ನವದೆಹಲಿ : ಹರಿಯಾಣ ವಿಧಾನಸಭಾ ಚುನಾವಣೆಯ ಮತ ಎಣಿಕೆಯ ದತ್ತಾಂಶವನ್ನ ಚುನಾವಣಾ ಆಯೋಗದ ವೆಬ್ಸೈಟ್ಗೆ ಅಪ್ಲೋಡ್ ಮಾಡುವುದನ್ನ ನಿಧಾನಗೊಳಿಸಲಾಗಿದೆ ಎಂಬ ಕಾಂಗ್ರೆಸ್ ಆರೋಪವನ್ನ ಚುನಾವಣಾ ಆಯೋಗ ಮಂಗಳವಾರ ತಿರಸ್ಕರಿಸಿದೆ.
ಚುನಾವಣಾ ಆಯೋಗದ ವೆಬ್ಸೈಟ್ನಲ್ಲಿ ನವೀಕೃತ ಪ್ರವೃತ್ತಿಗಳನ್ನ ಅಪ್ಲೋಡ್ ಮಾಡುವುದು ನಿಧಾನಗತಿಯಲ್ಲಿದೆ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಮತ್ತು ಸಂವಹನ ಉಸ್ತುವಾರಿ ಜೈರಾಮ್ ರಮೇಶ್ ಆರೋಪಿಸಿದ ನಂತರ ಚುನಾವಣಾ ಆಯೋಗದ ಹೇಳಿಕೆ ಬಂದಿದೆ.
“ಫಲಿತಾಂಶಗಳನ್ನು ನವೀಕರಿಸುವಲ್ಲಿ ಮಂದಗತಿಯ ಬಗ್ಗೆ ನಿಮ್ಮ ತಪ್ಪು ಸ್ಥಾಪಿತ ಆರೋಪವನ್ನು ದೃಢೀಕರಿಸಲು ಯಾವುದೇ ದಾಖಲೆಗಳಿಲ್ಲ. ಹರಿಯಾಣ ಅಥವಾ ಜಮ್ಮು ಮತ್ತು ಕಾಶ್ಮೀರದ ಯಾವುದೇ ಕ್ಷೇತ್ರಗಳಲ್ಲಿನ ವಿಳಂಬದ ಬಗ್ಗೆ ನಿಮ್ಮ ಜ್ಞಾಪಕ ಪತ್ರವು ಯಾವುದೇ ವ್ಯತಿರಿಕ್ತ ಸಂಗತಿಗಳನ್ನು ಹೊರತರುವುದಿಲ್ಲ” ಎಂದು ಚುನಾವಣಾ ಆಯೋಗ ಟಿಪ್ಪಣಿಯಲ್ಲಿ ತಿಳಿಸಿದೆ.
ಮಂಗಳವಾರ ಹರಿಯಾಣ ವಿಧಾನಸಭಾ ಚುನಾವಣಾ ಫಲಿತಾಂಶದ ಆರಂಭಿಕ ಪ್ರವೃತ್ತಿಗಳಲ್ಲಿ ಕಾಂಗ್ರೆಸ್ ಮುಂದಿದ್ದು, ನಂತ್ರ ಬಿಜೆಪಿ ಮುನ್ನುಗ್ಗಿ ಗೆದ್ದಿದೆ. ಬಿಜೆಪಿ ಮ್ಯಾಜಿಕ್ ನಂಬರ್ ದಾಟಿದ ನಂತ್ರ ಕಾಂಗ್ರೆಸ್ ಈ ಆರೋಪಗಳನ್ನ ಮಾಡಿದೆ.
ನಟ ದರ್ಶನ್ ಬೆನ್ನು ಮೂಳೆಯ L1, L5 ಭಾಗದಲ್ಲಿ ವಿಪರೀತ ಊತ, ನೋವು : ವೈದ್ಯರ ಸಲಹೆಗೆ ಕ್ಯಾರೇ ಎನ್ನದ ದಾಸ!