ 51 ಕ್ಕೆ ತಲುಪಿದೆ.
ಬಿಜೆಪಿಯ ಕುರುಕ್ಷೇತ್ರ ಸಂಸದ ನವೀನ್ ಜಿಂದಾಲ್ ಅವರ ತಾಯಿ ಸಾವಿತ್ರಿ ಜಿಂದಾಲ್ ಅವರು ಬಿಜೆಪಿಯ ಕಮಲ್ ಗುಪ್ತಾ ವಿರುದ್ಧ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು.
2013ರಲ್ಲಿ ಭೂಪಿಂದರ್ ಹೂಡಾ ಅವರ ಸರ್ಕಾರದ ಭಾಗವಾಗಿದ್ದ 74 ವರ್ಷದ ಸಾವಿತ್ರಿ ಜಿಂದಾಲ್, ಮಾರ್ಚ್ನಲ್ಲಿ ಅವರ ಮಗ ಪಕ್ಷಾಂತರಗೊಂಡಾಗ ಕಾಂಗ್ರೆಸ್’ನಿಂದ ಬೇರ್ಪಟ್ಟರು.
ಇದಕ್ಕೂ ಮುನ್ನ ಸ್ವತಂತ್ರ ಶಾಸಕರಾದ ದೇವೇಂದರ್ ಕಡ್ಯಾನ್ ಮತ್ತು ರಾಜೇಶ್ ಜೂನ್ ಅವರು ಕೇಂದ್ರ ಸಚಿವ ಮತ್ತು ಹರಿಯಾಣ ಉಸ್ತುವಾರಿ ಧರ್ಮೇಂದ್ರ ಪ್ರಧಾನ್ ಅವರ ಮನೆಯಲ್ಲಿ ರಾಜ್ಯ ಬಿಜೆಪಿ ಮುಖ್ಯಸ್ಥ ಮೋಹನ್ ಲಾಲ್ ಬಡೋಲಿ ಅವರ ಸಮ್ಮುಖದಲ್ಲಿ ಬಿಜೆಪಿಗೆ ಸೇರಿದರು.