ಕಲಬುರಗಿ : ಕಲಬುರಗಿಯಲ್ಲಿ ಶಾಲಾ ಬಸ್ ಅಡ್ಡಾದಿಡ್ಡಿ ಚಲಾಯಿಸಿ ಸರಣಿ ಅಪಘಾತ ಸಂಭವಿಸಿರುವ ಘಟನೆ ನಡೆದಿದ್ದು, ಹಲವರು ಗಾಯಗೊಂಡಿದ್ದಾರೆ.
ಕಲಬುರಗಿ ನಗರದ ಶಾಹಾಬಾದ್ ರಿಂಗ್ ರಸ್ತೆಯಲ್ಲಿ ಸರಣಿ ಅಪಘಾತ ಸಂಭವಿಸಿದ್ದು, ಶಾಲಾ ಬಸ್ ವೊಂದು 2 ಕಾರು, 2 ಆಟೋ ಹಾಗೂ 3 ಬೈಕ್ ಗಳಿಗೆ ಗುದ್ದಿದೆ. ಸ್ಕೂಲ್ ಬಸ್ ಗುದ್ದಿದ ಪರಿಣಾಮಾ ಆಟೋ ಪಲ್ಟಿಯಾಗಿದೆ. ಅಪಘಾತದಲ್ಲಿ ಹಲವರಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.
ಶಾಲಾ ಬಸ್ ನಲ್ಲಿ 20 ಕ್ಕೂ ಹೆಚ್ಚು ವಿದ್ಯಾರ್ಥಿಗಳಿದ್ದರು ಎನ್ನಲಾಗಿದ್ದು, ಅಡ್ಡಾದಿಡ್ಡಿ ಶಾಲಾ ಬಸ್ ಚಲಾಯಿಸಿದ ಚಾಲಕನನ್ನು ಹಿಡಿದು ಸಾರ್ವಜನಿಕರು ಥಳಿಸಿದ್ದಾರೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ.